ಅಮರಮುಡ್ನೂರಿನಲ್ಲಿ ಕಾನೂನು ಅರಿವು ಕಾರ್ಯಾಗಾರ – ಜೀವನಾಂಶ ಕುರಿತು ಮಾಹಿತಿ

Advt_Headding_Middle

 

ಪಂಚಾಯತ್ ಮಟ್ಟದಲ್ಲಿ ಜನ ಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಉದ್ದೇಶ : ಯಶವಂತ್ ಕುಮಾರ್

 

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೋಲಿಸ್ ಇಲಾಖೆ, ಸುದ್ದಿ ಮಾಧ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಅಮರಮುಡ್ನೂರು ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಅ.19 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಿವಿಲ್ ನ್ಯಾಯಧೀಶರಾದ ಯಶವಂತ್ ಕುಮಾರ್ ಕೆ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸುಳ್ಯ ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಎಂ.ವೆಂಕಪ್ಪ ಗೌಡ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ , ಸಹಾಯಕ ಸರಕಾರಿ ಅಭಿಯೋಜಕರು ಜನಾರ್ಧನ. ಬಿ, ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ , ಪಿ.ಡಿ.ಒ ಆಕಾಶ್ ಕೆ, ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ನಳಿನ್ ಕುಮಾರ್ ಕೋಡ್ತುಗುಳಿ , ಪಂ.ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ , ಬೆಳ್ಳಾರೆ ಪೋಲಿಸ್ ಠಾಣೆಯ ಎ.ಎಸ್. ಐ ಭಾಸ್ಕರ್, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಯವರು ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ನ್ಯಾಯಧೀಶರು ” ನಾಲ್ಸಾ
ನಿರ್ದೇಶನದಂತೆ ದೇಶದಾದ್ಯಂತ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಕಾನೂನಿನ ಅರಿವು ಜಾಗೃತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ನ್ಯಾಯಾಲಯದ ನಿರ್ದೇಶನದ ಪ್ರಕಾರ ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ವಸ್ತು ನಿಷ್ಠ ವಿಷಯದ ಕುರಿತು ಜನಸಾಮಾನ್ಯರಿಗೆ ಕಾನೂನಿನ ಮಾಹಿತಿ ನೀಡುವ ಉದ್ದೇಶವಾಗಿರುತ್ತದೆ. ಒರ್ವ ವ್ಯಕ್ತಿ ತಪ್ಪನ್ನು ಮಾಡಿ ಗೊತ್ತಿಲ್ಲ ಎಂಬ ಉತ್ತರ ನೀಡುವುದರಿಂದ ಕಾನೂನು ನಿಂದ ತಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಸಾಮಾನ್ಯರು ಕಾನೂನಿನ ಅರಿವು ಹೊಂದಿರಬೇಕು” ಎಂದು ಹೇಳಿದರು.
ಈ ಸಂದರ್ಭ ಜೀವನಾಂಶ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ಹಿರಿಯ ನ್ಯಾಯವಾದಿ ನಳಿನ್ ಕುಮಾರ್ ಕೋಡ್ತುಗುಳಿ ಯವರು ಮಾತನಾಡಿ ” ಜೀವನ ಅಂದರೆ ಏನು ? ಜೀವನಕ್ಕೆ ಏನು ಅವಶ್ಯಕತೆ ?
ಐಷರಾಮಿ ಬದುಕು ನಡೆಸುವುದು ಜೀವನವಲ್ಲ. ಮೂಲಭೂತ ಸೌಕರ್ಯ ಹೊಂದಿರಬೇಕು.
ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವ ವ್ಯಕ್ತಿಗೆ ಮತ್ತೊಬ್ಬರ ಸಹಕಾರ ಅಗತ್ಯವಿದೆ.
ವಿವಾಹಿತ ಗಂಡಸು ಪತ್ನಿಯನ್ನು ಪೋಷಿಸಬೇಕು. ಆಕೆ ಜೀವನಾಂಶ ಪಡೆಯಲು ಹಕ್ಕುದಾರಳಾಗಿರುತ್ತಾಳೆ. ಗಂಡನು ಅಶಕ್ತನಾಗಿದ್ದು ಹೆಚ್ಚು ಆದಾಯ ಪತ್ನಿ ಪಡೆಯುತ್ತಿದ್ದರೆ ಪತ್ನಿಯಲ್ಲಿ ಗಂಡನು ಜೀವನಾಂಶ ಕೇಳಬಹುದು. ತಂದೆ ತಾಯಿ ಗಂಡು ಮಕ್ಕಳನ್ನು 18 ವರ್ಷದವರೆಗೆ ಮಗಳನ್ನು ಮದುವೆ ಮಾಡಿಕೊಡವಲ್ಲಿಯವರೆಗೆ ಪೋಷಿಸಬೇಕು. ತಂದೆ ತಾಯಿ ದುರ್ಬಲರಾದ ಸಂದರ್ಭ ಮಕ್ಕಳು ಪೋಷಿಸಬೇಕು ಜೀವನಾಂಶ ನೀಡಬೇಕು.
ಕರ್ತವ್ಯ ನಿರ್ಲಕ್ಷ್ಯ ಮಾಡಿದಲ್ಲಿ ಕಾನೂನಿನಡಿಯಲ್ಲಿ ನ್ಯಾಯಾಲಯದಲ್ಲಿ ಜೀವನಾಂಶ ಕೇಳಲು ಹಕ್ಕಿದೆ. ಜೀವನಾಂಶ ಕೇಳಲು ಎಲ್ಲಾ ಸಮುದಾಯದವರಿಗೆ ಅವಕಾಶವಿದೆ. ನ್ಯಾಯಸಮ್ಮತವಲ್ಲದ ಮಕ್ಕಳು ಜೀವನಾಂಶ ಕೇಳಲು ಅವಕಾಶವಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಲು ಹಕ್ಕಿರುವುದಿಲ್ಲ. ಕಾನೂನು ಪ್ರಕಾರ ಮದುವೆಗಳು ಆದ ನಂತರ ರಿಜಿಸ್ಟ್ರಾರ್ ಮಾಡಿಸಬೇಕು. ಪದ್ದತಿಯಂತೆ ನಡೆದ ಮದುವೆಗಳು ಸಿಂಧುವಾಗಿರುತ್ತದೆ. ಅವರಿಗೆ ಜೀವನಾಂಶ ಕೇಳಲು ಹಕ್ಕಿರುವುದು. ಹಿಂದೂ ಧರ್ಮದಲ್ಲಿ ಪತ್ನಿ ಜೀವಂತವಿರುವಾಗಲೇ ಇನ್ನೊಂದು ಮದುವೆ ಆದಲ್ಲಿ ಆಕೆಗೆ ಜೀವನಾಂಶ ಪಡೆಯಲು ಅವಕಾಶವಿಲ್ಲ. ಮುಸ್ಲಿಂ ಸಮುದಾಯದಲ್ಲಿ ಈ ರೀತಿಯ ಮದುವೆ ಆದಲ್ಲಿ ಜೀವನಾಂಶ ಪಡೆಯಲು ಅವಕಾಶ ಇರುವುದು.
ಅನೈತಿಕ ಸಂಬಂಧ ಹೊಂದಿದ ಗಂಡನಿಂದ ಜೀವನಾಂಶ ಪಡೆಯುವ ಅವಕಾಶವಿಲ್ಲ. ಗಂಡನಿಂದ ಕಾನೂನು ಪ್ರಕಾರ ವಿಚ್ಚೇದನ ಪಡೆದರೆ ಆಕೆ ಗಂಡನಿಂದ ಜೀವನಾಂಶ ಪಡೆಯಲು ಅವಕಾಶ ಇದೆ” ಎಂದು ಮಾಹಿತಿ ನೀಡಿದರು.
ಕಾನೂನಿನ ಅರಿವು ಎಲ್ಲರಿಗೂ ಅತೀ ಅಗತ್ಯ. ಕಾನೂನಿನ ಸದುಪಯೋಗವನ್ನು ಎಲ್ಲರೂ ಸಮಯಕ್ಕೆ ಸರಿಯಾಗಿ ಬಳಕೆ ಮಾಡಿಕೊಳ್ಬೇಕು ಎಂದು ಎ.ಪಿ.ಪಿ.ಜನಾರ್ಧನ ರವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಎಂ.ವೆಂಕಪ್ಪ ಗೌಡ ರವರು ಮಾತನಾಡಿ
” ಪ್ರಧಾನಿಯವರ ಆಶಯದಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವರ್ಷವಿಡೀ ನಡೆಯಲಿರುವ ಅರಿವು ಕಾರ್ಯಕ್ರಮ ಜಾಗೃತಿ ಮೂಡಿಸುವುದು. ಜನಪ್ರತಿನಿಧಿಗಳು ಕಾನೂನಿನ ಅರಿವು ಪಡೆದುಕೊಂಡು ನಿಮ್ಮ ಬಳಿಗೆ ಬರುವ ಜನರಿಗೆ ಉಪಯುಕ್ತವಾಗಲಿ ಎಂದು ಹೇಳಿದರು.
ಶ್ರೀಮತಿ ಮಮತ ರವರು ಪ್ರಾರ್ಥಿಸಿದರು. ಪಂ.ಸದಸ್ಯ ಹೂವಪ್ಪ ಗೌಡ ಆರ್ನೋಜಿ ಸ್ವಾಗತಿಸಿದರು. ಜನಾರ್ಧನ ಪೈಲೂರು ವಂದಿಸಿದರು. ಪಂ.ಸದಸ್ಯ ಅಶೋಕ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.

ಪಂಚಾಯತ್ ಸದಸ್ಯರು,
ವಕೀಲರು,
ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕ ರು, ಗ್ರಾಮದ ನಾಗರೀಕರು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.