ಪಂಜದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ತಂಡದಿಂದ ಯಕ್ಷ ಗಾನ ವೈಭವ – ಪದ್ಯಾಣರಿಗೆ ನುಡಿನಮನ

Advt_Headding_Middle

ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ, ಪಂಜ ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ ಅ. 14 ರಂದು ಜರುಗಿದ ಶ್ರೀ ಶಾರದೋತ್ಸವದ ಪ್ರಯುಕ್ತ ಯಕ್ಷ ಗಾನ ವೈಭವ ಕಾರ್ಯಕ್ರಮ ಜರುಗಿತು.

ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪ್ರಶಾಂತ್ ರೈ ಪಲ್ಲೋಡಿ, ಶ್ರೀಮತಿ ಭವ್ಯಶ್ರೀ ಕುಲ್ಕುಂದ, ರಚನಾ ಚಿದ್ಗಲ್ಲು ವೈವಿಧ್ಯಮಯ ಹಾಡುಗಳ ಮೂಲಕ ಮನ ರಂಜಿಸಿದರು. ಚೆಂಡೆಯಲ್ಲಿ ರೋಹಿತ್ ಉಚ್ಚಿಲ, ಗಗನ್ ಪಂಜ, ಮದ್ದಳೆಯಲ್ಲಿ ಲವಕುಮಾರ್
ಐಲ ಪಾಲ್ಗೊಂಡಿದ್ದರು.

ರಾಮಕುಂಜ ಪದವಿ ಕಾಲೇಜು ಪ್ರಾಂಶುಪಾಲ, ಯಕ್ಷಗಾನ ಅರ್ಥಧಾರಿ ಗಣರಾಜ್ ಕುಂಬ್ಳೆ ಯಕ್ಷ ಗಾನ ವೈಭವನ್ನು ನಿರೂಪಿಸಿದರು. ತೀರ್ಥಾನಂದ ಕೊಡೆಂಕಿರಿ ಕಾರ್ಯಕ್ರಮ ನಿರೂಪಿಸಿದರು. ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ಹಾಗೂ ಶಾರದೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಪಳಂಗಾಯ ಕಲಾವಿದರನ್ನು ಗೌರವಿಸಿದರು.

ಇದೇ ವೇಳೆ ಅ.12 ರಂದು ವಿಧಿವಶರಾದ ಯಕ್ಷಗಾನ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ರವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಸಲ್ಲಿಸಲಾಯಿತು. ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ನುಡಿನಮನ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.