ವಿವಿಧ ಬೇಡಿಕೆ ಮುಂದಿರಿಸಿ ಕೆ.ಎಫ್.ಡಿ.ಸಿ. ನೌಕರರ ಪ್ರತಿಭಟನೆ

Advt_Headding_Middle

 

ಬೇಡಿಕೆ ಈಡೇರಿಕೆಗೆ ವಾರದ ಗಡುವು ನೀಡಿದ ಕಾರ್ಮಿಕರು


ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೆಎಫ್ ಡಿಸಿ ಕಾರ್ಮಿಕರು ಇಂದು ಸುಳ್ಯದಲ್ಲಿ ಪ್ರತಿಭಟನೆ ನಡೆಸಿದರು.


ನಿಗಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಒಪ್ಪಂದವು, ಆಗಸ್ಟ್ 31ಕ್ಕೆ ಕೊನೆಗೊಂಡಿದ್ದು, ತಕ್ಷಣ ನಿಗಮವು ಮಾತುಕತೆಗೆ ಕರೆಯುವಂತೆ ಆಗ್ರಹಿಸಲಾಯಿತು.
ದೀಪಾವಳಿ ಬೋನಸ್ 20 ಶೇಕಡ ನೀಡುವಂತೆ ಒತ್ತಾಯ.
ಹಾಗೂ ಇನ್ನಿತರ ಮುಖ್ಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ವಾರದೊಳಗೆ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಬಂದ ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಸದಸ್ಯ ಎಂ.ವೆಂಕಪ್ಪ ಗೌಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಬೆಂಬಲಿಸಿ ಮಾತನಾಡಿದರು. ಕಾರ್ಮಿಕ ನಾಯಕರು ಗಳಾದ ಚಂದ್ರಲಿಂಗಂ, ಸುಬ್ಬಯ್ಯ, ದಯಾಳ್, ಸುಂದರಲಿಂಗಮ್, ತಂಗವೇಲು, ಕೃಷ್ಣವೇಣಿ, ಕಮಲ ನಾಗಪಟ್ಟಣ, ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.