ಚೆಕ್ ಅಮಾನ್ಯ ಪ್ರಕರಣದ ಆರೋಪಿಗೆ ಶಿಕ್ಷೆ

Advt_Headding_Middle

 

 

ಸಾಲವಾಗಿ ಪಡೆದ ಹಣಕ್ಕೆ ಚೆಕ್ ನೀಡಿ ವಂಚಿಸಿದ ಪ್ರಕರಣದಲ್ಲಿ ಆರೋಪಿಗೆ‌ ನ್ಯಾಯಾಲಯವು ಶಿಕ್ಷೆ ವಿಧಿಸಿರುವುದಾಗಿ ತಿಳಿದುಬಂದಿದೆ.

ಸುಳ್ಯ ಕಸಬಾ ಗ್ರಾಮದ ಜಯನಗರದ ಪ್ರಸಾದ್ ಎಂಬವರು ಸುಳ್ಯದ ಜಯನಗರ ಮೊಹಮ್ಮದ್ ಹನೀಫ್ ಎಂಬವರಿಗೆ ವ್ಯವಹಾರದಲ್ಲಿ ಹಣಕಾಸಿನ ಸಹಾಯ ಮಾಡಿದ್ದರು. ಆದರೆ ಆರೋಪಿ ಮೊಹಮ್ಮದ್ ಹನೀಫ್ ಸಾಲವಾಗಿ ಪಡಕೊಂಡ ಹಣದ ಪೈಕಿ ರೂ.10,00,000 /=ಹಣವು ಬಾಕಿ ಮಾಡಿಕೊಂಡಿದ್ದರು. ಈ ಹಣದ ಮರುಪಾವತಿಗಾಗಿ ಆರೋಪಿ ಮೊಹಮ್ಮದ್ ಹನೀಫ್ ದೂರುದಾರ ಪ್ರಸಾದ್ ರವರಿಗೆ ಕರ್ನಾಟಕ ಬ್ಯಾಂಕ್ ಖಾತೆಯ ಚೆಕನ್ನು ನೀಡಿ ಅದರಲ್ಲಿ ಸಾಕಷ್ಟು ಹಣ ಇದೆ ಎಂದು ದೂರುದಾರರನ್ನು ನಂಬಿಸಿದ್ದರು. ಈ ಚೆಕ್ಕನ್ನು ಬ್ಯಾಂಕ್ ಗೆ ವಸೂಲಾತಿಗಾಗಿ ಹಾಕಿದಾಗ ಅದರಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಹಿಂಬರಹದೊಂದಿಗೆ ದೂರುದಾರರಿಗೆ ಚೆಕ್ಕನ್ನು ಹಿಂತುರಿಗಿಸಲಾಗಿತ್ತು. ಬಳಿಕ ಸಾಲವಾಗಿ ಪಡಕೊಂಡ ಹಣವನ್ನು ಹಿಂತುರುಗಿಸುವಂತೆ ಫಿರ್ಯಾದುದಾರರು ತನ್ನ ವಕೀಲರ ಮೂಲಕ ನೋಟಿಸ್ ಆರೋಪಿಗೆ ನೀಡಲಾಗಿತ್ತು . ಆದರೆ ಆರೋಪಿ ಪಡಕೊಂಡ ಸಾಲದ ರೂ 10,00,000 ಹಣವನ್ನು ನೀಡದೇ ಇರುವ ಕಾರಣ ದೂರುದಾರರು ಮಾನ್ಯ ಸಿವಿಲ್ ಜಡ್ಜ್ (ಹಿರಿಯ ವಿಭಾಗ )ಮತ್ತು ಪ್ರಥಮ ದರ್ಜೆ ನ್ಯಾಯಲಯದಲ್ಲಿ ಫಿರ್ಯಾದಿಯನ್ನು ದಾಖಲಿಸಿದ್ದರು. ಈ ಮಧ್ಯೆ ತನಿಖಾ ಹಂತದಲ್ಲಿ ಆರೋಪಿಯು ದೂರುದಾರರಿಗೆ ರೂ 1 80 000 /=ಪಾವತಿ ಮಾಡಿದ್ದರು. ಬಳಿಕ ವಿಚಾರಣೆ ಕೈಗೆತ್ತಿಕೊಂಡ ಹಿರಿಯ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಸೋಮಶೇಖರ್ ರವರು ದೂರುದಾರರು ತನ್ನ ದೂರಿನಲ್ಲಿ ಹೇಳಿದಂತೆ ರೂ 10,00,000 ಹಣವನ್ನು ಆರೋಪಿಗೆ ನೀಡಿದ್ದಾರೆ ಎಂಬುದನ್ನು ಸಾಬೀತು ಪಡಿಸುವ ಲ್ಲಿ ದೂರುದಾರರು ಸಫಲ ರಾಗಿದ್ದಾರೆ ಎಂಬ ಕಾರಣವನ್ನು ನೀಡಿ ಆರೋಪಿ ಮೊಹಮ್ಮದ್ ಹನೀಫ್ ವಿರುದ್ದ ವರ್ಗಾವಣೆ ಲಿಖಿತ ಕಾನೂನು ಕಲಂ 138 ರ ಪ್ರಕಾರ ಆರೋಪಿಯು ರೂ 8,30,000/= ದಂಡನೆಯನ್ನು ತೆರಬೇಕು. ಅದಕ್ಕೆ ತಪ್ಪಿದಲ್ಲಿ 6 ತಿಂಗಳ ಕಾಲ ಕಾರಾಗ್ರಹವಾಸವನ್ನು ಅನುಭವಿಸುವಂತೆ ಅದೇಶಿಸಿದ್ದು, ದಂಡನೆ ಮೊತ್ತದಲ್ಲಿ ರೂ.8,20,000/= ಹಣವನ್ನು ದೂರುದಾರರಿಗೂ ಪರಿಹಾರ ರೂಪದಲ್ಲಿ ಕೊಡಬೇಕು. ಉಳಿದ ರೂ 10,000 ವನ್ನು ದಂಡನೆ ರೂಪದಲ್ಲಿ ಸರಕಾರಕ್ಕೆ ತೆರಬೇಕೆಂದು ಅ.8 ರಂದು ಆದೇಶಿಸಿ ತೀರ್ಪಿತ್ತಿರುತ್ತಾರೆ. ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ ವಾದಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.