ಪೈಲಾರು : ಅರೆಭಾಷೆ ಸಂಸ್ಕೃತಿ ಶಿಬಿರ ಉದ್ಘಾಟನೆ

Advt_Headding_Middle

 

 

ನಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದಂತೆ ಭಾಷೆ ಮತ್ತು ಸಂಸ್ಕೃತಿ ನಶಿಸಿ ಹೋಗುತ್ತಿದೆ : ಲಕ್ಷ್ಮೀನಾರಾಯಣ ಕಜೆಗದ್ದೆ
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಶೌರ್ಯ ಯುವತಿ ಮಂಡಲ ಪೈಲಾರು ಮತ್ತು ಚೊಕ್ಕಾಡಿ ಮುನ್ನೂರೊಕ್ಕಲು ಗೌಡ ಬಾಂಧವರ ಸಮಿತಿ ಸಹಯೋಗದಲ್ಲಿ 3 ದಿನದ ಅರೆಭಾಷೆ ಸಂಸ್ಕೃತಿ ಶಿಬಿರವು ಅ. 15 ರಂದು ಪೈಲಾರು ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ಆರಂಭಗೊಂಡಿತು.
ಚೊಕ್ಕಾಡಿ ಮುನ್ನೂರೊಕ್ಕಲು ಗೌಡ ಬಾಂಧವರ ಸಮಿತಿ ಅಧ್ಯಕ್ಷರಾದ ವೆಂಕಟ್ರಮಣ ಕರ್ಮಾಜೆ ಮತ್ತು ಗೌರವಾಧ್ಯಕ್ಷರಾದ ಪುಟ್ಟಣ್ಣಗೌಡ ನಾಯರ್ ಕಲ್ಲು ದೀಪ ಬೆಳಗಿಸಿ ಭತ್ತದ ಮುಡಿಗೆ ಭತ್ತವನ್ನು ಹಾಕಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಯವರು ” ನಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತಿದ್ದಂತೆ ಭಾಷೆ ಮತ್ತು ಸಂಸ್ಕೃತಿಯ ಪ್ರೇಮ ಕಡಿಮೆಯಾಗಿ ಅದು ನಶಿಸಿ ಹೋಗುತ್ತಿದೆ. ಇದನ್ನು ತಡೆಯುವ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಲು ಇಂಥ ಶಿಬಿರಗಳ ಅಗತ್ಯವಿದೆ ” ಎಂದು ಹೇಳಿದರು.
ಅಕಾಡೆಮಿ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಅಣ್ಣಾಜಿ ಗೌಡ ಪೈಲೂರು, ಅಮರಮುಡ್ನೂರು ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಪದ್ಮಪ್ರಿಯಾ ಮೇಲ್ತೋಟ, ಪೈಲಾರು ಸ.ಹಿ.ಪ್ರಾ. ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ಯೋಗೀಶ್ ಮಾಡಬಾಕಿಲು, ಶಿಬಿರದ ಸಂಚಾಲಕರಾದ ಸದಾಶಿವ ಮೂಕಮಲೆ, ಶೌರ್ಯ ಯುವಕ ಮಂಡಲದ ಅಧ್ಯಕ್ಷರಾದ ಕು. ಚರಿಷ್ಮಾ ಕಡಪಳ ಉಪಸ್ಥಿತರಿದ್ದರು. ಕುಮಾರಿ ದಿಶಾ ಮಾಡಬಾಕಿಲು ಸ್ವಾಗತಿಸಿ, ಅನುಜ್ಞಾ ಸಂಕೇಶ ಪ್ರಾರ್ಥನೆಗೈದರು. ಚರಿಷ್ಮಾ ಕಡಪಳ ವಂದಿಸಿದರು. ಅಶೋಕ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.