Breaking News

ದುಗಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟಡ ಕ್ಷೀರ ಸಂಗಮ ಮತ್ತು ಸಾಂದ್ರ ಶೀತಲೀಕರಣ ಘಟಕ ಉದ್ಘಾಟನೆ

Advt_Headding_Middle

ಯುವಕರಿಗೆ ಸ್ವ ಉದ್ಯೋಗಕ್ಕೆ ಇಲಾಖೆಯಿಂದ ವಿಶೇಷ ಕಾರ್ಯಕ್ರಮ; ಸಚಿವ ಎಸ್.ಅಂಗಾರ

ಮಹಿಳೆಯರ ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಅನಿವಾರ್ಯ; ರವಿರಾಜ ಹೆಗ್ಡೆ

ದುಗಲಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟಡ ಕ್ಷೀರ ಸಂಗಮ ಮತ್ತು ಸಾಂದ್ರ ಶೀತಲಿಕರಣ ಘಟಕ ಉದ್ಘಾಟನೆಗೊಂಡಿದೆ.ಸಭಾ ಕಾರ್ಯಕ್ರಮ ದುಗಲಡ್ಕ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡವನ್ನು ದುಗಲಡ್ಕ ಪೇಟೆಯಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿದ್ದು,ದ.ಕ.ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ರವಿರಾಜ ಹೆಗ್ಡೆ ನೂತನ ಕಟ್ಟಡವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ದುಗ್ಗಲಡ್ಕದಲ್ಲಿ ಒಕ್ಕೂಟದ 133 ನೇ ಘಟಕ ಶುಭಾರಂಭಗೊಂಡಿದೆ.ಮಹಿಳೆಯರ ಸ್ವಾವಲಂಬಿ ಜೀವನದಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸಿದೆ. ಆ ಮೂಲಕ ಗ್ರಾಮೀಣಾಭಿವೃದ್ದಿ ಸಾಧ್ಯವಾಗಿದೆ.ಕೊರೋನ ಸಂದರ್ಭದಲ್ಲಿಯೂ ಕೃಷಿಕರಿಗೆ,ಹೈನುಗಾರರಿಗೆ ಯಾವುದೇ ತೊಂದರೆಯಾಗಲಿಲ್ಲ.ಅವಕಾಶ ಸಿಕ್ಕಿದರೆ ಮಹಿಳೆಯರು ಸಾಧನೆ ಮಾಡುವರು ಎಂಬುವುದಕ್ಕೆ ದುಗ್ಗಲಡ್ಕ ಸಾಕ್ಷಿ , ಮಾರುಕಟ್ಟೆಯಲ್ಲಿ ಗುಣ್ಣಮಟ್ಟವನ್ನು ಕಾಯ್ದುಕೊಂಡು ಪೈಪೋಟಿ ನೀಡಬೇಕಾಗುತ್ತದೆ ಎಂದು ಹೇಳಿದರು.ಸಾಂದ್ರ ಶೀತಲಿಕರಣವನ್ನು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಉದ್ಘಾಟಿಸಿ ಮಾತನಾಡಿ ಹೈನುಗಾರಿಕೆಯಿಂದಾಗಿ ನೂರಾರು ಮಂದಿ ಜೀವನ ಕಟ್ಟಿಕೊಂಡಿದ್ದಾರೆ.ಯುವಕರು ಸ್ವ ಉದ್ಯೋಗದ ಕಡೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು,ಮೀನುಗಾರಿಕೆ ಇಲಾಖೆಯಿಂದ ಮೀನುಗಾರಿಕೆ ಮತ್ತು ಮುತ್ತು ಕೃಷಿಗೆ ಉತ್ತೇಜನ ನೀಡಲು ಸರಕಾರ ಕಾರ್ಯಕ್ರಮ ಜಾರಿಗೆ ತರುತ್ತಿದೆ.