ಆಲೆಟ್ಟಿಯಲ್ಲಿ ಕಾನೂನು ಅರಿವು ಕಾರ್ಯಾಗಾರ – ಜನನ- ಮರಣ ನೋಂದಣಿ ಕುರಿತು ಮಾಹಿತಿ

Advt_Headding_Middle

 

ಸುದ್ದಿ ಮಾಧ್ಯಮ ಗ್ರಾಮ ಸ್ವರಾಜ್ಯದ ಗಾಂಧಿ ಚಿಂತನೆ ಮೂಡಿಸಿರುವುದು ಶ್ಲಾಘನೀಯ : ವೆಂಕಪ್ಪ ಗೌಡ

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೋಲಿಸ್ ಇಲಾಖೆ, ಸುದ್ದಿ ಮಾಧ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆಲೆಟ್ಟಿ ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಅ.18 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಿವಿಲ್ ನ್ಯಾಯಧೀಶರಾದ ಯಶವಂತ್ ಕುಮಾರ್ ಕೆ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸುಳ್ಯ ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಎಂ.ವೆಂಕಪ್ಪ ಗೌಡ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ.ಇ.ಒ.ಭವಾನಿಶಂಕರ, ಸಹಾಯಕ ಸರಕಾರಿ ಅಭಿಯೋಜಕರು ಜನಾರ್ಧನ. ಬಿ, ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಪಿ.ಡಿ.ಒ ಕೀರ್ತಿಪ್ರಸಾದ್, ನ್ಯಾಯವಾದಿ ಸತೀಶ್ ಕುಂಭಕ್ಕೋಡು, ಗ್ರಾಮ ಲೆಕ್ಕಾಧಿಕಾರಿ ಶರತ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೆಚಾರಕಿ ದೀಪಿಕಾ, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಯವರು ಉಪಸ್ಥಿತರಿದ್ದರು.ಈ ಸಂದರ್ಭ ಮಾತನಾಡಿದ ನ್ಯಾಯಧೀಶರು ” ಮಕ್ಕಳ ಮುಂದಿನ ಭವಿಷ್ಯದ ನೆಲೆಯಲ್ಲಿ ಜನನ ದಿನಾಂಕ ವನ್ನು ಸರಿಯಾದ ರೀತಿಯಲ್ಲಿ ನೋಂದಣಿ ಮಾಡಬೇಕು ಹಾಗೆಯೇ ಮರಣ ಪ್ರಮಾಣ ಪತ್ರ ಆಸ್ತಿ ವರ್ಗಾವಣೆ ವಿಚಾರವಾಗಿ ಮತ್ತು ವಂಶ ವೃಕ್ಷ ಸಲ್ಲಿಸುವ ಸಂದರ್ಭ ಅತೀ ಅಗತ್ಯ ಎಂದು ಅವರು ಹೇಳಿದರು.
ಜನನ ಮತ್ತು ಮರಣ ನೋಂದಣಿಯ ಕುರಿತು ನ್ಯಾಯವಾದಿ ಸತೀಶ್ ಕುಂಭಕೋಡು ರವರು ಮಾಹಿತಿ ನೀಡಿದರು.
“ಒಬ್ಬ ವ್ಯಕ್ತಿಯು ಸುಮಾರು 10 ವರ್ಷಗಳಿಂದ ನಾಪತ್ತೆಯಾಗಿರುತ್ತಾನೆ. ಆ ಸಂದರ್ಭ ಅವರ ಇಲ್ಲದೆ ಮ್ಯುಟೇಶನ್ ಮಾಡಿಕೊಳ್ಳುವ ಸಾಧ್ಯತೆ ಇದೆಯಾ? ಒಂದು ವೇಳೆ ಮ್ಯೂಟೇಶನ್ ಮಾಡಿದ ನಂತರ ಅವರು ಪುನ: ಹಿಂತಿರುಗಿ ಬಂದಾಗ ಯಾವ ರೀತಿಯ ಪ್ರಕ್ರೆಯೆ ಮಾಡಲು ಕಾನೂನಿನ ಅಡಿಯಲ್ಲಿ ಸಾಧ್ಯವಿದೆ ಎಂದು ದಿನಕರ ಆಲೆಟ್ಟಿಯವರು ಪ್ರಶ್ನಿಸಿದರು.
“ಒಂದು ಮಗುವನ್ನು ದತ್ತು ಪಡೆದುಕೊಂಡ ನಂತರ ಮೂಲ ತಂದೆ ತಾಯಿಯರನ್ನು ಹೊರತು ಪಡಿಸಿ ದತ್ತು ಪಡೆದುಕೊಂಡ ತಂದೆ ತಾಯಿಯ ಹೆಸರನ್ನು ಜನನ ಪ್ರಮಾಣ ಪತ್ರದಲ್ಲಿ ನಮೂದಿಸಲು ಸಾಧ್ಯವಿದೆಯೇ? ಎಂದು ರಾಮಚಂದ್ರ ಆಲೆಟ್ಟಿಯವರು ಪ್ರಶ್ನಿಸಿದರು.

