ನಿಂತಿಕಲ್ಲು ಕೆ.ಎಸ್. ಗೌಡ ಪಿ.ಯು. ಕಾಲೇಜಿನ ವಿದ್ಯಾರ್ಥಿ ಸಂಘ ರಚನೆ

Advt_Headding_Middle

 

ಭವನ್ ರೈ ಅಧ್ಯಕ್ಷ, ಕಾರ್ಯದರ್ಶಿಯಾಗಿ ಗಗನ್

ನಿಂತಿಕಲ್ಲಿನ ವರ್ಷ ನಗರದಲ್ಲಿರುವ ಕೆ.ಎಸ್. ಗೌಡ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ರಚನೆಯಾಗಿದ್ದು, ಅಧ್ಯಕ್ಷರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಭವನ್ ರೈ ಪಾದೆಕಲ್ಲು, ಕಾರ್ಯದರ್ಶಿಯಾಗಿ ಪ್ರಥಮ ವಾಣಿಜ್ಯ ವಿಭಾಗದ ಗಗನ್ ಕುಮಾರ್ ಕೆ.ಸಿ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ಪ್ರಥಮ ವಿಜ್ಞಾನ ವಿಭಾಗದ ಅನನ್ಯ ಎನ್. ಜಿ, ಕ್ರೀಡಾ ಕಾರ್ಯದರ್ಶಿಗಳಾಗಿ ದ್ವಿತೀಯ ವಾಣಿಜ್ಯ ವಿಭಾಗದ ವಿನ್ಯಾಸ್ ಮತ್ತು ಪ್ರಥಮ ವಿಜ್ಞಾನ ವಿಭಾಗದ ಚಿಂಚನಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ದ್ವಿತೀಯ ವಿಜ್ಞಾನ ವಿಭಾಗದ ತನ್ಮಯ್ ಹಾಗೂ ಪ್ರಥಮ ವಾಣಿಜ್ಯ ವಿಭಾಗದ ರಿಫಾಷ್ ಶೇಖ್ ಆಯ್ಕೆ ಯಾದರು.
ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಶ್ರೀಮತಿ ಉಷಾಲತಾ ರೈ ಪಾದೆಕಲ್ಲು ನೆರವೇರಿಸಿದರು. ಕುಮಾರಸ್ವಾಮಿ ಕೆ.ಎಸ್. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕ ಜೀವನ್ ಎಸ್.ಎಚ್ ಆಯ್ಕೆ ಪ್ರಕ್ರಿಯೆ ನಡೆಸಿ ಸ್ವಾಗತಿಸಿದರು. ಉಪನ್ಯಾಸಕಿ ನಿಶಾ ಬಿ.ಎಸ್ ವಂದಿಸಿದರು. ಉಪನ್ಯಾಸಕಿ ಧನ್ಯ ಕೆ.ವಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ಪ್ರಿಯಾ ಎಂ ಹಾಗು ಜಯಶ್ರೀ ಬಿವಿ ಸಹಕರಿಸಿದರು. ಉಪನ್ಯಾಸಕ ಉಜ್ವಲ್ ಕೆ ಎಚ್ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ವರ್ಷಿಣಿ , ಜೀವಿತ ಮತ್ತು ಮೇಘ ಪ್ರಾರ್ಥಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.