Breaking News

ಅ.14 : ಕಮಿಲಡ್ಕ ದುರ್ಗಾದೇವಿ ಮಂದಿರದಲ್ಲಿ ಮಹಾನವರಾತ್ರಿ ಉತ್ಸವ

Advt_Headding_Middle

 

ದುರ್ಗಾದೇವಿ ಮತ್ತು ಮಹಾವಿಷ್ಣು ಮೂರ್ತಿ ದೈವದ ದರ್ಶನ ಮತ್ತು ವಿಶೇಷ ಸೇವೆ

ಉಬರಡ್ಕ ಮಿತ್ತೂರು ಗ್ರಾಮದ ಕಮಿಲಡ್ಕ ಉದಯಗಿರಿ ಶ್ರೀ ದುರ್ಗಾದೇವಿ ಮಂದಿರ ಮತ್ತು ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಅ.14 ರಂದು ವರ್ಷಂಪ್ರತಿ ನಡೆಯುವ ಮಹಾನವರಾತ್ರಿ ಉತ್ಸವ ಹಾಗೂ ದೇವಿಯ, ದೈವದ ದರ್ಶನ ಮತ್ತು ವಿಶೇಷ ಸೇವೆಯು ಜರುಗಲಿರುವುದು. ಬೆಳಗ್ಗೆ ಸ್ಥಳೀಯ ಭಜಕರಿಂದ ಭಜನಾ ಸೇವೆ, ನಂತರ ಶ್ರೀ ದುರ್ಗಾದೇವಿಯ ಪಾತ್ರಿ ರವಿಪ್ರಸಾದ್ ಕಮಿಲಡ್ಕ ಹಾಗೂ ಶ್ರೀ ಮಹಾವಿಷ್ಣು ಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಇವರ ನೇತೃತ್ವದಲ್ಲಿ ದೇವಿಯ ಮತ್ತು ದೈವದ ದರ್ಶನ ನಡೆಯಲಿರುವುದು. ಬಳಿಕ ದೈವದ ಮಾರಿಕಳ ಪ್ರವೇಶವಾಗಿ ಕ್ಷೇತ್ರದಲ್ಲಿ ಹರಕೆಯ ತುಲಾ ಭಾರ ಸೇವೆಯಾಗಲಿರುವುದು. ಈ ಸಂದರ್ಭ ಪ್ರೇತ ಉಚ್ಚಾಟನೆ ಹಾಗೂ ದೇವಿಗೆ, ದೈವಕ್ಕೆ ಪ್ರಾರ್ಥಿಸಿದ ಹರಕೆಯನ್ನು ಒಪ್ಪಿಸಲಾಗುವುದು. ನಂತರ ಆಗಮಿಸಿದ ಭಗವದ್ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುವುದು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು.
ಹರಕೆ ಸಮರ್ಪಿಸುವವರು ಹಾಗೂ ತುಲಾಭಾರ ಸೇವೆಯನ್ನು ಮಾಡಿಸುವ ಭಕ್ತಾದಿಗಳು ಕ್ಷೇತ್ರದಲ್ಲಿ ಮುಂಚಿತವಾಗಿ ತಿಳಿಸುವಂತೆ ಶ್ರೀ ದೇವಿಯ ಪಾತ್ರಿ ರವಿಪ್ರಸಾದ್ ಕಮಿಲಡ್ಕ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.