ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ಏಕಾದಶಿಯಂದು ಸ್ವಚ್ಚ ಮಂದಿರ ಸೇವಾ ಅಭಿಯಾನ 

Advt_Headding_Middle

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಿಂದ ಕ್ಷೇತ್ರದಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲುವ ಉದ್ದೇಶದಿಂದ ಆಡಳಿತ ಮಂಡಳಿಯು ಸ್ವಚ್ಚ ಮಂದಿರ ಸೇವಾ ಅಭಿಯಾನವನ್ನು ಆರಂಭಿಸಿರುವುದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ್ ಸುಳ್ಳಿ ತಿಳಿಸಿದ್ದಾರೆ.
ಪ್ರತಿ ಏಕಾದಶಿಯಂದು ಕ್ಷೇತ್ರಾದ್ಯಂತ ಏಕಕಾಲದಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳಲಿದ್ದು ಸ್ವಚ್ಚ ಸೇವಾ ದಿವಸ್ ಎಂದು ಪರಿಗಣಿಸಿಕೊಂಡು ಸೇವೆ ನೆರವೇರಿಸಲಾಗುವುದು ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ತಿಂಗಳಲ್ಲಿ ಬರುವ ಎರಡು ಏಕಾದಶಿ ದಿನ ಕ್ಷೇತ್ರಾದ್ಯಂತ ಮಧ್ಯಾಹ್ನ ೨ ಗಂಟೆಯಿಂದ ೩.೩೦ರ ತನಕ ಸ್ವಚ್ಚತೆ ನಡೆಸಲಾಗುವುದು.ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ, ಮಾಸ್ಟರ್ ಪ್ಲಾನ್ ಸಮಿತಿ, ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗ, ದೇವಳದ ಆಡಳಿತದ ಎಸ್‌ಎಸ್‌ಪಿಯು ಕಾಲೇಜು, ಪ್ರೌಢಶಾಲಾ ವಿಭಾಗ, ಕೆ.ಎಸ್.ಎಸ್.ಕಾಲೇಜುಗಳ ಎನ್.ಎಸ್.ಎಸ್, ಸ್ಕೌಟ್ಸ್ ಗೈಡ್ಸ್, ರೋವರ್ ರೇಂರ‍್ಸ್, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಸದಸ್ಯರು, ವರ್ತಕರು ಸೇರಿದಂತೆ ಏಕಕಾಲದಲ್ಲಿ ಸ್ವಚ್ಚತೆ ಮಾಡಲಾಗುವುದು.
ದೇವಳದ ಒಳಾಂಗಣ, ಹೊರಾಂಗಣ, ಭೋಜನ ಶಾಲೆ, ದರ್ಪಣ ತೀರ್ಥ ನದಿ, ಗೋಪುರ ವಠಾರ, ರಥಬೀದಿ, ಪಾರ್ಕಿಂಗ್ ಸ್ಥಳ, ಆಂಜನೇಯ ಗುಡಿ, ಬೈಪಾಸ್ ರಸ್ತೆ, ವಸತಿ ಗೃಹಗಳ ವಠಾರ, ಆದಿ ಸುಬ್ರಹ್ಮಣ್ಯ, ಕಾಶಿಕಟ್ಟೆ, ಬಸ್ ನಿಲ್ದಾಣ, ಸರ್ಪಸಂಸ್ಕಾರ ಬೋಜನ ಶಾಲೆ, ಕಾಶಿಕಟ್ಟೆ, ಬಿಲದ್ವಾರ, ವನದುರ್ಗಾ ದೇವಿ ದೇವಳದಿಂದ ವಲ್ಲೀಶ ಸಭಾ ಭವನದ ತನಕ, ವಲ್ಲೀಶದಿಂದ ಕುಮಾರಧಾರ ಸ್ನಾನ ಘಟ್ಟದ ತನಕ, ಅಗ್ರಹಾರ ರಸ್ತೆ ಈ ರೀತಿಯಾಗಿ ಸ್ಥಳ ನಿಗದಿ ಮಾಡಿ ಆಯಾ ಪ್ರದೇಶಗಳಿಗೆ ತಂಡಗಳನ್ನು ನಿಯೋಜನೆ ಮಾಡಿ ಈಗಾಗಲೇ ಜವಬ್ದಾರಿ ನೀಡಲಾಗಿದೆ. ತಮಗೆ ನಿಗದಿ ಪಡಿಸಿದ ಸ್ಥಳದಲ್ಲಿ ಸೇವೆ ನೆರವೇರಿಸುವುದಾಗಿದೆ.
ಶ್ರೀ ದೇವರಿಗೆ ಸಲ್ಲಿಸುವ ಸೇವೆಗಳಲ್ಲಿ ಸ್ವಚ್ಚತಾ ಸೇವೆಯು ಪ್ರಮುಖವಾಗಿದ್ದು ಇದನ್ನು ನೆರವೇರಿಸಲು ಸ್ವಯಂಪ್ರೇರಿತರಾಗಿ ಆಗಮಿಸುವ ಭಕ್ತರಿಗೆ ಅವಕಾಶ ಮಾಡಿಕೊಡಲಾಗುವುದು.ದೇವಳದಲ್ಲಿ ಭಕ್ತರು ಹೆಸರನ್ನು ನೋಂದಾಯಿಸಿಕೊಂಡು ಸೇವೆ ಮಾಡಬಹುದು ಎಂದರು.

ನಾಳೆ ಚಾಲನೆ:

ಏಕಾದಶಿಯ ದಿನವಾದ ಅ.16 ರಂದು ಮಧ್ಯಾಹ್ನ ೨ ಗಂಟೆಗೆ ಸ್ವಚ್ಚ ಮಂದಿರ ಸೇವಾ ಅಭಿಯಾನಕ್ಕೆ ಸಂಸದ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ.ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸರ್ವರೂ ಸ್ವಚ್ಚತಾ ಸೇವೆ ನಡೆಸುವ ಮೂಲಕ ಅಭಿಯಾನವು ಪ್ರಾರಂಭಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.