Breaking News

ಕೆ.ವಿ.ಜಿ ಕಾಲೇಜ್ ಆಫ್ ಇಂಜಿನಿಯರಿಂಗ್ ಸುಳ್ಯ: ಹೊಸ ಕೋರ್ಸು ಮತ್ತು ಪ್ರವೇಶಕ್ಕೆ ವಿ.ಟಿ.ಯು. ಬೆಳಗಾವಿಯಿಂದ ಅನುಮೋದನೆ

Advt_Headding_Middle

 

ಕೇಂದ್ರ ಸರಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ, ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯುನಿವರ್ಸಿಟಿ (ವಿ.ಟಿ.ಯು.), ಬೆಳಗಾವಿ ಇದರ ಸಂಯೋಜನೆಗೆ ಒಳಪಟ್ಟ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 4  ವರ್ಷದB.Sc. (Honors) Specialisation in (Artificial Intelligence(AI)/ Internet of Things (IoT)) ಕೋರ್ಸನ್ನು 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ವಿಶ್ವವಿದ್ಯಾಲಯವು ಕಾಲೇಜನ್ನು ಆಯ್ಕೆ ಮಾಡಿರುತ್ತದೆ. B.Sc. (Honors) ಕೋರ್ಸ್‌ಗೆ ದಾಖಲಾತಿ ಪ್ರಾರಂಭವಾಗಿದ್ದು ಆಸಕ್ತ ವಿದ್ಯಾರ್ಥಿಗಳು ಕಾಲೇಜನ್ನು ಸಂಪರ್ಕಿಸಬಹುದು. ಈ ಕೋರ್ಸುಗಳಿಗೆ ವಿದ್ಯಾರ್ಥಿಗಳು ಸೇರ್ಪಡೆಗೊಂಡಲ್ಲಿ ಈ ಕೆಳಗೆ ತಿಳಿಸಿದ ಪದವಿಗಳು/ಸರ್ಟಿಫಿಕೇಟ್‌ಗಳು ವಿಶ್ವವಿದ್ಯಾಲಯದಿಂದ (ವಿ.ಟಿ.ಯು) ದೊರಕಲಿದೆ. ಪ್ರತೀ ವರ್ಷದಲ್ಲೂ ವಿದ್ಯಾರ್ಥಿಗಳು ಮೂಲವಿಜ್ಞಾನದೊಂದಿಗೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ವಿಷಯಗಳನ್ನು ಅಧ್ಯಯನ ಮಾಡಲು ಅವಕಾಶವಿದೆಯೆಂದು ಹಾಗೂ ಕೇಂದ್ರ ಸರಕಾರವು ಇಂತಹ ಹೊಸ ಕೌಶಲ್ಯ ಆಧಾರಿತ ಶಿಕ್ಷಣ ನೀತಿಯನ್ನು ಜಾರಿಗೆ ತಂದಿರುವುದರಿಂದಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅವರ ಅರ್ಹತೆ ಮತ್ತು ಕೌಶಲ್ಯಕ್ಕೆ ತಕ್ಕನಾದ ಉತ್ತಮ ವೃತ್ತಿಗಳನ್ನು ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಎ.ಒ.ಎಲ್.ಇ.(ರಿ) ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಎ. ಜ್ಞಾನೇಶ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೃತೀಯ ವರ್ಷ (3rd Year) ಪೂರೈಕೆಯ ನಂತರ ಬಿ.ಎಸ್ಸಿ. ಪದವಿ
ನಾಲ್ಕನೇ ವರ್ಷ (4th Year)  ಪೂರೈಕೆಯ ನಂತರ ಬಿ.ಎಸ್ಸಿ. (Honors) ಪದವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.