ಸುಳ್ಯ ಹವ್ಯಕ ವಲಯ ಸಮಿತಿಯ ಸಭೆ

Advt_Headding_Middle

ಹವ್ಯಕ ವಲಯ ಸಮಿತಿ ಸುಳ್ಯ ಇದರ ಸಭೆಯು ವಲಯದ ಅಧ್ಯಕ್ಷರಾದ ಈಶ್ವರಕುಮಾರ್ ಭಟ್ ಉಬರಡ್ಕರವರ ನೀರಬಿದಿರೆಯಲ್ಲಿರುವ ಪಂಚವಲ್ಲೀ ಮನೆಯಲ್ಲಿ ಅ.10 ರಂದು ನಡೆಯಿತು.
ಗುರಿಕ್ಕಾರರಾದ ವೆಂಕಟರಮಣ ಭಟ್ ಕಾಡುತೋಟ ಧ್ವಜಾರೋಹಣ ನೆರವೇರಿಸಿದರು.
ಇತ್ತೀಚೆಗೆ ದೈವಾಧೀನರಾದ ಶಿವಕುಮಾರ್ ಸುರುಳಿಕುಮೇರಿ, ಸೀತಾರಾಮ ಭಟ್ ಉಬರಡ್ಕ, ಗಂಗಾಧರಯ್ಯಪಾರೆ, ಯನ್ ಆರ್ ಗೋಪಾಲಕೃಷ್ಣ ರವರ ತಂದೆ ಹಾಗೂ ರಾಜಾರಾಮ ಬೆಟ್ಟ ರವರ ತಾಯಿ, ಇವರೆಲ್ಲರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯದರ್ಶಿ ವಿಷ್ಣುಕಿರಣ್ ನೀರಬಿದಿರೆ ಗತ ಸಭೆಯ ವರದಿ, ವಾರ್ಷಿಕ ವರದಿ ಮತ್ತು ಮಂಡಲದ ಸುತ್ತೋಲೆ ಮಂಡಿಸಿದರು.
ಕೋಶಾಧಿಕಾರಿ ಈಶ್ವರ ಭಟ್ ಸರವು ಆರ್ಥಿಕ ವರದಿ ನೀಡಿದರು.
ವಿಭಾಗ ಸಂಚಾಲಕರು ವರದಿ ವಾಚಿಸಿದರು.
ಮಂಡಲ ವೈದಿಕ ಪ್ರಧಾನರಾದ ವೆಂಕಟೇಶ ಶಾಸ್ತ್ರಿ ಯವರು ತಮ್ಮ ಆನ್ಲೈನ್ ಮಂತ್ರ ಪಾಠಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಪ್ರೋ ಟಿ ಶ್ರೀಕೃಷ್ಣ ಭಟ್ ತಾವು ಬರೆದ ಪುಸ್ತಕ *ಹೇಳದೇ ಉಳಿದದ್ದು* ಬಗ್ಗೆ ಮಾಹಿತಿ ಕೊಟ್ಟರು.
ಧರ್ಮಾರಣ್ಯದ ಕಾರ್ಯದರ್ಶಿ ಪ್ರಶಾಂತ್ ಎಂ ಮಾಹಿತಿ ನೀಡಿದರು.
ಜೇಡ್ಲ ಗೋಶಾಲಾ ಕಾರ್ಯದರ್ಶಿ ವಿಜಯ ಕೃಷ್ಣ ವರದಿ ನೀಡಿದರು.
ಚೊಕ್ಕಾಡಿ ದೇವಾಲಯದ ನವರಾತ್ರಿ ಕಾರ್ಯಕ್ರಮದ ವಿವರವನ್ನು ವಿಷ್ಣುಕಿರಣ್ ಹೇಳಿದರು.
ಶ್ರುತಿ, ಮೈತ್ರಿ ಅಶ್ವಿನಿ ಮತ್ತು ಹರಿಕೃಷ್ಣ ಕೀರ್ತನೆ ಗಳನ್ನು ಹಾಡಿದರು.
ಸಭಾಧ್ಯಕ್ಷ ರಾದ ಈಶ್ವರಕುಮಾರ್ ಭಟ್ ಮಾತನಾಡಿದರು.
ಶಾಂತಿ ಮಂತ್ರ ಧ್ವಜಾವರೋಹಣದೊಂದಿಗೆ ಸಭೆ ಸಮಾಪನಗೊಂಡಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.