Breaking News

ಇಂದು ಸುಳ್ಯ ದಸರಾ ಉತ್ಸವ

Advt_Headding_Middle

 

 

ಬೆಳಗ್ಗೆ ಶಾರದೆಯ ಪ್ರತಿಷ್ಠೆ – ಸಂಜೆ ವಿಸರ್ಜನೆ

ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಹಾಗೂ ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ದಸರಾ ಈ‌ ಬಾರೀ ಒಂದೇ ದಿನ ನಡೆಯಲಿದೆ.

ಇಂದು ಬೆಳಗ್ಗೆ ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಶಾರದೆಯ ಮೆರವಣಿಗೆ ಸುಳ್ಯ ಪೇಟೆಯಲ್ಲಿ ನಡೆದು ಶಾರದಾ ದೇವಿಯ ಪ್ರತಿಷ್ಠಾಪನೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾದ ಪೆಂಡಲ್ ನಲ್ಲಿ ನಡೆಯಿತು. ಎಸ್ 6 ಅಧ್ಯಕ್ಷ ನಾರಾಯಣ ಕೇಕಡ್ಕರವರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್ 6 ನ ಗೌರವಾಧ್ಯಕ್ಷ ಗೋಕುಲ್‌ದಾಸ್, ರಾಧಾಕೃಷ್ಣ ರೈ ಬೂಡು, ಚಿದಾನಂದ ವಿದ್ಯಾನಗರ, ಎಂ. ವೆಂಕಪ್ಪ ಗೌಡ, ದಿನೇಶ್ ಅಂಬೆಕಲ್ಲು, ನವೀನ್ ಬೆಂಗಳೂರು ಹಾಗೂ ಎಲ್ಲಾ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಗಣಪತಿ ಹವನ, ನಿರಂತರ ಭಜನಾ ಕಾರ್ಯಕ್ರಮ ನಡೆಯಿತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.