ಪಂಜ ಪರಿಸರದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಸ್ವಚ್ಚತಾ ಕಾರ್ಯಕ್ರಮ

Advt_Headding_Middle

 

ಕೇಂದ್ರ ಸರಕಾರದ ಸ್ವಚ್ಚಾ ಭಾರತ ಕಾರ್ಯಕ್ರಮ ಪಂಜ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಅ.10 ರಂದು ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮುಂಜಾನೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಿಂದ ಮೊದಲ್ಗೊಂಡು ಅಡ್ಡತ್ತೋಡು,ಪಲ್ಲೋಡಿ,ಕರಿಕ್ಕಳ,ಪೊಳೆಂಜ ರಸ್ತೆ ಬದಿಯಲ್ಲಿ ಸ್ವಚ್ಚಗೊಳಿಸಿ ಸಂಜೆಯ ವರೆಗೆ ಪಂಜ ಪೇಟೆಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಬ್ಬಿಕೊಂಡ ಪೊದೆಗಳನ್ನು ತೆರವು ಗೊಳಿಸಿ ಸ್ವಚ್ಚ ಗೊಳಿಸಲಾಯಿತು. ಯುವಕ ಮಂಡಲಗಳ ಉತ್ಸಾಹಿ ಯುವಕರು, ಸಂಘಟೆನಗಳ ಸದಸ್ಯರ ಅವಿರತ ಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಯಿತು.
ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅದ್ಯಕ್ಷ ಚಂದ್ರಶೇಖರ ಕರಿಮಜಲು ಅಧ್ಯಕ್ಷತೆ ವಹಿಸಿದ್ದರು .ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ,ಉಪಾಧ್ಯಕ್ಷೆ ನೇತ್ರಾವತಿ ಕಲ್ಲಾಜೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್,ಗ್ರಾಮ ಪಂಚಾಯತ್ ಕಾರ್ಯದರ್ಶಿ ಕೆ ಪದ್ಮಯ್ಯ ಹಾಗೂ ಸುಳ್ಯ ಯುವ ಜನ ಸಂಯುಕ್ತ ಮಂಡಳಿ ಕ್ರೀಡಾ ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ, ನಿರ್ದೇಶಕ ಜನಾರ್ಧನ ನಾಗತೀರ್ಥ ಹಾಗೂ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಈ ಸಭೆಯಲ್ಲಿ ಹಾಜರಿದ್ದರು.ಕಾರ್ಯಕ್ರಮದಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಜೀವ ರಕ್ಷಕ ಆ್ಯಂಬುಲೆನ್ಸ್ ನ ಚಾಲಕರಿಗೆ ಮತ್ತು ನಿರ್ವಾಹಕರಿಗೆ ರಂಜಿತ್ ಜಬಳೆ ಇವರು ಸಮವಸ್ತ್ರ ಕೊಡುಗೆಯಾಗಿ ನೀಡಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್,
ಮಿತ್ರ‌ ಮಂಡಲ ನಾಗತೀರ್ಥ,
ಶಿವಾಜಿ ಯುವಕ ಮಂಡಲ,ಕುತ್ಕೂಂಜ,ಗೆಳೆಯರ ಬಳಗ ಪೊಳೆಂಜ,ಉಳ್ಳಾಕುಲು ಕಲಾರಂಗ ಪಲ್ಲೋಡಿ,ಜೈ ಕರ್ನಾಟಕ ಯುವಕ‌ ಮಂಡಲ,ಶಿವ ಫ್ರೆಂಡ್ಸ್ ಪಂಜ,ಬಿ.ಯಂ.ಯಸ್ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘ ಪಂಜ ಘಟಕ ಭಾಗವಹಿಸಿದ ಸಂಘಟನೆಗಳು.ಕಾರ್ಯಕ್ರಮದಲ್ಲಿ ದಾಮೋದರ ನೇರಳ ನಿರೂಪಿಸಿ . ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.