ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಪಿ.ಸಿ.ಜಯರಾಂ ಪುನರಾಯ್ಕೆ

Advt_Headding_Middle

 

ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ಜೆ ರೈ, ಖಜಾಂಚಿ ದಿನೇಶ್ ಮಡ್ತಿಲ
ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮದಿನವನ್ನು ಕೆ.ವಿ.ಜಿ. ಸುಳ್ಯ ಹಬ್ಬ ವನ್ನಾಗಿ ಆಚರಿಸುತ್ತಿರುವ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಪಿ.ಸಿ.ಜಯರಾಮ್ ಪುನರಾಯ್ಕೆಯಾಗಿದ್ದಾರೆ.

 

ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಚಂದ್ರಾಕ್ಷಿ ಜೆ ರೈ , ಖಜಾಂಚಿಯಾಗಿ ದಿನೇಶ್ ಮಡ್ತಿಲ ಅವರು ಕೂಡ ಮುಂದಿನ ವರ್ಷಕ್ಕೆ ಮರು ಆಯ್ಕೆಯಾದರು.

ಸಮಿತಿಯ 2020 – 2021 ನೇ ಸಾಲಿನ ಮಹಾಸಭೆ ಇಂದು ಕೆವಿಜಿ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷರಾದ ಪಿ.ಸಿ.ಜಯರಾಮ್ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ. ವಿ . ಚಿದಾನಂದ ಮುಖ್ಯ ಅತಿಥಿಯಾಗಿದ್ದರು. ಸಮಿತಿಯ ಗೌರವ ಸಲಹೆಗಾರ ಡಾ.ಹರಪ್ರಸಾದ್ ತುದಿಯಡ್ಕ, ನಿಕಟಪೂರ್ವ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ,ಪ್ರಧಾನ ಕಾರ್ಯದರ್ಶಿ ಶ್ರೀಮತಿ ಚಂದ್ರಾಕ್ಷಿ ಜೆ ರೈ, ಖಜಾಂಚಿ ದಿನೇಶ್ ಮಡ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಪಿ ಸಿ ಜಯರಾಮರು ಸ್ವಾಗತಿಸಿದರು ಬಳಿಕ ಚಂದ್ರಾಕ್ಷಿ ಜೆ.ರೈ ಯವರು ಕಳೆದ 1 ವರ್ಷದ ಕಾರ್ಯಕ್ರಮಗಳ ವರದಿ ವಾಚಿಸಿದರು. ದಿನೇಶ್ ಮಡ್ತಿಲ ರವರು ಲೆಕ್ಕಪತ್ರ ಮಂಡಿಸಿದರು

ಆ ಬಳಿಕ 21-22ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯ ವಿಷಯ ಚರ್ಚೆಗೆ ಬಂದಾಗ, ಪಿ.ಸಿ. ಜಯರಾಮರ ನೇತೃತ್ವದ ತಂಡವನ್ನು ಮತ್ತೆ ಮುಂದುವರಿಸಬೇಕೆಂದು ಸಭೆಯಲ್ಲಿ ವ್ಯಕ್ತವಾಯಿತು. ಆದರೆ ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ರೈ ಹಾಗೂ ಅಧ್ಯಕ್ಷ ಪಿ.ಸಿ.ಜಯರಾಮರು, ತಮ್ಮಬದಲಾಯಿಸಬೇಕೆಂದು ಕೇಳಿಕೊಂಡರು.
ಈ ಬಗ್ಗೆ ಚರ್ಚೆ ನಡೆದು ” ಕಳೆದ ವರ್ಷ ಕೊರೋನಾ ಕಾರಣದಿಂದಾಗಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಲಾಗಿಲ್ಲದಿರುವುದರಿಂದ ಮತ್ತು ಇನ್ನು ಕೇವಲ ಎರಡೂವರೆ ತಿಂಗಳಲ್ಲಿ ಕೆವಿಜಿ ಸುಳ್ಯ ಹಬ್ಬ ಮಾಡಬೇಕಾಗಿರುವುದರಿಂದ ಹೊಸ ಪದಾಧಿಕಾರಿಗಳು ಬಂದು ಯೋಜನೆ ರೂಪಿಸಿ ಸಿದ್ಧತೆ ಮಾಡುವುದಕ್ಕೆ ಸಮಯಾವಕಾಶದ ಕೊರತೆಯಾಗುವುದರಿಂದ ಹಾಗೂ ಕಳೆದ ವರ್ಷದ ಮಹಾಸಭೆಯಲ್ಲಿ ಈ ವಿಚಾರ ಚರ್ಚೆಯಾದಂತೆ ಇದೇ ಸಮಿತಿಯನ್ನು ಮುಂದಿನ ವರ್ಷಕ್ಕೆ ಮುಂದುವರಿಸಬೇಕು ಎಂದು ಸಭೆಯಲ್ಲಿದ್ದ ಬಹುತೇಕರು ಪ್ರತಿಪಾದಿಸಿದರು

