Breaking News

ಅ.16 ರಿಂದ ನ 14: ಸುಳ್ಯ ರಾಮ ಭಜನಾ ಮಂದಿರದಲ್ಲಿ ಲೋಕಕಲ್ಯಾಣಾರ್ಥ ಒಂದು ತಿಂಗಳು ಸಂಧ್ಯಾ ಕಾಲದ ಭಜನಾ ಸಂಕೀರ್ತನೆ

Advt_Headding_Middle

 

 

ಸುಳ್ಯದ ಶ್ರೀರಾಂಪೇಟೆಯಲ್ಲಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ ಅ. 16 ರಿಂದ ನ.14 ರ ತನಕ ಲೋಕಕಲ್ಯಾಣಾರ್ಥವಾಗಿ ಒಂದು ತಿಂಗಳ ಕಾಲ ಸಂಧ್ಯಾ ಕಾಲದ ಭಜನಾ ಕಾರ್ಯಕ್ರಮ ನಡೆಯಲಿರುವುದು.
ಅ 16 ರಂದು ಭಜನಾ ಸಂಕೀರ್ತನೆಯ ಉದ್ಘಾಟನೆಯನ್ನು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ ರವರು ನೆರವೇರಿಸಲಿದ್ದಾರೆ. ಮಂದಿರದ ಧರ್ಮ ದರ್ಶಿ ಮಂಡಳಿಯ ನಿರ್ದೇಶಕ ಪ್ರದೀಪ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ.
ಇತಿಹಾಸ ಪ್ರಸಿದ್ಧ ಸುಳ್ಯದ ಶ್ರೀ ರಾಮ ಭಜನಾ ಮಂದಿರದ ಸ್ಥಾಪನೆಯು ಲೋಕಕ್ಕೆ ಕಂಟಕ ಬಾಧಿಸಿದ ಸಮಯದಲ್ಲಿ ಹಿರಿಯರು ಪ್ರಾರ್ಥಿಸಿ ನಿರ್ಮಿಸಲಾಗಿದೆ ಎಂಬುದು ಉಲ್ಲೇಖನೀಯ. ಇದೀಗ ಮತ್ತೆ ಜಗತ್ತಿಗೆ ಬಾಧಿಸಿರುವ ಕಂಟಕ ಪರಿಹಾರಾರ್ಥವಾಗಿ ಒಂದು ತಿಂಗಳ ಭಜನಾ ಸಂಕೀರ್ತನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ದಿನ ಸಂಜೆ ಗಂಟೆ 7.00 ರಿಂದ ರಾತ್ರಿ 8.30 ರ ತನಕ ಭಜನೆಯು ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ನಡೆಯಲಿರುವುದು. ಬಳಿಕ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಲಿರುವುದು. ನ.14 ರಂದು ಸಮಾರೋಪ ಸಮಾರಂಭವು ಮಂದಿರದ ಆಡಳಿತ ಧರ್ಮ ದರ್ಶಿ ಕೆ.ಉಪೇಂದ್ರ ಪ್ರಭುರವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಬಳಿಕ ಆಹ್ವಾನಿತ ಭಜನಾ ತಂಡದ ಸದಸ್ಯರಿಂದ ಭಜನಾ ಸಂಕೀರ್ತನೆಯು ನಡೆಯಲಿರುವುದು ಎಂದು ಸಂಘಟಕರು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.