Breaking News

ವಾಲ್ತಾಜೆ :ಶಾರದಾ ಪೂಜೆ, ಆಯುಧ ಪೂಜೆ, ಸನ್ಮಾನ ಮತ್ತು ಶಾಲೆಗೆ ಶಾಶ್ವತ ಬಟ್ಟಲು ಕೊಡುಗೆ, ಆಟೋಟ ಸ್ಪರ್ಧೆ

Advt_Headding_Middle

ದೇವಚಳ್ಳ ಗ್ರಾಮದ ಸ. ಕಿ. ಪ್ರಾ. ಶಾಲೆ ವಾಲ್ತಾಜೆ ಇದರ ವತಿಯಿಂದ ಶಾರದಾ ಪೂಜೆ, ಆಯುಧ ಪೂಜೆ, ಸನ್ಮಾನ, ಶಾಲೆಗೆ ಬಟ್ಟಲು ಕೊಡುಗೆ ಕಾರ್ಯಕ್ರಮ ನಡೆಯಿತು. ಶಾರದಾ ಪೂಜಾ ಮತ್ತು ಆಯುಧ ಪೂಜಾ ಕಾರ್ಯಕ್ರಮವನ್ನು ಪುರೋಹಿತ ರಾಜಗೋಪಾಲ ಭಟ್ ನೆರವೇರಿಸಿದರು. ಶಾಲೆಗೆ ಶಾಶ್ವತ ಬಟ್ಟಲು ಕೊಡುಗೆಯನ್ನು ಶ್ರೀಮತಿ ಮತ್ತು ಉಮೇಶ್ ಮುಂಡೋಡಿ, ಚೇತನ್ ಮುಂಡೋಡಿ, ಕೆನಡಾದ ಉದ್ಯಮಿ ದಿವಾಕರ ಕೊಂಬೆಟ್ಟು, ಜಯಪ್ರಕಾಶ್ ಜಾಲುಮನೆಯವರು ಒಟ್ಟು ೧೨೫ಬಟ್ಟಲು ನೀಡಿದರು. ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ ಬಟ್ಟಲುಗಳನ್ನು ಶಾಲೆಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಒಂದೇ ದಿನದಲ್ಲಿ ಶಾಲೆಯ ಪೈಂಟಿಂಗ್ ಕೆಲಸ ನಿರ್ವಹಣೆ ಮಾಡಿಕೊಟ್ಟ ಸಮಾಜ ಸೇವಕ ಸತೀಶ್ ಹಾಲೆಮಜಲ್ ಇವರನ್ನು ಶಾಲಾ ಯಸ್. ಡಿ. ಯಂ. ಸಿ. ವತಿಯಿಂದ ಸನ್ಮಾನಿಸಲಾಯಿತು.ಪೈಂಟಿಂಗ್ ಕೆಲಸಕ್ಕೆ ಶ್ರಮದಾನ ಮೂಲಕ ಸಹಕರಿಸಿದ ಶಾಲಾ ಮುಖ್ಯ ಅಡುಗೆ ಸಿಬ್ಬಂದಿ ಗಿರಿಜಾ ಚಿದ್ಗಲ್, ಮತ್ತು ಚಂದ್ರಶೇಖರ ಚಿದ್ಗಲ್, ಉನ್ನತ್ ಕೊರಂಬಡ್ಕರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಯಸ್. ಡಿ. ಯಂ. ಸಿ. ಅಧ್ಯಕ್ಷ ಚಂದ್ರಶೇಖರ ಕಡೋಡಿ, ಉಪಾಧ್ಯಕ್ಷೆ ಪುಷ್ಪ ಮೀನಾಜೆ, ಶಾಲಾ ಮುಖ್ಯ ಗುರು ನಂದನ್ ಕೆ. ಎಸ್. ಉಳಿಬೈಲ್, ಶಾಲಾ ಅಧ್ಯಾಪಕ ಅಕ್ಬರ್ ಅಲಿ, ಜಯರಾಮ್ ಕಡ್ಲಾರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರುಗಳು ಸ್ವಾಗತಿಸಿದರು. ದಾಮೋದರ ಮೀನಾಜೆ ಕಾರ್ಯಕ್ರಮ ನಿರೂಪಿಸಿದರು. ಪುಟಾಣಿಗಳಾದ ಹಿತೇಶ್, ಬೃಂದಾ, ಚಂಭಾ ಶ್ರೀ, ಹರ್ಷಿಣಿ, ಯಜ್ಞ ಶ್ರೀ, ರೇಷ್ಮಾ ಪ್ರಾರ್ಥನೆ ನೆರವೇರಿಸಿದರು. ಯಸ್. ಡಿ. ಯಂ. ಸಿ. ಸದಸ್ಯೆ. ಗೀತಾ ಮಾಡಬಾಕಿಲು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾರ್ವಜನಿರಿಗೆ ಆಟೋಟ ಸ್ಪರ್ಧೆ ನಡೆಸಲಾಯಿತು. ಪಂದ್ಯಾಟದ ನಿರ್ಣಯಕರಾಗಿ ಜಯರಾಮ್ ಕಡ್ಲರು, ಮಾಧವ ಯೆರ್ದಡ್ಕ , ಅಮೃತ್ ಮುಂಡೋಡಿ ಹಾಗೂ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನಿರಂತ್ ದೇವಸ್ಯ ನಡೆಸಿದರು. ಯುವಸೇವಾ ಕ್ರೀಡಾ ಸಂಘ ವಾಲ್ತಾಜೆ , ಯಶಸ್ವಿ ಮಹಿಳಾ ಮಂಡಲ ವಾಲ್ತಾಜೆ, ಯಸ್. ಡಿ. ಯಂ. ಸಿ. ಸರ್ವ ಸದಸ್ಯರು ಹಾಗೂ ಊರವರು ಸಹಕಾರ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.