ಜಟ್ಟಿಪಳ್ಳ: ಕಪಿಲ ಯುವಕ ಮಂಡಲದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle

 

ಕಪಿಲ ಯುವಕ ಮಂಡಲ ಜಟ್ಟಿಪಳ್ಳ ಇದರ ವಾರ್ಷಿಕ ಮಹಾಸಭೆ ಕಪಿಲ ಯುವ ಸದನ ಜಟ್ಟಿಪಳ್ಳದಲ್ಲಿ ನಡೆಯಿತು.
ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲ್ತಡ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಪರಸ್ಪರ ಹೊಂದಾಣಿಕೆಯಿಂದ ಇನ್ನು ಹೆಚ್ಚು ಉಪಯುಕ್ತ ಕಾರ್ಯಕ್ರಮಗಳನ್ನು ಸಂಘಟಿಸಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಊರಿನ ಕೀರ್ತಿ ಹೆಚ್ಚಿಸಬೇಕು ಎಂದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್. ಎಸ್. ಪಿಯು ಕಾಲೇಜು ಪರ್ನಾಜೆ ಇಲ್ಲಿನ ಪ್ರಾಂಶುಪಾಲರಾದ ಕೆ. ಆರ್. ಗೋಪಾಲಕೃಷ್ಣ ಇವರು ಮಾತನಾಡಿ, ಯುವಕರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಯುವಕ ಸಂಘಟನೆ ಉಪಯುಕ್ತ. ಆರಂಭದ ಉತ್ಸಾಹ ಕೊನೆಯವರೆಗೂ ಉಳಿಸಿಕೊಳ್ಳಬೇಕು. ಯುವಕರು ಯಾವತ್ತೂ ಮೊಬೈಲ್ ಅತಿಬಳಕೆಯ ಚಟ, ಇನ್ನಿತರ ಯಾವುದೇ ದುಶ್ಚಟಗಳಿಗೆ ಒಳಗಾಗಬಾರದು. ಸಂಗೀತ ಇತ್ಯಾದಿ ಒಳ್ಳೆಯ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ 2021-22ನೇ ಸಾಲಿನ ಕಪಿಲ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅದ್ಯಕ್ಷರಾಗಿ ಪ್ರದೀಪ್ ಜಟ್ಟಿಪಳ್ಳ, ಕಾರ್ಯದರ್ಶಿಯಾಗಿ ವಿಪಿನ್ ಜೆ ಮತ್ತು ಖಜಂಜಿಯಾಗಿ ಚಂದ್ರಹಾಸ ಎನ್. ಎಸ್. ಹಾಗೂ ವಿವಿಧ ಪದಾಧಿಕಾರಿಗಳನ್ನು ಆರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಯುವಕ ಮಂಡಲ ಅಧ್ಯಕ್ಷ ಚೇತನ್ ಜಟ್ಟಿಪಳ್ಳ ವಹಿಸಿದ್ದರು. ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕಿ ನಮಿತಾ ಬಿ. ವಿ, ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳದ ಅಧ್ಯಕ್ಷೆ ಸುನೀತ ರಾಮಚಂದ್ರರವರು ಉಪಸ್ಥಿತರಿದ್ದರು.
ಯುವಕ ಮಂಡಲದ ಕಾರ್ಯದರ್ಶಿ ರಾಹುಲ್ ಪ್ರಾರ್ಥಿಸಿ, ಮಾಜಿ ಅಧ್ಯಕ್ಷ ನಿರಂಜನ್ ಜಟ್ಟಿಪಳ್ಳ ಸ್ವಾಗತಿಸಿ, ವಿಪಿನ್ ಜಟ್ಟಿಪಳ್ಳ ವಂದಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ರಘುನಾಥ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.