ಎಂದು ಹೇಳಿದರು. ನಾಮಫಲಕವನ್ನು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಅನಾವರಣ ಮಾಡಿದರು.ಮುಖ್ಯ ಅತಿಥಿಗಳಾಗಿ ದ.ಕ.ಹಾಲು ಒಕ್ಕೂಟದ ನಿರ್ದೇಶಕರುಗಳಾದ ನಾರಾಯಣ ಪ್ರಕಾಶ್ ಕೆ.,ಎಸ್.ಬಿ‌.ಜಯರಾಮ ರೈ,ಶ್ರೀಮತಿ ಸವಿತಾ ಎನ್.ಶೆಟ್ಟಿ,ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೆನ್ನಕೇಶವ ಉಪಸ್ಥಿತರಿದ್ದರು. ಒಕ್ಕೂಟದ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ,ಉಪವ್ಯವಸ್ಥಾಪಕ ಡಾ.ಸತೀಶ್ ರಾವ್, ರಾಮಕೃಷ್ಣ ಭಟ್, ಸಂಘದ ಸ್ಥಾಪಕಾಧ್ಯಕ್ಷೆ ಶ್ರೀಮತಿ ವಾರಿಜ ಕೊರಗಪ್ಪ ಗೌಡ,ನ.ಪಂ.ಸದಸ್ಯರುಗಳಾದ ಶ್ರೀಮತಿ ಶಶಿಕಲಾ ನೀರಬಿದಿರೆ, ಬಾಲಕೃಷ್ಣ ರೈ ದುಗಲಡ್ಕ, ಕಟ್ಟಡದ ಉಸ್ತುವಾರಿ ವಹಿಸಿಕೊಂಡ ಸಂಘದ ನಿಕಟ ಪೂರ್ವಾಧ್ಯಕ್ಷೆ ಶ್ರೀಮತಿ ಭಾರತಿ ಕೆ.ಎಸ್.,ಸುಳ್ಯ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಎನ್.ಜಿ.ಅಧ್ಯಕ್ಷತೆ ವಹಿಸಿದ್ದರು.ಜಲಜಾಕ್ಷಿ ಎನ್.ಜಿ.ಸ್ವಾಗತಿಸಿದರು.ನಿಕಟಪೂರ್ವಾಧ್ಯಕ್ಷ ಶ್ರೀಮತಿ ಭಾರತಿ ಕೆ.ಎಸ್.ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ಶ್ರೀಮತಿ ಪ್ರಿಯಾ ಸದಾನಂದ ವರದಿ ವಾಚಿಸಿದರು.ಸಂಘದ ಉಪಾಧ್ಯಕ್ಷೆ ಶ್ರೀಮತಿ ಉಷಾ ಶಿವರಾಮ ವಂದಿಸಿದರು.ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ಶ್ರೀಮತಿ ಅರುಣ ಮತ್ತು ಶ್ರೀಮತಿ ನಯನ ಶೇಖರ್ ಸಹಕರಿಸಿದರು.
ಸನ್ಮಾನ- ಗೌರವಾರ್ಪಣೆ
ಸಮಾರಂಭ ಭಾಗವಹಿಸಿದ್ದ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ರವರನ್ನು ಹಾಲು ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ನೂತನ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಕೇಶವ ಸುಳ್ಳಿ ಹಾಗೂ ಸಂಘದ ಸ್ಥಾಪಕ ಅಧ್ಯಕ್ಷರಾದ ವಾರಿಜಾ ಕೊರಗಪ್ಪ ಗೌಡ ಕೊಯಿಕುಳಿ,ಮಾಜಿ ಅಧ್ಯಕ್ಷರು, ಕಟ್ಟಡದ ಉಸ್ತುವಾರಿ ವಹಿಸಿಕೊಂಡ ಶ್ರೀಮತಿ ಭಾರತಿ ಕೆ.ಎಸ್.,ಮಾಜಿ ಅಧ್ಯಕ್ಷರಾದ ಹೇಮಾವತಿ ಕೊಯಿಕುಳಿ ಮತ್ತು ಕಟ್ಟಡಕ್ಕೆ ವಿಶೇಷ ಅನುದಾನ ನೀಡಿದ ಶ್ರೀಮತಿ ಗೀತಾ ಶಂಭಯ್ಯ ಪಾರೆಯವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.