ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Advt_Headding_Middle

 

 

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅ.7 ರಿಂದ ನವರಾತ್ರಿ ಉತ್ಸವವು ಪ್ರಾರಂಭಗೊಂಡಿದ್ದು ಅ.15 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಪ್ರತೀ ದಿನ ರಾತ್ರಿ ಗಂಟೆ 7.00 ರಿಂದ ಗಂಟೆ 8.30 ರವರೆಗೆ ಗೆಳೆಯರ ಬಳಗ ದೇರಾಜೆ ಮತ್ತು ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ.

ರಾತ್ರಿ ಗಂಟೆ 8.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು.
ಅ.14 ರಂದು ಆಯುಧ ಪೂಜೆ ಬೆಳಿಗ್ಗೆ ಗಂಟೆ 7.00 ರಿಂದ ಮಧ್ಯಾಹ್ನ 12.00 ಗಂಟೆ ಮತ್ತು ಸಂಜೆ ಗಂಟೆ 5.30 ರಿಂದ ರಾತ್ರಿ ಗಂಟೆ 8.00 ರವರೆಗೆ ನಡೆಯಲಿದೆ.
ಅ.15 ರಂದು ವಿಜಯ ದಶಮಿ ನಡೆಯಲಿದೆ.
ವಿಜಯದಶಮಿಯಂದು ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.