ಪಂಜ: ಅ.14 ರಂದು ಶ್ರೀ ಶಾರದೋತ್ಸವ

Advt_Headding_Middle

 

ಪಟ್ಲ ಸತೀಶ್ ಶೆಟ್ಟಿ ತಂಡದಿಂದ ಯಕ್ಷ ಗಾನ ವೈಭವ

ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ, ಪಂಜ ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ ಅ. 14.ರಂದು ಶ್ರೀ ಶಾರದೋತ್ಸವವು ಜರುಗಲಿರುವುದು. ಪೂ. 9.03 ಕ್ಕೆ ಪ್ರತಿಷ್ಠೆ, ಭಜನೆ,ಕುಣಿತ ಭಜನೆ , ಮಕ್ಕಳಿಗೆ ಅಕ್ಷರಾಭ್ಯಾಸ ಜರುಗಲಿರುವುದು.ಸ್ಪರ್ಧಾ ಕಾರ್ಯಕ್ರಮವನ್ನು
ಪಂಜ ನಾಡಕಛೇರಿಯ ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ ಆರ್ ಉದ್ಘಾಟಿಸಲಿದ್ದಾರೆ.

ಪೂ. 11.ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ ಪಳಂಗಾಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಉಪಸ್ಥಿತರಿರುವರು. ಸುಳ್ಯ ರೋಟರಿ ವಿದ್ಯಾಸಂಸ್ಥೆಯ ಸಹಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ ಉಪನ್ಯಾಸ ನೀಡಲಿದ್ದಾರೆ. ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ ಇದರ ವತಿಯಿಂದ ಪಂಜ ಕ್ಲಸ್ಟರಿನ 9 ಶಾಲೆಗಳ ಆಯ್ದ 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿರುವುದು.ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ,ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 1.30 ರಿಂದ ಸಾಂಸ್ಕೃತಿಕ ಸಂಭ್ರಮದಲ್ಲಿ ಯಕ್ಷ ಗಾನ ವೈಭವ ಭಾಗವತರು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪ್ರಶಾಂತ್ ರೈ ಪಲ್ಲೋಡಿ, ಶ್ರೀಮತಿ ಭವ್ಯಶ್ರೀ ಕುಲ್ಕುಂದ, ಕು.ರಚನಾ ಚಿದ್ಗಲ್ಲು, ಚೆಂಡೆ ರೋಹಿತ್ ಉಚ್ಚಿಲ, ಗಗನ್ ಪಂಜ, ಮದ್ದಳೆ ಲವಕಮಾರ್ ಐಲ ಪಾಲ್ಗೊಳ್ಳಲಿದ್ದಾರೆ.
ಸ್ಪರ್ಧಾ ಕಾರ್ಯಕ್ರಮ:

ಪೂ.9.30 ರಿಂದ ಕಿರಿಯ, ಪ್ರೌಢ, ಸಾರ್ವಜನಿಕ ವಿಭಾಗದಲ್ಲಿ ರಂಗೋಲಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಎಲ್ ಕೆ ಜಿ ,ಯುಕೆಜಿ, 1 ಮತ್ತು 2ನೇ ತರಗತಿ ಮಕ್ಕಳಿಗೆ ಐಚ್ಚಿಕ ಚಿತ್ರ,2ರಿಂದ 4ನೇ ತರಗತಿ ಮಕ್ಕಳಿಗೆ ಸ್ವಚ್ಛ ಪರಿಸರ,5ರಿಂದ 7ನೇ ತರಗತಿ ಮಕ್ಕಳಿಗೆ ಶಾರದೆ,8ರಿಂದ 10 ನೇ ತರಗತಿ ಮಕ್ಕಳಿಗೆ ಜಾನಪದ ಕಲೆಗಳು ವಿಷಯದಲ್ಲಿ ನಡೆಯಲಿದೆ.
ಪೂ.11ರಿಂದ ಎಲ್ ಕೆ ಜಿ, ಯು ಕೆ ಜಿ ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆಜಿಗಿತ, ಮಹಿಳೆಯರಿಗೆ ಸಂಗೀತ ಕುರ್ಚಿ, ನಿಂಬೆ ಚಮಚ ಓಟ ಸ್ಪರ್ಧೆಗಳು ನಡೆಯಲಿದೆ.
.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.