ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ ಸಂಘದ ಮಹಾಸಭೆ

Advt_Headding_Middle

 

ರೂ. 5295825  ಲಾಭಾಂಶ. ಶೇ.7 ಡೆವಿಡೆಂಡು ಘೋಷಣೆ

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ ಸಂಘದ ಮಹಾಸಭೆಯು ಇಂದು ಕೊಲ್ಲಮೊಗ್ರದ ಮಯೂರ ಕಲಾ ಮಂದಿರದಲ್ಲಿ ನಡೆಯಿತು. ಪ್ರಸಕ್ತ ವರ್ಷ ಸಂಸ್ಥೆಯು ರೂ. 5295825  ಲಾಭಾಂಶ ಪಡೆದಿದ್ದು’ ಸದಸ್ಯರುಗಳಿಗೆ ಶೇ.೭ ಡೆವಿಡೆಂಡು ಹಂಚಲಾಗುವುದು ಎಂದು ಸಭಾಧ್ಯಕ್ಷತೆಯನ್ನು ವಹಿಸಿರುವ ಸಂಘದ ಅಧ್ಯಕ್ಷ ವಿನೂಪ್ ಮಲ್ಲಾರ ಘೋಷಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಮಣಿಕಂಠ ಕಟ್ಟ, ನಿರ್ದೇಶಕರುಗಳಾದ ಹರ್ಷಕುಮಾರ್ ಡಿ.ಎಸ್, ತಾರಾನಾಥ ಮುಂಡಾಜೆ, ಗಿರೀಶ್ ಕೆ.ಎಸ್, ಶೇಖರ ಎ.ಯಂ, ಶ್ರೀಮತಿ ವಿಜಯ ಕೆ.ಜೆ, ಶ್ರೀಮತಿ ವಿಜಯ ಕೆ.ಯಸ್, ರಾಜೇಶ ಪಿ.ಯಸ್, ಸುರೇಶ ಕೆ, ಮೋನಪ್ಪ ಕೆ, ಬೊಳಿಯ ಬೆಂಡೋಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಗೌಡ ಕೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ, ಆಂತರಿಕ ಲೆಕ್ಕಪರಿಶೋಧಕ ಜನಾರ್ದನ ಗುಂಡಿಹಿತ್ಲು ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ವತಿಯಿಂದ ಸೂಪರ್‌ಮಾರ್ಕೆಟ್ ಆರಂಭಿಸಲು ಸಲಹೆ ಬಂದಿದ್ದು ಸೂಕ್ತ ಸ್ಥಳವಕಾಶ ದೊರೆತಲ್ಲಿ ಸೂಪರ್‌ಮಾರ್ಕೆಟ್ ಮಾಡುವುದಾಗಿ ಅಧ್ಯಕ್ಷ ವಿನೂಪ್ ಮಲ್ಲಾರ ತಿಳಿಸಿದರು. ಸಂಘದ ವತಿಯಿಂದ ಪೆಟ್ರೋಲ್ ಬಂಕ್ ಆರಂಭಿಸಲು ಸಲಹೆ ಬಂದಿರುತ್ತದೆ. ೨೦೨೪ರಲ್ಲಿ ಸಂಘವು ಶತಮಾನೋತ್ಸವ ಆಚರಿಸಲಿದ್ದು ಸದ್ಯವೇ ಶತಮಾನೋತ್ಸವ ಆಚರಣಾ ಸಲುವಾಗಿ ಸಲುವಾಗಿ ಸಭೆ ಕರೆಯುವುದಾಗಿ ನಿರ್ಣಯಿಸಲಾಯಿತು. ವಿನೂಪ್ ಮಲ್ಲಾರ ಸ್ವಾಗತಿಸಿ, ಅನಂತರಾಮ ಮಣಿಯಾನ ಮನೆ ವಂದಿಸಿದರು.

ವರದಿ: ಕುಶಾಲಪ್ಪ ಕಾಂತುಕುಮೇರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.