ಈ ಕಾರಣದಿಂದಾಗಿ ಅಧ್ಯಕ್ಷರಾಗಿ ಪಿ ಸಿ ಜಯರಾಮ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಾಕ್ಷಿ ಜೆ. ರೈ , ಖಜಾಂಚಿ ದಿನೇಶ್ ಮಡ್ತಿಲ ಪುನರಾಯ್ಕೆಗೊಂಡರು .
ಗೌರವಾಧ್ಯಕ್ಷರಾಗಿ ಡಾ.ಕೆ.ವಿ.ಚಿದಾನಂದ, ಗೌರವ ಸಲಹೆಗಾರರಾಗಿ ಡಾ.ಕೆ ವಿ ರೇಣುಕಾಪ್ರಸಾದ್ ಮತ್ತು ಡಾ. ಹರಪ್ರಸಾದ್ ತುದಿಯಡ್ಕ, ಉಪಾಧ್ಯಕ್ಷರುಗಳಾಗಿ ಬಿಟ್ಟಿ ಬಿ. ನೆಡುನಿಲಂ, ಶ್ರೀಮತಿ ಕಮಲಾಕ್ಷಿ ವಿ.ಶೆಟ್ಟಿ, ಎಸ್.ಸಂಶುದ್ದೀನ್, ಡಾ.ಲೀಲಾಧರ್ ಡಿ.ವಿ., ಮಾಧವ ಬಿ.ಟಿ. , ಕಾರ್ಯದರ್ಶಿ ಗಳಾಗಿ ಅಬ್ದುರ್ರಹ್ಮಾನ್ ಮೊಗರ್ಪಣೆ, ಭವಾನಿಶಂಕರ ಅಡ್ತಲೆ, ಸಂತೋಷ್ ಕುತ್ತಮೊಟ್ಟೆ ಮತ್ತು ಎ. ಸಿ. ವಸಂತ್, ನಿರ್ದೇಶಕರುಗಳಾಗಿ ಡಾ.ಎನ್.ಎ. ಜ್ಞಾನೇಶ್, ಸದಾನಂದ ಮಾವಜಿ, ಚಂದ್ರಶೇಖರ ಪೇರಾಲ್, ದಿನೇಶ್ ಅಂಬೆಕಲ್ಲು, ಡಾ ಪುರುಷೋತ್ತಮ ಕೆ ಜಿ , ರೇವತಿ ನಂದನ್, ದೊಡ್ಡಣ್ಣ ಬರೆಮೇಲು ಮತ್ತು ಹರೀಶ್ ಬಂಟ್ವಾಳ್ ಆಯ್ಕೆಯಾದರು.
ಗೌರವಾಧ್ಯಕ್ಷರಾದ ಡಾ.ಕೆ.ವಿ.ಚಿದಾನಂದರು ಕಳೆದ ವರ್ಷ ಸರಳವಾಗಿ ಕೆ.ವಿ.ಜಿ. ಸುಳ್ಯ ಹಬ್ಬ ನಡೆದಿದ್ದರೂ ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ. ಬಡವರೊಬ್ಬರಿಗೆ ಮನೆ ಕಟ್ಟಲು ನೆರವು ನೀಡುವ ವಿನೂತನ ಕಾರ್ಯಕ್ರಮ ಮಾಡಲಾಗಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪಿ.ಸಿ.ಜಯರಾಮರು ಆದಷ್ಟು ಶೀಘ್ರ ಸಭೆ ಕರೆದು ಚರ್ಚಿಸಿ ಸುಳ್ಯ ಹಬ್ಬ ಯಶಸ್ವಿಯಾಗಿ ಸಂಘಟಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ಜೆ.ರೈ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.