Breaking News

ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಸಾಧಕರಿಗೆ ಸನ್ಮಾನ

Advt_Headding_Middle

ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

ಅರಂತೋಡು ಸಹಕಾರಿ ಸಂಘದ ಸಿರಿಸೌಧದಲ್ಲಿ ಅ. 9 ರಂದು ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಕೋವಿಡ್ ನಿಂದ ಸಾವನ್ನಪ್ಪಿದ ವ್ಯಕ್ತಿಗಳ ಶವ ಸಂಸ್ಕಾರ ವನ್ನು ವಿಧಿ ವಿಧಾನ ನೊಂದಿಗೆ ನಿರ್ವಹಣೆ ಮಾಡಿದ ಕಾರ್ಯಕ್ಕೆ ಭಜರಂಗದಳದ ಸದಸ್ಯರನ್ನು ಹಾಗೂ ಪೈಚಾರಿನ ಮುಳುಗು ತಜ್ಞ ಬಶೀರ್ ಆರ್.ಬಿ.ತಂಡಗಳಿಗೆ ನೃತ್ಯ ದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ತೊಡಿಕಾನ ಗ್ರಾಮದ ಉದಯ ಮಯ್ಯ ಮತ್ತು ಶಶಿಕಲಾರವರ ಪುತ್ರಿ ಧನ್ಯ ಮಯ್ಯ ಮತ್ತು ವೇಗದ ನಡಿಗೆಯಲ್ಲಿ ಭಾಗವಹಿಸಲು ಆಯ್ಕೆ ಪಡೆದ ಸುಶ್ಮಿತಾ ಬೆದ್ರ್ ಪಣೆ ಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ದಯಾನಂದ ಕುರುಂಜಿ, ಕುಸುಮಾಧರ ಅಡ್ಕಬಳೆ, ವಿನೋದ್ ಕುಮಾರ್ ಉಳುವಾರು ,ಚಂದ್ರಶೇಖರ್ ಜೋಡಿಪಣೆ, ಸಂತೋಷ್ ತೊಡಿಕಾನ ,ನಿಧೀಶ್, ಸೋಮಯ್ಯ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್,ಶ್ರೀ ಮತಿ ಭಾರತಿ,ಶ್ರೀ ಮತಿ ಚಿತ್ರಾ ಶಶಿಧರ ದೇರಾಜೆ,ಗಣೇಶ್ ಕರಿಂಬಿ,ಕೇಶವ ಅಡ್ತಲೆ,ಬಾಲಕೃಷ್ಣ ಪುತ್ಯ, ವಿಜೇತ್ ಮರುವಳ ಮುಂತಾದವರು ಉಪಸ್ಥಿತರಿದ್ದರು .ಸ್ಪಂದನ ಗೆಳೆಯರ ಬಳಗ ಅಡ್ತಲೆ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.