ನವರಾತ್ರಿ ಪರ್ವದ ಹತ್ತನೆಯ ದಿನ ವಿಜಯದಶಮಿ

Advt_Headding_Middle


ಜೀವನಕ್ಕೆ ಹೊಸತನವನ್ನು – ನವತ್ವವನ್ನು – ತುಂಬುವುದೇ ನವರಾತ್ರಿ ಆಚರಣೆಯ ಪ್ರಧಾನ ಉದ್ದೇಶ. ಜೀವನೋತ್ಸಾಹಕ್ಕೆ ಪೂರಕವಾಗಿ ಒದಗುವಂಥದ್ದು ವಿಜಯ, ಎಂದರೆ ಗೆಲುವು. ಅದು ಯಾರಿಗೆ ತಾನೆ ಬೇಡ? ನಮ್ಮ ಜೀವನವು ಜಯವನ್ನು ಪಡೆಯಲಿ ಎಂಬ ಆಶಯದಿಂದ ಮಾತೃಶಕ್ತಿಯನ್ನು ಆರಾಧಿಸುವ ದಿನವೇ ವಿಜಯದಶಮಿ.

ಯುದ್ಧದಲ್ಲಿ ಜಯಸಿಗಲೆಂದು ವಿಜಯದಶಮಿಯಂದು ದೇವಿಯನ್ನು ಪೂಜಿಸುತ್ತಿದ್ದರು; ಹಿಂದಿನ ದಿನ ಆಯುಧಗಳ ಪೂಜೆ ನಡೆದಿರುತ್ತದೆ; ಅದಕ್ಕೂ ಮೊದಲು ದುರ್ಗೆಯ ಆರಾಧನೆಯೂ ನಡೆದಿರುತ್ತದೆ. ಯುದ್ಧ ಎನ್ನುವುದು ಇಬ್ಬರು ಶತ್ರುಗಳ ನಡೆಯುವ ಕಾದಾಟವೇ ಆಗಬೇಕಿಲ್ಲವಷ್ಟೆ! ನಮ್ಮಲ್ಲೂ ದುರ್ಗುಣಗಳೆಂಬ ಹಲವು ಶತ್ರುಗಳು ಹೊಂಚುಹಾಕಿ ಕಾಯುತ್ತಿರುತ್ತವೆ, ನಮ್ಮ ಜೀವನವನ್ನು ಸೋಲಿಸಲು. ನಾವು ಅವುಗಳ ವಿರುದ್ಧವೂ ಹೋರಾಟ ಮಾಡಿ ಜಯವನ್ನು ಸಂಪಾದಿಸಬೇಕು. ಆಗಷ್ಟೇ ಜೀವನಹೋರಾಟ ಸಾರ್ಥಕತೆಯನ್ನು ಪಡೆಯುವುದು. ಇದರ ಸಾಂಕೇತಿಕತೆಯನ್ನೂ ವಿಜಯದಶಮಿಯ ಆಚರಣೆಯಲ್ಲಿ ಕಾಣುತ್ತೇವೆ.

ರೂಪಾನಂದ (ಹರೀಶ್) ಗುಂಡ್ಯ-ಆಲೆಟ್ಟಿ

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.