ದೇರಾಜೆ ಐನ್ ಮನೆಯಲ್ಲಿ ಚಿತ್ರೀಕರಣಗೊಂಡ ಆಲ್ಬಂ ಹಾಡು ಕುಂಬಳೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಬಿಡುಗಡೆ

Advt_Headding_Middle

 

ಸೂರ್ಯರಶ್ಮಿ ಕ್ರಿಯೇಶನ್ಸ್ ಸುಳ್ಯ ಅರ್ಪಿಸುವ ಏನ ಬೇಡಲಿ ಕಾಳಿಕಾಂಬೆಯೇ ಆಲ್ಬಂ ಗೀತೆ ದೇರಾಜೆ ಕುಟುಂಬಸ್ಥರ ಐನ್ ಮನೆಯಲ್ಲಿ ಇತ್ತೀಚೆಗೆ ಚಿತ್ರೀಕರಣಗೊಂಡಿದ್ದು ಇದರ ಬಿಡುಗಡೆ ಕಾರ್ಯಕ್ರಮ ಕುಂಬಳೆಯ ಆರಿಕ್ಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆಯಿತು.

ಉದಯಭಾಸ್ಕರ್ ಸುಳ್ಯ ಆಲ್ಬಂ ಗೀತೆಯ ಕುರಿತಾಗಿ ಮಾತನಾಡಿದರು. ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಪುರೋಹಿತ ರಾಮಕೃಷ್ಣ ಆಚಾರ್ಯ ಸಾಂಕೇತಿಕ ಧ್ವನಿತಟ್ಟೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ದೇವಸ್ಥಾನದ ಅಧ್ಯಕ್ಷರಾದ ಶ್ರೀ ರಾಜೇಶ್ ಆಚಾರ್ಯ ವಕೀಲರು, ಕಾರ್ಯದರ್ಶಿ ಶ್ರೀ ವಾಸುದೇವ ಆಚಾರ್ಯ, ಮಾತೃ‌ ಸಂಘದ ಅಧ್ಯಕ್ಷೆ ಶ್ರೀಮತಿ ಜಯಂತಿ ವಾಸುದೇವ ಆಚಾರ್ಯ ಹಾಗೂ ಸೂರ್ಯರಶ್ಮಿ ಕ್ರಿಯೇಶನ್ಸ್ ತಂಡದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲೋಹಿತ್ ಕುಮಾರ್ ಮಠದಮನೆ ಕಾರ್ಯಕ್ರಮ ನಿರೂಪಿಸಿದರು. ಧ್ವನಿವರ್ಧಕ ನಿರ್ವಹಣೆಯಲ್ಲಿ ಕೇಶವ ಆಚಾರ್ಯ ಬೆರಿಪದವು, ಪ್ರಾಜೆಕ್ಟರ್ ನಿರ್ವಹಣೆಯಲ್ಲಿ ತನಿಶ್ ಆಚಾರ್ಯ ಸಸಿಹಿತ್ಲು ಮತ್ತು ಜಿತೇಶ್ ಆಚಾರ್ಯ ಕುಂಬಳೆ ಹಾಗೂ ಕಾರ್ಳೆ ಶ್ರೀ ಕಾಳಿಕಾಂಬಾ ಯುವಕ ಸಂಘದ ಪದಾಧಿಕಾರಿಗಳು ವ್ಯವಸ್ಥೆಯಲ್ಲಿ ಸಹಕರಿಸಿದ್ದರು.

ಯುವ ಸಾಹಿತಿ ಉದಯಭಾಸ್ಕರ್ ಸುಳ್ಯ ಅವರ ಸಾಹಿತ್ಯ ರಚನೆ, ಪರಿಕಲ್ಪನೆ ಹಾಗೂ ನಿರ್ವಹಣೆಯಲ್ಲಿ ಮೂಡಿಬಂದಿರುವ ಈ ಗೀತೆಗೆ ಗಾಯಕ ಉದಯನ್ ವಿಶ್ವಕರ್ಮ ಪಂಜಿಕಲ್ಲು ಅವರ ರಾಗ ಸಂಯೋಜನೆ, ಪ್ರಕಾಶ್ ಕುಂಬ್ಲೆಯವರ ಸಂಗೀತವಿದೆ. ದೀಪಿಕಾ ನಿತಿನ್ ಮತ್ತು ಅವರ ಮಗ ನಿಗಮ್ ಎನ್ ಆಚಾರ್ಯ ತಾಯಿ ಮಗುವಿನ ಸಂಭಾಷಣೆ ರೂಪದ ಈ ಹಾಡಿಗೆ ಕಂಠದಾನ ಮಾಡಿದ್ದಾರೆ. ವಿದುಷಿ ಸುಶ್ಮಿತಾ ಯತೀಶ್ ಆಚಾರ್ಯ ಅವರ ನೃತ್ಯ ಪ್ರಸ್ತುತಿ ಹಾಗೂ ಬಾಲಪ್ರತಿಭೆ ಜ್ಯೇಷ್ಠ ಆಚಾರ್ಯ ಕೋಟೆಕಾರು ಅವರ ಚಿತ್ರ ಪ್ರಸ್ತುತಿಯನ್ನು ಒಳಗೊಂಡಿರುವ ಈ ಗೀತೆಯನ್ನು ಪುತ್ತೂರಿನ ವೇವ್ಸ್ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಮಾಡಲಾಗಿದ್ದು, ಈ ಗೀತೆಯ ವೀಡಿಯೋ ದೃಶ್ಯಾವಳಿಗಳನ್ನು ಪರಮ್ ಸ್ಟುಡಿಯೋ ಸುಳ್ಯ ಅವರು ಚಿತ್ರೀಕರಿಸಿ ಸಂಕಲಿಸಿದ್ದಾರೆ.

ಇದೀಗ ಈ ಗೀತೆಯು ಜಾಲತಾಣದಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸುತ್ತಿದ್ದು ಸೂರ್ಯರಶ್ಮಿ ಕ್ರಿಯೇಶನ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.

 

https://youtu.be/uNEIIIDxc3s

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.