ಸುಳ್ಯದ ರಥಬೀದಿಯಲ್ಲಿ ಯೂನಿಕ್ ಅಕಾಡೆಮಿ ವಿದ್ಯಾ ಕೇಂದ್ರ ಶುಭಾರಂಭ

Advt_Headding_Middle

 

ದಾಖಲಾತಿ ಪ್ರಾರಂಭಗೊಂಡಿದೆ

ಸುಳ್ಯದ ರಥಬೀದಿಯಲ್ಲಿರುವ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಅಶ್ವಿತಾಜೀವನ್ ನಾರ್ಕೋಡು ರವರ ಮಾಲಕತ್ವದ ಯೂನಿಕ್ ಅಕಾಡೆಮಿ ವಿದ್ಯಾ ಕೇಂದ್ರ ವು ಅ.8 ರಂದು ಶುಭಾರಂಭಗೊಂಡಿತು. ಬೆಳಗ್ಗೆ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿತು.ಈ ಸಂದರ್ಭ ಅತಿಥಿಗಳಾಗಿ ದಾಮೋದರ ಗೌಡ ನಾರ್ಕೋಡು, ವಾಸುದೇವ ಗೌಡ ನಾರ್ಕೋಡು, ವೈಕುಂಠ ಪ್ರಭು, ದುಗ್ಗಪ್ಪ ಗೌಡ ದೊಡ್ಡ ಮನೆ, ಚೆನ್ನಪ್ಪ ಗೌಡ ಕುಕ್ಕಂದೂರು, ಆದರ್ಶ ದೊಡ್ಡಮನೆ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಅಶ್ವಿತಾ ರವರು ಮಾತನಾಡಿ “ಯೂನಿಕ್ ಅಕಾಡೆಮಿಯ ವಿದ್ಯಾ ಕೇಂದ್ರದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ಕೆಮೆಸ್ಟ್ರಿ ವಿಷಯದ ಕುರಿತು ಹಾಗೂ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರ,ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅಬಾಕಸ್ ತರಗತಿ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವೇದಿಕ್ ಗಣಿತ ಪಾಠವನ್ನು ಬೋಧಿಸಲಾಗುವುದು ಎಂದು ವಿವರಿಸಿದರು. ಕಾರ್ಯಕ್ರಮವನ್ನು ಇಂಜಿನಿಯರ್ ಜೀವನ್ ನಾರ್ಕೋಡು ರವರು ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.