Breaking News

ಸೂರ್ಯರಶ್ಮಿ ಕ್ರಿಯೇಶನ್ಸ್ ಅರ್ಪಿಸುವ ಆಲ್ಬಂ ಹಾಡು ದೇರಾಜೆ ಐನ್ ಮನೆಯಲ್ಲಿ ಚಿತ್ರೀಕರಣ

Advt_Headding_Middle

 

ಸುಳ್ಯದ ಸೂರ್ಯರಶ್ಮಿ ಕ್ರಿಯೇಶನ್ಸ್ ಅರ್ಪಿಸುವ ‘ಏನ ಬೇಡಲಿ ಕಾಳಿಕಾಂಬೆಯೆ’ ಅನ್ನುವ ಭಕ್ತಿಗೀತೆಯ ಆಲ್ಬಂ ಹಾಡಿನ ಚಿತ್ರೀಕರಣ ಶತಮಾನಗಳ ಇತಿಹಾಸವಿರುವ ಅರಂತೋಡು ಸಮೀಪದಲ್ಲಿರುವ ದೇರಾಜೆ ಐನ್ ಮನೆಯಲ್ಲಿ ನಡೆಯಿತು.

ಯುವ ಸಾಹಿತಿ ಉದಯಭಾಸ್ಕರ್ ಸುಳ್ಯ ಅವರ ಸಾಹಿತ್ಯ ಮತ್ತು ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ಗೀತೆಗೆ ಗಾಯಕ ಉದಯನ್ ವಿಶ್ವಕರ್ಮ ಪಂಜಿಕಲ್ಲು ಅವರು ರಾಗ ಸಂಯೋಜಿಸಿದ್ದು ಪ್ರಕಾಶ್ ಕುಂಬ್ಲೆ ಸಂಗೀತ ನೀಡಿದ್ದಾರೆ.

ತಾಯಿ ಮತ್ತು ಮಗುವಿನ ಪ್ರಶ್ನೋತ್ತರ ರೂಪದಲ್ಲಿರುವ ಈ ವಿಭಿನ್ನ ಶೈಲಿಯ ಗೀತೆಯು ಮಂಜೇಶ್ವರದ ದೀಪಿಕಾ ನಿತಿನ್ ಮತ್ತು ಅವರ ಮಗ ನಿಗಮ್ ಎನ್ ಆಚಾರ್ಯ ಅವರ ಕಂಠಸಿರಿಯಲ್ಲಿ ಮೂಡಿ ಬರಲಿದ್ದು, ವಿದುಷಿ ಸುಶ್ಮಿತಾ ಯತೀಶ್ ಆಚಾರ್ಯ ಪುತ್ತೂರು ಇವರು ನೃತ್ಯ ಸಂಯೋಜಿಸಿದ್ದಾರೆ. ಬಾಲ ಪ್ರತಿಭೆ ಜ್ಯೇಷ್ಠ ಆಚಾರ್ಯ ಕೋಟೆಕಾರು ಅವರ ಚಿತ್ರ ಪ್ರಸ್ತುತಿಯನ್ನು ಕೂಡ ಈ ಗೀತೆಯಲ್ಲಿ ಬಳಸಿಕೊಳ್ಳಲಾಗಿದೆ. ಸುಳ್ಯದ ಪರಮ್ ಸ್ಟುಡಿಯೋ ಮಾಲಕ ಪರಮ್ ಅವರ ನೇತೃತ್ವದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಪ್ರದೀಪ್ ಆಚಾರ್ಯ ಮುರೂರು, ಜಗತ್ ದೇರಾಜೆ ಹಾಗೂ ಪ್ರಸ್ತುತ ಐನ್ ಮನೆಯಲ್ಲಿ ವಾಸ್ತವ್ಯವಿರುವ ಭಾಸ್ಕರ್ ದೇರಾಜೆ ಹಾಗೂ ಕುಟುಂಬಸ್ಥರು ಚಿತ್ರೀಕರಣಕ್ಕೆ ಸಹಕರಿಸಿದ್ದರು.

ಅಕ್ಟೋಬರ್ 14 ರಂದು ಕುಂಬಳೆ ಸಮೀಪದ ಆರಿಕ್ಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಬಿಡುಗಡೆಯಾಗಲಿರುವ ಈ ಹಾಡು ಸೂರ್ಯರಶ್ಮಿ ಕ್ರಿಯೇಶನ್ಸ್ ಯೂ ಚಾನೆಲ್ ನಲ್ಲಿ ಲಭ್ಯವಾಗಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.