Breaking News

ಬಾಳಿಲದಲ್ಲಿ ನಿರಂತರವಾಗಿ ಕೈಕೊಡುತ್ತಿರುವ ನೆಟ್ವರ್ಕ್ ಕೂಡಲೇ ಸರಿಪಡಿಸಬೇಕು: ಶರೀಫ್ ಭಾರತ್ ಬಾಳಿಲ

Advt_Headding_Middle

 

ಸುಳ್ಯ ತಾಲೂಕಿನ ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮೊಬೈಲ್ ಟವರ್ ಬಿಎಸ್ಎನ್ಎಲ್ ಮತ್ತು ಏರ್ಟೆಲ್ ಕಂಪನಿಯ ಟವರ್ಗಳಲ್ಲಿ ನಿರಂತರವಾಗಿ ನೆಟ್ವರ್ಕ್ ಕೈಕೊಡುತ್ತಿದೆ. ಪ್ರತೀ ಮಂಗಳವಾರ ವಿದ್ಯುತ್ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ಆ ದಿನ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದರಿಂದ ದಿನವಿಡೀ ನೆಟ್ವರ್ಕ್ ಸಮಸ್ಯೆ ಕಾಡುತ್ತದೆ. ಉಳಿದಂತೆ ದೊಡ್ಡ ಮಳೆ ಅಥವಾ ಗುಡುಗು ಮಿಂಚು ಬಂದರೂ ಟವರ್ ಸ್ಥಬ್ಧವಾಗುತ್ತದೆ ಇದನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದರೂ ಸಮಸ್ಯೆ ಬಗೆಹರಿಯಲಿಲ್ಲ.ಆದ್ದರಿಂದ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದಲ್ಲಿ ಮುಂದೆ ಮೊಬೈಲ್ ಬಳಕೆದಾರರ ವೇದಿಕೆಯನ್ನು ಹುಟ್ಟುಹಾಕಿ ಹೋರಾಟ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ, ಆರ್ಟಿಐ ಕಾರ್ಯಕರ್ತ ಶರೀಫ್ ಭಾರತ್ ಬಾಳಿಲ ಪತ್ರಿಕೆಗೆ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.