Breaking News

ನಿಂತಿಕಲ್ಲು: ಬಲರಾಮ ಜಯಂತಿ ಆಚರಣೆ

Advt_Headding_Middle

ರೈತರ ಆರಾಧ್ಯ ದೇವ ಬಲರಾಮನ ಜಯಂತಿಯನ್ನು ಭಾರತೀಯ ಕಿಸಾನ್ ಸಂಘ ಎಣ್ಮೂರು ವಲಯದ ವತಿಯಿಂದ ಅ. 3ರಂದು ನಿಂತಿಕಲ್ ನ ಚಂದ್ರಬಾಗಿ ಕಾಂತಪ್ಪ ಶೆಟ್ಟಿ ಸಭಾಭವನದಲ್ಲಿ ಭಾಕಿಸಂ ಸುಳ್ಯ ತಾಲೂಕು ಇದರ ಅಧ್ಯಕ್ಷ ಎನ್.ಜಿ. ಪ್ರಭಾಕರ ರೈಯವರ ಅಧ್ಯಕ್ಷತೆಯಲ್ಲಿ ಸರಳವಾಗಿ ಆಚರಿಸಲಾಯಿತು. ಕರ್ನಾಟಕ ವಿಧಾನಪರಿಷತ್ತಿನ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ರೈತರು ನೇಗಿಲು ಹಿಡಿದು ಉಳುವುದು ಮಾತ್ರವಲ್ಲದೆ ಬಲರಾಮರ ಹಾಗೆ ಗಧೆಯನ್ನು ಹಿಡಿಯಲೂ ಕಲಿಯಬೇಕಾಗಿದೆ ಎಂದರು.


ನಿಂತಿಕಲ್ಲು 33ಕೆವಿ ವಿದ್ಯುತ್ ಸಬ್ ಸ್ಟೇಷನ್ ಅನುಷ್ಠಾನ ಹೋರಾಟ ಸಮಿತಿಯ ಅಧ್ಯಕ್ಷ ಪಿ. ರಾಮಚಂದ್ರ ಭಟ್ ರವರು ಮಾತನಾಡಿ ಸ್ಥಾವರಕ್ಕೆ ಬೇಕಾಗುವ ಸ್ಥಳವನ್ನು ಗುರುತಿಸಲಾಗಿದ್ದು, ಜಿಲ್ಲಾಧಿಕಾರಿಗಳ ಮಂಜೂರಾತಿ ಮಾತ್ರ ಬಾಕಿಯಿದೆ. ಆದಷ್ಟು ಶೀಘ್ರವಾಗಿ ಕಾರ್ಯಾರಂಭಗೊಳ್ಳಲಿ ಎಂದು ಆಗ್ರಹಿಸಿದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಎಮ್.ಜಿ. ಸತ್ಯನಾರಾಯಣರವರು ಮಾತನಾಡಿ ಕಾನ ಬಾಣೆ ಕುಮ್ಕಿ ಹಕ್ಕುಗಳದ್ದು ಪಟ್ಟಾ ಸ್ಥಳವಾಗಿ ಮಂಜೂರಾತಿ ಯಾಗುವ ಸಮಯ ಸನ್ನಿಹಿತವಾಗುವುದರಲ್ಲಿದೆ ಇದಕ್ಕೆ ಭಾರತೀಯ ಕಿಸಾನ್ ಸಂಘ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ ಎಂದರು. ಭಾಕಿಸಂ ಸುಳ್ಯ ತಾಲೂಕು ಸಮಿತಿಯ ನಿಕಟಪೂರ್ವ ಕಾರ್ಯದರ್ಶಿ ನೆಟ್ಟಾರು ಗೋಪಾಲಕೃಷ್ಣ ಭಟ್ ಮಾತನಾಡಿ ತಾವು ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ಸಂಘದ ಸದಸ್ಯರ ಸಹಕಾರದಿಂದ ವಿದ್ಯುತ್ ಬಳಕೆದಾರರಿಗೆ ದೊರೆತ ಪ್ರಯೋಜನ ಗಳನ್ನು ನೆನೆದು ಸದಸ್ಯರ ಸಹಕಾರಗಳಿಗೆ ಕೃತಜ್ಞತೆ ಸಲ್ಲಿಸಿದರು. ಭಾಕಿಸಂ ಸುಳ್ಯ ತಾಲೂಕು ಸಮಿತಿಯ ಕಾರ್ಯದರ್ಶಿ ಸಾಯಿ ಶೇಖರ, ಬಾಳಿಲ ಮುಪ್ಪೆರ್ಯದ ಕಾರ್ಯದರ್ಶಿ ಸಿ.ವಿ. ರಾಜಾರಾಮ, ಎಣ್ಮೂರು ವಲಯದ ಕಾರ್ಯದರ್ಶಿ ವಿ. ಯದುನಂದನ ಇವರುಗಳು ತಮ್ಮ ತಮ್ಮ ಸಮಿತಿಗಳ ವರದಿ ವಾಚಿಸಿದರು. ಎನ್.ಜಿ. ಪ್ರಭಾಕರ ರೈಯವರು ಸ್ವಾಗತಿಸಿ ಸಾಯಿ ಶೇಖರರವರು ವಂದಿಸಿದರು. ಎಣ್ಮೂರು ವಲಯದ ವಲಯದ ಅಧ್ಯಕ್ಷರಾದ ರಮೇಶ್ ಕೋಟೆಯವರು ಕಾರ್ಯಕ್ರಮ ನಿರೂಪಿಸಿದರು. ಭಾಕಿಸಂ ಬಾಳಿಲ ಮುಪ್ಪೇರ್ಯ ಸಮಿತಿಯ ಅಧ್ಯಕ್ಷ ಕರ್ವಂಕಲ್ಲು ಗೋಪಾಲಕೃಷ್ಣ ಭಟ್, ಗುತ್ತಿಗಾರು ಸಮಿತಿಯ ಅಧ್ಯಕ್ಷ ಗಂಗಾಧರ ಪುಚ್ಚಪ್ಪಾಡಿ, ಸಂಘದ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.