ಸುಳ್ಯ ಜ್ಞಾನದೀಪದಲ್ಲಿ ಟೆಕ್ ಸಂವೇದ ರೊಬೋಟಿಕ್ ಲ್ಯಾಬ್ ತರಗತಿ ಆರಂಭ

Advt_Headding_Middle

 

 

ಮಕ್ಕಳಿಗೆ ರೊಬೋಟಿಕ್ ಲ್ಯಾಬ್ ಮೂಲಕ ತರಬೇತಿ ನೀಡಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞನದ ಬಗ್ಗೆ ಕುತೂಹಲ ಹೆಚ್ಚಿಸಿ ಪ್ರೋತ್ಸಾಹ ನೀಡುವ ಟೆಕ್ ಅನ್ವೇಷಣದ ಟೆಕ್ ಸಂವೇದ ಸುಳ್ಯ ಶಾಖೆ ಶ್ರೀಹರಿ ವಾಣಿಜ್ಯ ಸಂಕೀರ್ಣದಲ್ಲಿರುವ ಜ್ಞಾನದೀಪ ಸಂಸ್ಥೆಯಲ್ಲಿ ಅ.17 ರಂದು ಪ್ರಾಯೋಗಿಕ ಪ್ರಾತ್ಯಕ್ಷಿಕೆ ಹಾಗೂ ತರಗತಿ ಅರಂಭಗೊಂಡಿತು.
ಮಾಣಿಬೆಟ್ಟು ಶಿವರಾಮ ಗೌಡರು ಉದ್ಘಾಟಿಸಿದರು. ಟೆಕ್ನೊ ಅನ್ವೇಷಣ ಮಂಡ್ಯದ ಸಂಚಾಲಕ ಅವಿನಾಶ್ ಎ. , ಸಹಾಯಕ ಆಶಿಕ್ ಕೆ.ಎಲ್, ಪ್ರಾತ್ಯಕ್ಷಿಕೆ ತರಗತಿ ನೀಡಿದರು. ಟೆಕ್ ಸಂವೇದದ ಸಂಚಾಲಕರುಗಳಾದ ಗಣೇಶ್ ಎಂ.ಎಸ್, ಕಿರಣ್ ಬಿ.ವಿ.,ಜೀವನ್ ಎನ್ ಡಿ, ಸಂದೀಪ್ ಬಿ ವಿ ಉಪಸ್ಥಿತರಿದ್ದರು. ರೊಬೋಟಿಕ್ ಲ್ಯಾಬ್ ಮೂಲಕ ಇಲ್ಲಿ ಮಕ್ಕಳಿಗೆ ವಿಜ್ಞಾನ,ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗು ಗಣಿತದ ಬಗ್ಗೆ ತರಬೇತಿ ನೀಡಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುತೂಹಲ ಹೆಚ್ಚಿಸಲಾಗುತ್ತಿದೆ. ಈ ತರಗತಿಯಲ್ಲಿ ಸಮಸ್ಯೆ ಪರಿಹರಿಸುವ ಕೌಶಲ್ಯ, ಪ್ರೋಗ್ರಾಂ ಮತ್ತು ರೊಬೋಟ್ ನಿಯಂತ್ರಣ, ಭಾಗಗಳನ್ನು ಗುರುತಿಸುವುದು, ಸೆನ್ಸಾರ್ ಮತ್ತು ಮೊಟಾರ್ ಅಸೆಂಬ್ಲಿಂಗ್, ಗೇರ್ ನಿಯಂತ್ರಣ, ವಿಜ್ಞಾನ ಮತ್ತು ಗಣಿತಶಾಸ್ತ್ರದ ಪರಿಕಲ್ಪನೆಯೊಂದಿಗೆ ತಿಳುವಳಿಕೆ ನೀಡಲಾಗುತ್ತಿದೆ. ತಾಲೂಕಿವ ಆಸಕ್ತ ವಿದ್ಯಾರ್ಥಿಗಳು ಡೆಮೊ ತರಗತಿಯಲ್ಲಿ ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.