ಸುಳ್ಯ: ಕೆ.ವಿ.ಜಿ ಕಾಲೇಜ್ ಆಫ್ ಇಂಜಿನಿಯರಿಂಗ್

Advt_Headding_Middle

B.Sc. (Honors) Program ಹೊಸ ಕೋರ್ಸು ಮತ್ತು ಪ್ರವೇಶಕ್ಕೆ ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯುನಿವರ್ಸಿಟಿ (ವಿ.ಟಿ.ಯು.) ಬೆಳಗಾವಿ ಮತ್ತು ಕರ್ನಾಟಕ ಸರಕಾರದಿಂದ ಅನುಮತಿ ಪತ್ರ ಪ್ರದಾನ

ಕೇಂದ್ರ ಸರಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ NEP ಅಡಿಯಲ್ಲಿ, ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯುನಿವರ್ಸಿಟಿ (ವಿ.ಟಿ.ಯು.), ಬೆಳಗಾವಿ ಇದರ ಸಂಯೋಜನೆಗೆ ಒಳಪಟ್ಟ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರಲ್ಲಿ 4 ವರ್ಷದ B.Sc. (Honors) Specialisation in (Artificial Intelligence(AI)/ Internet of Things (IoT))  ಕೋರ್ಸನ್ನು 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ವಿಶ್ವವಿದ್ಯಾಲಯವು ಕಾಲೇಜನ್ನು ಪ್ರಥಮವಾಗಿ ಆಯ್ಕೆ ಮಾಡಿರುತ್ತದೆ.


ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯವರಾದ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಂದ ಅ.12 ರಂದು ಈ ಸಂಬಂಧವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಅನುಮತಿ ಪತ್ರವನ್ನು ಸ್ವೀಕರಿಸಿದರು.
ಇದೀಗ ಈ ಕೋರ್ಸ್‌ಗೆ ದಾಖಲಾತಿ ಪ್ರಾರಂಭವಾಗಿದ್ದು ಆಸಕ್ತ ವಿದ್ಯಾರ್ಥಿಗಳು ಕಾಲೇಜನ್ನು ಸಂಪರ್ಕಿಸಬಹುದು. ಈ ಕೋರ್ಸಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ Artificial Intelligence(AI), Internet of Things (IoT), Cyber security ಮುಂತಾದವುಗಳನ್ನು ಕಲಿಯುವ ಸುವರ್ಣಾವಕಾಶವಿದೆ.
ಈ ಕೋರ್ಸ್‌ಗೆ ವಿದ್ಯಾರ್ಥಿಗಳು ಸೇರ್ಪಡೆಗೊಂಡಲ್ಲಿ ಈ ಕೆಳಗೆ ತಿಳಿಸಿದ ಪದವಿಗಳು/ಸರ್ಟಿಫಿಕೇಟ್‌ಗಳು ವಿಶ್ವವಿದ್ಯಾಲಯದಿಂದ (ವಿ.ಟಿ.ಯು) ದೊರಕಲಿದೆ. ಕೇಂದ್ರ ಸರಕಾರವು ಇಂತಹ ಹೊಸ ಕೌಶಲ್ಯ ಆಧಾರಿತ ಶಿಕ್ಷಣ ನೀತಿಯನ್ನು ಜಾರಿಗೆ ತಂದಿರುವುದರಿಂದಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅವರ ಅರ್ಹತೆ ಮತ್ತು ಕೌಶಲ್ಯಕ್ಕೆ ತಕ್ಕನಾದ ಉತ್ತಮ ವೃತ್ತಿಗಳನ್ನು ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಎ.ಒ.ಎಲ್.ಇ.(ರಿ) ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಎ. ಜ್ಞಾನೇಶ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೃತೀಯ ವರ್ಷ (3rd Year) ಪೂರೈಕೆಯ ನಂತರ ಬಿ.ಎಸ್ಸಿ. ಪದವಿ
ನಾಲ್ಕನೇ ವರ್ಷ (4th Year) ಪೂರೈಕೆಯ ನಂತರ ಬಿ.ಎಸ್ಸಿ. (Honors) ಪದವಿ

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.