Breaking News

ಪೆರುವಾಜೆ ಕಾಲೇಜಿನಲ್ಲಿ ಡಾ.ಕೆ.ಶಿವರಾಮ ಕಾರಂತರ ಪ್ರತಿಮೆ ಅನಾವರಣ

Advt_Headding_Middle

 

ವಿದ್ಯಾರ್ಥಿಗಳ ಉತ್ತಮ ಸಾಧನೆಯಿಂದ ಯಶಸ್ಸು – ಎಸ್.ಅಂಗಾರ

ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿ ಡಾ.ಕೆ.ಶಿವರಾಮ ಕಾರಂತರ ಪ್ರತಿಮೆ ಅನಾವರಣ ಕಾರ್ಯಕ್ರಮವು ಅ.10 ರಂದು ನಡೆಯಿತು.

ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಪ್ರತಿಮೆ ಅನಾವರಣಗೊಳಿಸಿ ಬಳಿಕ ಸಭಾಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ.ಸಮಸ್ಯೆಗಳನ್ನು ಎದುರಿಸಿ ಹಠ ಸಾಧಿಸಿದಾಗ ಯಶಸ್ಸು ಸಿಗುತ್ತದೆ.ವಿದ್ಯಾರ್ಥಿಗಳಲ್ಲಿ ಛಲ ಬೇಕು ಆಗ ಮುಂದಿನ ಜೀವನ ಸುಗಮವಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಎನ್.ರಾಘವರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕಾಲೇಜು ಅಭಿವೃದ್ಧಿ ಹೊಂದುತ್ತಾ ಇದೆ.
ಇನ್ನಷ್ಟು ಅಭಿವೃದ್ಧಿ ಹೊಂದಬೇಕು .ಕಾಲೇಜಿಗೆ ಆವರಣ ಗೋಡೆ,ವಾಣಿಜ್ಯ ಸಂಕೀರ್ಣ ಮತ್ತು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅವಶ್ಯಕತೆ ಇದೆ ಇದು ನಿರ್ಮಾಣವಾಗಬೇಕು ಎಂದು ಹೇಳಿದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಸಮಾಜ ಕಾರ್ಯ ವಿಭಾಗ ಹಾಗೂ ನ್ಯಾಕ್ ಸಂಚಾಲಕ ಕಾಂತುರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿ ರಕ್ಷಿತ್ ಪೆರುವಾಜೆ ಕಾಲೇಜಿನ ಗ್ರಂಥಾಲಯಕ್ಕೆ ಗ್ರಂಥಪಾಲಕರ ಹುದ್ದೆ ಮಂಜೂರಾತಿ ಮಾಡಬೇಕೆಂದು ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಊಟಕ್ಕೆ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದಿಂದ ದಿನಸಿ ಸಾಮಾಗ್ರಿ ನೀಡುವಂತೆ ಸಚಿವರಿಗೆ ಮನವಿ ನೀಡಿದರು.
2020 – 21 ನೇ ಶೈಕ್ಷಣಿಕ ಸಾಲಿನ ಅಂತಿಮ ಕಲಾ ಮತ್ತು ವಾಣಿಜ್ಯ ಪದವಿ ವಿದ್ಯಾರ್ಥಿಗಳು ಪ್ರತಿಮೆ ಕೊಡುಗೆಯಾಗಿ ನೀಡಿದ್ದು ಪ್ರತಿಮೆಯನ್ನು ಪೆರುವಾಜೆಯ ಸಂತೋಷ್ ಆಚಾರ್ಯ ಎಂಬವರು ನಿರ್ಮಿಸಿದ್ದಾರೆ.
ಹಲಸಿನ ಮರದಿಂದ ನಿರ್ಮಿಸಿದ ಪ್ರತಿಮೆಯನ್ನು ಕೆತ್ತನೆಯ ಮೂಲಕ ಅಚ್ವುಕಟ್ಟಾಗಿ ನಿರ್ಮಿಸಲಾಗಿದೆ.
ಇದಕ್ಕೆ ಸುಮಾರು 45,000 ರೂ ವೆಚ್ಚ ತಗಲಿರುವುದಾಗಿ ತಿಳಿದು ಬಂದಿದೆ.

ವಿದ್ಯಾರ್ಥಿನಿ ಗಾಯತ್ರಿ ಸ್ವಾಗತಿಸಿ, ಆಶಿತಾ ಪ್ರಾರ್ಥಿಸಿ,ಸುರಕ್ಷಾ ವಂದಿಸಿ, ಕಮಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.