ಕುಮಾರಸ್ವಾಮಿ ವಿದ್ಯಾಲಯದ  ರಜತ ಸಭಾಭವನ ಉದ್ಘಾಟನೆ

Advt_Headding_Middle

ನೂತನ ಕಟ್ಟಡ, ನೂತನ ಕ್ರೀಡಾಂಗಣ ನಿರ್ಮಾಣ ಕ್ಕೆ ಗುದ್ದಲಿ ಪೂಜೆ

ಸಣ್ಣ ಮನೆತನದವರಿಂದ ದೊಡ್ಡ ಸಾಧನೆ : ಅಂಗಾರ

ಕುಮಾರಸ್ವಾಮಿ ವಿದ್ಯಾಲಯ ಆರಂಭವಾಗಿ  25ರ  ವರ್ಷ ತುಂಬಿದ್ದು ಆ ಪ್ರಯುಕ್ತ ರಜತ ಸಂಭ್ರಕ್ಕೆ ಚಾಲನೆ ದೊರೆತಿದ್ದು ಇಂದು
ಕುಮಾರ ನಾಯರ್ ಸ್ಮೃತಿ ಭವನ ಉದ್ಘಾಟನೆ ಗೊಂಡಿದೆ.  ದಕ್ಷಿಣಕನ್ನಡ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ಈ ಸಂಸ್ಥೆ ಆರಂಭ ಆಗುವಾಗ ನಾನು ಸುಳ್ಯದ ಶಾಸಕನಾಗಿದ್ದೆ ಈಗಲೂ ಶಾಸಕನಾಗಿದ್ದೇನೆ. ಸುಳ್ಯದಲ್ಲಿ ಉಳ್ಳವರು ಹಲವರು ಆದರೆ  ಕೆ.ವಿ ಜಿ ಅವರ ಇಚ್ಚಾಶಕ್ತಿಯಿಂದ ಸಾಧನೆ ಮಾಡಿ ಶಿಕ್ಷಣ ಸಂಸ್ಥೆ ಕಟ್ಟಿದರು. ಕುಮಾರ್ ನಾಯರ್ ಕೂಡ  ಏನೂ ಇಲ್ಲದೆ ಸಾಧನೆ ಮಾಡಿದವರು ಎಂದರು. ಸುಳ್ಯದಲ್ಲಿ ರಾಜ ಮನೆತನವರೂ ಇದ್ದಾರೆ., ಆದರೆ ಸಣ್ಣ  ಮನೆತನದವರು ಉತ್ತಮ ಕೆಲಸ ಮಾಡಿ ಮನೆತನದ  ಗೌರವ ಹೆಚ್ಚಿಸುತಿದ್ದಾರೆ ಎಂದರು. ಶಿಕ್ಷಣದ ಬಗ್ಗೆ ಮಾತನಾಡುತ್ತಾ ಸರ್ಕಾರಿ ಶಾಲೆಯ ಶಿಕ್ಷಕರು ಸಂಬಳದ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದರು. ಆದರೆ ಸರ್ಕಾರಿ ಪಬ್ಲಿಕ್ ಸ್ಕೂಲ್ ಗಳು ಆರಂಭವಾಗಿ ಸರ್ಕಾರಿ ಶಾಲೆಗಳಲ್ಲೂ ಸಾಧನೆ ಆರಂಭವಾಗಿ ಸ್ಪರ್ಧೆ ಉಂಟಾಗಿದೆ. ಖಾಸಗಿ ಶಾಲೆಗಳು ಸರ್ಕಾರದ ಅನುಮತಿ ಪಡೆದು ಆರಂಭವಾದವು  ಕುಮಾರ ಸ್ವಾಮಿ ಶಾಲೆಗೂ ನಮ್ಮಿಂದಾಗುವ ಸಹಾಯ ಮಾಡಲಿದ್ದೇನೆ ಎಂದರು.
ಆರಂಭದಲ್ಲಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ನೂತನ ಕಟ್ಟಡ ಕ್ಕೆ ಶಿಲಾನ್ಯಾಸ ಮಾಡಿದರು. ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕ್ರೀಡಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಿದರು.   ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಲಲಿತ ಗುಂಡಡ್ಕ ಕುಮಾರ್ ನಾಯರ್ ಅವರ ಭಾವಚಿತ್ರ ಅನಾವರಣ ಮಾಡಿದರು.  ಸಭೆ ಅಧ್ಯಕ್ಷತೆಯನ್ನು ಅನುಗ್ರಹ  ಎಜುಕೇಷನ್ ಟ್ರಸ್ಟ್ ನ  ಅಧ್ಯಕ್ಷ ಗಣೇಶ್ ನಾಯರ್ ವಹಿಸಿದ್ದರು , ಚಂದ್ರಶೇಖರ ನಾಯರ್,   ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಸಾದ್ ಮುನಿಯಂಗಳ,  ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಏನೆಕಲ್ಲು, ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ,  ಯಜ್ಞೇಶ್ ಆಚಾರ್, ವೆಂಕಟ್ರಾಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೀರ್ಥೇಶ್ ಪಾರೆಪ್ಪಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮ ಆರಂಭದ ಮೊದಲು ಯಜ್ಞೇಶ್ ಆಚಾರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಲ್ಲಾರ ಅವರು ಕುಮಾರ್ ನಾಯರ್ ಬಗ್ಗೆ  ಮಾತನಾಡಿದರು.

ಪೋಟೋ: ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.