ಅಜ್ಜಾವರ : ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

Advt_Headding_Middle

 

ಮಾಹಿತಿ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶುಅಭಿವೃದ್ದಿ ಯೋಜನೆ ಸುಳ್ಯ ,ಅಜ್ಜಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಕಿತ್ತೂರು ರಾಣಿ ಚೆನ್ನಮ್ಮ , ರಾಣಿ ಅಬ್ಬಕ್ಕ ಹಾಗೂ ಸ್ನೇಹ ಕಿಶೋರಿ ಸಂಘಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಮಾಹಿತಿ ಕಾರ್ಯಕ್ರಮ ಅಂಬೇಡ್ಕರ್ ಸಭಾಭವನ ಮೇನಾಲದಲ್ಲಿ ನಡೆಯಿತು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಮಾಲಿನಿ ಇವರು ಋತುಸ್ರಾವದ ಸಂದರ್ಭದಲ್ಲಿ ನೈರ್ಮಲ್ಯ, ಹದಿಹರೆಯದ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.ಮೇಲ್ವಿಚಾರಕಿ ಶ್ರೀಮತಿ ಶೈಲಜಾ.ಬಿ.ಇವರು ಬಾಲ್ಯವಿವಾಹದ ದುಷ್ಪರಿಣಾಮಗಳು,ಬಾಲ್ಯವಿವಾಹ ನಿಷೇಧ ಖಾಯ್ದೆ, ಬಾಲಕಾರ್ಮಿಕ ನಿಷೇಧ ಖಾಯ್ದೆ, ಪೋಕ್ಸೋ ಖಾಯ್ದೆಯ ಮುಖ್ಯಾಂಶಗಳು, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ, ಬಿಬಿಬಿಪಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಕಿಶೋರಿ ಸಂಘಗಳ ಅಧ್ಯಕ್ಷೆ ಕು.ಪ್ರಿಯದರ್ಶಿನಿ, ಕು.ಸಿಂಚನ, ಕು.ಪ್ರೇಕ್ಷಿತಾ ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕಿಶೋರಿಯರಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ವರಮಹಾಲಕ್ಷ್ಮಿ ಸಮಿತಿ ಮೇನಾಲ ಇದರ ವತಿಯಿಂದ ಬಹುಮಾನಗಳನ್ನು ಪ್ರಾಯೋಜಿಸಿದ್ದು ಅಧ್ಯಕ್ಷೆ ಶ್ರೀಮತಿ ಶಿಲ್ಪಾ ಶೆಟ್ಟಿ ಉಪಸ್ಥಿತರಿದ್ದರು.ಕು.ಪ್ರೇರಣಾ ,ಆಪ್ತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ದೇವಕಿ ಅಂಗನವಾಡಿ ಕಾರ್ಯಕರ್ತೆ ಜಾರತಡ್ಕ ಎಲ್ಲರನ್ನೂ ಸ್ವಾಗತಿಸಿ ಶ್ರೀಮತಿ ಶಿವಪಾಕ್ಯಮ್ ಅಂಗನವಾಡಿ ಕಾರ್ಯಕರ್ತೆ ಮೇದಿನಡ್ಕ ವಂದನಾರ್ಪಣೆ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.