Breaking News

ಬೆಳ್ಳಾರೆ: ಕ್ಷಯರೋಗ ಪೀಡಿತ ವ್ಯಕ್ತಿಯ ಚಿಕಿತ್ಸೆಗೆ ನೆರವಾದ ಜೇಸಿ ತಂಡ

Advt_Headding_Middle

ಬೆಳ್ಳಾರೆ ಗ್ರಾಮದ ದರ್ಖಾಸು, ಚೀಮುಳ್ಳು ಎಂಬಲ್ಲಿ ಕ್ಷಯ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ನರನ್ನು‌ ಬೆಳ್ಳಾರೆ ಜೇಸಿ ತಂಡ ಆರೈಕೆ ಮಾಡಿ ಮಂಗಳೂರಿನ ಕ್ಷಯರೋಗ ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಚೀಮುಳ್ಳು ಬಳಿಯ ಕೇಳಪ್ಪ ಎಂಬವರಿಗೆ ಉಳಿದುಕೊಳ್ಳಲು ಸೂಕ್ತ ಸೂರಿಲ್ಲ. ಊಟ ಉಪಾಹಾರದ ಸೂಕ್ತ ವ್ಯವಸ್ಥೆ ಇಲ್ಲ. ಇದನ್ನು ತಿಳಿದುಕೊಂಡ ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜೇಸಿ ಲೋಕೇಶ್ ತಂಟೆಪ್ಪಾಡಿ ಡಾ।। ಎಸ್ ನಾರಾಯಣ್ ಭಟ್ ಪ್ರತಿಷ್ಠಾನದ ನೆರವಿನ ಅಂಬ್ಯುಲೆನ್ಸ್ ಮೂಲಕ ರೋಗಿಯನ್ನು ಮಂಗಳೂರು ಮೂಡುಶೆಡ್ಡೆ ಎದೆರೋಗಗಳ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಜೇಸಿಸ್ ನ ಅಧ್ಯಕ್ಷ ಜೇಸಿ ಪದ್ಮನಾಭ ಕಲಾಸುಮಾರವರು ರೋಗಿಯ ವೈಯಕ್ತಿಕ ವೆಚ್ಚಕ್ಕಾಗಿ ಜೇಸಿಸ್ ವತಿಯಿಂದ ಆರ್ಥಿಕ ನೆರವನ್ನು ನೀಡಿದರು. ಡಾ।। ಎಸ್. ನಾರಾಯಣ್ ಭಟ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜೇಸಿ ಕೇಶವಚಂದ್ರ ಮಿತ್ರ ಬೆಳ್ಳಾರೆ, ಪ್ರತಿಷ್ಠಾನದ ಸದಸ್ಯ ಹಾಗೂ ವಾಹನ ಚಾಲಕ ಸದಾಶಿವ ಮಣಿಯಾಣಿ ಉಪಸ್ಥಿತರಿದ್ದು ಸಹಕಾರ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.