Breaking News

ಕಳಂಜ ಬಾಳಿಲ ಸ.ಸಂಘದಲ್ಲಿ ಆತ್ಮನಿರ್ಭರ ಭಾರತ ಉದ್ಯೋಗ ನೈಪುಣ್ಯ ತರಬೇತಿ, ದಾನಿಗಳ ನಾಮಫಲಕ ಅನಾವರಣ

Advt_Headding_Middle

ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಮತ್ತು ಪಠ್ಯ ಪುಸ್ತಕಗಳ ಬಿಡುಗಡೆ ಮತ್ತು ಸಂಘದ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯವನ್ನಿತ್ತ ದಾನಿಗಳ ನಾಮಫಲಕ ಅನಾವರಣ ಕಾರ್ಯಕ್ರಮ ಅ. 8ರಂದು ನಡೆಯಿತು.

ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪುರವರ ಅಧ್ಯಕ್ಷತೆಯಲ್ಲಿ ನಡೆದ ವಿವೇಕಾನಂದ ಪಾಲಿಟೆಕ್ನಿಕ್ ಪ್ರವರ್ತಿತ
ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಪ್ರಾಂಶುಪಾಲರಾದ ಗೋಪಿನಾಥ ಶೆಟ್ಟಿ ತರಬೇತಿ ನೀಡಿದರು.15 ವಿಷಯಗಳನ್ನು ಕುರಿತ ಪಠ್ಯ ಪುಸ್ತಕಗಳನ್ನು ಆಯುರ್ವೇದ ಚಿಕಿತ್ಸಕರಾದ ಶ್ರೀಕೃಷ್ಣ ಚೊಕ್ಕಾಡಿ ಬಿಡುಗಡೆಗೊಳಿಸಿದರು. ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾಲಿನಿ ಪ್ರಸಾದ್ ಪ್ರಾರ್ಥಿಸಿದರು. ನಿರ್ದೇಶಕ ಅಜಿತ್ ರಾವ್ ಕಿಲಂಗೋಡಿ ಸ್ವಾಗತಿಸಿ ವಂದಿಸಿದರು. ಸಂಘದ ನಿರ್ದೇಶಕರಾದ ಎನ್. ವಿಶ್ವನಾಥ ರೈ, ಬಿ. ಸುಭಾಶ್ಚಂದ್ರ ರೈ, ಭಾರತೀಶಂಕರ ಎ, ಮೇದಪ್ಪ ಗೌಡ ಟಿ, ಕರುಣಾಕರ ಶೆಟ್ಟಿ ಎನ್, ಸುಬ್ರಹ್ಮಣ್ಯ ಕೆ.ಎಲ್, ಶುಭ ಕುಮಾರ್ ಬಿ, ವಿಶ್ವನಾಥ ಪರವ, ಶ್ರೀಮತಿ ಎ. ಪುಷ್ಪಾವತಿ, ಶ್ರೀಮತಿ ಪಂಕಜಾಕ್ಷಿ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಸಂಘದ ಮಾಜಿ ಅಧ್ಯಕ್ಷ ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ಹಾಗೂ ಪ್ರಧಾನ ಗೌರವ ಅರ್ಚಕರಾದ ವಾರಣಾಶಿ ಗೋಪಾಲಕೃಷ್ಣ ನಾಮಫಲಕ ಅನಾವರಣಗೊಳಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪುರವರು ಸ್ವಾಗತಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ ವಂದಿಸಿದರು. ಕಛೇರಿ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.