ಸಂಪಾಜೆಯಲ್ಲಿ ಜಾಗೃತಿ ಜಾಥಾ ಮತ್ತು ಕಾರ್ಯಾಗಾರ

Advt_Headding_Middle

 

ಸಂಪಾಜೆ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಸಲುವಾಗಿ ಮಹಿಳಾ ದೌರ್ಜನ್ಯ ಮುಕ್ತಿ ಹಾಗೂ ಮಕ್ಕಳ ರಕ್ಷಣೆ ಮತ್ತು ಪೋಷಣೆ ಬಗ್ಗೆ ಜಾಗೃತಿ ಜಾಥಾ ಹಾಗೂ ಕಾರ್ಯಾಗಾರವು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಇಂದು ನಡೆಯಿತು.

 ಗೂನಡ್ಕ ದಿಂದ ಕಲ್ಲು ಗುಂಡಿ ತನಕ ನಡೆದ ಜಾಗೃತಿ ಜಾಥಾ ವನ್ನು ಸುಳ್ಯ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಅಶೋಕ್ ನೆಕ್ರಾಜೆ ಉದ್ಘಾಟಿಸಿದರು .ಹೆಣ್ಣು ಮಕ್ಕಳನ್ನು ಪೋಷಣೆ ಮಾಡುವುದು ಸಮಾಜದ ಕರ್ತವ್ಯ .ಹೆಣ್ಣು ಮಕ್ಕಳು ಸಮಾಜ ಎರಡು ಕಣ್ಣು ಗಳಂತೆ ಹೆಣ್ಣು ಮಕ್ಕಳ ಬಾಳನ್ನು ಬೆಳಗಿಸವರಾಗಬೇಕು.ದೇಶಗಳಲ್ಲಿ ಹೆಣ್ಣು ಮಕ್ಕಳ ದೌರ್ಜನ್ಯ ಮೀತಿ ಮೀರಿದೆ ನಾವು ತಡೆಗಟ್ಟುವದಕ್ಕೆ ಇಂತಹ ಕಾರ್ಯಕ್ರಮ ಫಲಪ್ರದವಾಗಿದೆ. ಎಂದು ಹೇಳಿದರು.

ಸಮಾರಂಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ.ಜಿ.ಕೆ.ಹಮೀದ್,ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ,ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್,ಗ್ರಾಮ ಪಂಚಾಯತ್ ಸದಸ್ಯರಾದ ಪಿಕೆ.ಅಬೂಸಾಲಿ,ವಿಮಲಾ ಪ್ರಸಾದ್ , ಶೌವಾದ್ ಗೂನಡ್ಕ,ಎಸ್.ಕೆ.ಹನೀಫ್,ಸುಂದರಿ ಮುಂಡಡ್ಕ,ಅನುಪಮ,ರಜನಿ,ಸಂಪಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿ ಸೋಜ ಗ್ರಾಮದ ಪ್ರಮುಖರಾದ ನಾಗೇಶ್ ಪಿ.ಆರ್,ಪಿ.ಎ.ಉಮ್ಮರ್ ಗೂನಡ್ಕ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಅಶಾ ವಿನಯ ಕುಮಾರ್, ಕಾಂತಿ ಮೋಹನ್,ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.