ಬಾಳಿಲ: ಡಾ. ಪಿ.ಜಿ.ಎಸ್. ಪ್ರಕಾಶ್ ಸ್ಮರಣಾರ್ಥ ರಕ್ತದಾನ ಶಿಬಿರ

Advt_Headding_Middle

ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ – ಮುಪ್ಪೇರ್ಯ ಹಾಗೂ ಜಿಲ್ಲಾ ವೆನ್ ಲಾಕ್ ಆಸ್ಪತ್ರೆ ಪ್ರಾದೇಶಿಕ ರಕ್ತ ಪೂರಣ ಕೇಂದ್ರ ಮಂಗಳೂರು ಇದರ ಸಹಭಾಗಿತ್ವದಲ್ಲಿ ಡಾ. ಪಿ.ಜಿ.ಎಸ್. ಪ್ರಕಾಶ್ ರವರ ಸಂಸ್ಮರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಅ. 17ರಂದು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನಡೆಯಿತು.
ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿಯ ಗೌರವಾಧ್ಯಕ್ಷ ಯು. ರಾಧಾಕೃಷ್ಣ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕರ್ಯಕ್ರಮವನ್ನು ಬೆಳ್ಳಾರೆ ಹೊರಠಾಣಾ ಪಿ.ಎಸ್.ಐ. ಆಂಜನೇಯ ರೆಡ್ಡಿ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮ ವಿಕಾಸ ಮಂಗಳೂರು ವಿಭಾಗದ ಸಂಯೋಜಕರಾದ ಶ್ರೀನಿವಾಸ ಉಬರಡ್ಕ ಸಂಸ್ಮರಣಾ ನುಡಿಗಳನ್ನಾಡಿದರು. ಡಾ. ಪಿ.ಜಿ.ಎಸ್‌. ಪ್ರಕಾಶ್ ರ ಪತ್ನಿ ಶ್ರೀಮತಿ ಲತಾಶಂಕರಿ ಮತ್ತು ನಿವೃತ್ತ ಕಸ್ಟಮ್ಸ್ ಅಧಿಕಾರಿ ಆರ್.ಕೆ. ಭಟ್ ಕುರುಂಬುಡೇಲು, ಗೌರವ ಸಲಹೆಗಾರರಾದ ಎ.ಕೆ‌. ನಾಯ್ಕ್ ಅಮೆಬೈಲು, ಅಶೋಕ್ ಶೆಟ್ಟಿ ಅರ್ಚನ ಬಾಳಿಲ, ಸಮಿತಿಯ ಅಧ್ಯಕ್ಷ ರೋಹಿತ್ ಚಾಕೊಟೆಡ್ಕ ಮತ್ತು ಕಾರ್ಯದರ್ಶಿ ನಾಗೇಶ್ ಎನ್.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಶೋಭ ಎ.ಕೆ. ನಾಯ್ಕ್ ಪ್ರಾರ್ಥಿಸಿದರು. ಸಮಿತಿಯ ಸ್ಥಾಪಕಾಧ್ಯಕ್ಷ ಎ.ಎಂ. ಸುಧಾಕರ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮಿತಿಯ ಸದಸ್ಯ ರಾಜೇಶ್ ಅಯ್ಯನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.