ಈ ಎರಡು ಪ್ರಶ್ನೆಗಳು ಬಹಳಮುಖ್ಯವಾಗಿರುತ್ತದೆ. ಈ ಬಗ್ಗೆ ಹಿರಿಯ ನ್ಯಾಯಾಧೀಶರ ಸಮ್ಮುಖದಲ್ಲಿ ವಿಮರ್ಶೆ ಮಾಡಿ ಉತ್ತರಿಸುವುದಾಗಿ ಅಧ್ಯಕ್ಷರು ತಿಳಿಸಿದರು.

ಕಾನೂನಿನ ಅರಿವು ಎಲ್ಲರಿಗೂ ಅತೀ ಅಗತ್ಯ. “ಕಾನೂನಿನ ಸದುಪಯೋಗವನ್ನು ಎಲ್ಲರೂ ಸಮಯಕ್ಕೆ ಸರಿಯಾಗಿ ಬಳಕೆ ಮಾಡಿಕೊಳ್ಳುವಂತಾಗಬೇಕು. ತಳ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕಾನೂನಿನ ಮಾಹಿತಿ ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದು ಎ.ಪಿ.ಪಿ.ಜನಾರ್ಧನ ರವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಎಂ.ವೆಂಕಪ್ಪ ಗೌಡ ರವರು ಮಾತನಾಡಿ
“ನಮ್ಮ ಜಗತ್ತಿಗೆ ಕೊರೊನಾ ಎಂಬ ಮಾರಕ ರೋಗ ಬಂದಾಗ ಅದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿಗಾಗಿ ಹೇಗೆ ಲಸಿಕೆ ಪಡೆದಿದ್ದೇವೆ ಅದೇ ರೀತಿ ಕಾನೂನಿನ ಬಗ್ಗೆ ನಾವೆಲ್ಲರೂ ಮುಂಚಿತವಾಗಿ ಮಾಹಿತಿ ಪಡೆದುಕೊಂಡಲ್ಲಿ ನಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ತಪ್ಪಿಸಿಕೊಳ್ಳಲು ಸಾಧ್ಯ. ಅದಕ್ಕೆ ಪೂರಕವಾದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಪ್ರಧಾನಿಯವರ ಆಶಯದಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವರ್ಷವಿಡೀ ನಡೆಯಲಿರುವ ಅರಿವು ಕಾರ್ಯಕ್ರಮ ಜಾಗೃತಿ ಮೂಡಿಸುವುದು. ಗ್ರಾಮ ಸ್ವರಾಜ್ಯದ ಕಲ್ಪನೆಯಂತೆ ಇತ್ತೀಚೆಗೆ ಸುದ್ದಿ ಮಾಧ್ಯಮ ದ ಆಶಯದ ಪ್ರಕಾರ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಗಾಂಧಿ ರಥ ಸಂಚರಿಸಿ ಗ್ರಾಮ ಸ್ವರಾಜ್ಯದ ಚಿಂತನೆ ಮೂಡಿಸಿರುವುದು ಅಭಿನಂದನೀಯ. ಈ ಬಾರಿಯ ಗಾಂಧಿ ಜಯಂತಿ ಆಚರಣೆಯು ವಿಭಿನ್ನ ರೀತಿಯಲ್ಲಿ ಆಚರಿಸುವಂತಾಗಿದೆ. ಇದಕ್ಕೆ ಪೂರಕವಾಗಿ ಸುದ್ದಿಯವರ ಕೊಡುಗೆ ಇದೆ ಎಂದು ಉಲ್ಲೇಖಿಸಿದರು.

ಶ್ರೀಮತಿ ರಾಧಾ ರವರು ಪ್ರಾರ್ಥಿಸಿದರು. ನ್ಯಾಯವಾದಿ ಪಂ.ಸದಸ್ಯ ಧರ್ಮಪಾಲ ಕೊಯಿಂಗಾಜೆ ಸ್ವಾಗತಿಸಿದರು. ಪಂ.ಸದಸ್ಯೆ ಗೀತಾ ಕೋಲ್ಚಾರು ವಂದಿಸಿದರು. ಪಂ.ಸಿಬ್ಬಂದಿ ಸೀತಾರಾಮ ಮೊರಂಗಲ್ಲು ಕಾರ್ಯಕ್ರಮ ನಿರೂಪಿಸಿದರು.

ಪಂಚಾಯತ್ ಸದಸ್ಯರು,ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕ ರು, ಗ್ರಾಮದ ನಾಗರೀಕರು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.