ಪಂಜ: ಶ್ರೀ ಶಾರದೋತ್ಸವ  ಧಾರ್ಮಿಕ ಸಭೆ -ಪ್ರತಿಭಾ ಪುರಸ್ಕಾರ ಸಂಸ್ಕಾರಯುತ ಜೀವನಕ್ಕೆ ಪ್ರೇರಣೆ ಅಗತ್ಯ : ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ

Advt_Headding_Middle

ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ, ಪಂಜ ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ ಶ್ರೀ ಶಾರದೋತ್ಸವ -2021ವಿವಿಧ ವೈದಿಕ ಧಾರ್ಮಿಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯ ಕ್ರಮಗಳೊಂದಿಗೆ ಅ.14.ರಂದು
ಜರಗಿತು.ಪ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ರೋಟರಿ ವಿದ್ಯಾಸಂಸ್ಥೆಯ ಸಹಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ ಉಪನ್ಯಾಸ ನೀಡಿ ” ಪ್ರತಿಯೊಬ್ಬರು ನಮ್ಮ
ಪವಿತ್ರವಾದ ಧಾರ್ಮಿಕ ವಿಚಾರಗಳನ್ನು ಮೈಗೂಡಿಸಿಕೊಂಡು, ಸಂಸ್ಕಾರಯುತ ಜೀವನ ನಡೆಸಲು ಮಕ್ಕಳಿಗೆ ಪ್ರೇರಣೆ ನೀಡಿದಾಗ.ಜೀವನದ ಸಾರ್ಥಕತೆ ಕಾಣಲು ಸಾಧ್ಯ”ಎಂದು ಹೇಳಿದರು.ಸಭಾಧ್ಯಕ್ಷತೆಯನ್ನು ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ ಪಳಂಗಾಯ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿದರು.
ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಗೌರವಾಧ್ಯಕ್ಷ ಮಾಧವ ಗೌಡ ಜಾಕೆ, ಕಾರ್ಯದರ್ಶಿ
ಗುರುಪ್ರಸಾದ್ ತೋಟ,ಉತ್ಸವ ಸಮಿತಿ ಉಪಾಧ್ಯಕ್ಷ ಲೋಕೇಶ್ ಬರೆಮೇಲು,ಕಾರ್ಯದರ್ಶಿ ನಾಗಮಣಿ ಕೆದಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ : ಕರಿಕ್ಕಳ ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿನಿ ವೀಕ್ಷಾ ಎನ್.ಎಸ್, ಪಾಂಡಿಗದ್ದೆ ಸ.ಹಿ.ಪ್ರಾ.ಶಾಲಾ
ವಿದ್ಯಾರ್ಥಿ ಸಾಯಿ ದಿಗಂತ್ ಎಸ್, ಕೋಟೆಗುಡ್ಡೆ ಸ.ಕಿ.ಪ್ರಾ.ಶಾಲಾ ವಿದ್ಯಾರ್ಥಿನಿ ಶೌರಿ. ಕೆ, ಕೂತ್ಕುಂಜ ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿನಿ ಸಿಂಚನ ಬಿ. ಕಲ್ಮಡ್ಕಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿನಿ ತೃಷಾ. ಎಸ್, ನಾಗತೀರ್ಥ ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿನಿ ವರ್ಷಿತಾ ಯಂ, ಪಂಬೆತ್ತಾಡಿ ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿನಿ ಪೂಜಾಶ್ರೀ, ಪಂಜ ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿನಿ ಜಯಶ್ರೀ,ಪಡ್ಪಿನಂಗಡಿ ಸ.ಹಿ.ಪ್ರಾ.ಶಾಲಾ ವಿದ್ಯಾರ್ಥಿ ಭರತ್ ರವರು ಪುರಸ್ಕಾರ ಸ್ವೀಕರಿಸಿದರು. ಇದೇ ವೇಳೆ ತರಬೇತುದಾರ ರಮೇಶ್ ಮೆಟ್ಟಿನಡ್ಕ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ
ಸುದರ್ಶನ ಪಟ್ಟಾಜೆ ಪ್ರಾರ್ಥಿಸಿದರು.ಬಾಲಕೃಷ್ಣ ಪುತ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ನಾಗಮಣಿ ಕೆದಿಲ ವಂದಿಸಿದರು. ವೈದಿಕ ಕಾರ್ಯಕ್ರಮಗಳು ವೆಂಕಟರಮಣ ಭಟ್ ಬಳ್ಳಕ ರವರ ನೇತೃತ್ವದಲ್ಲಿ ನಡೆಯಿತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.