ರಂಗಮಯೂರಿ ಕಲಾ ಶಾಲೆಯಲ್ಲಿ ಪೋಷಕರು- ಗುರುಗಳು-ವಿದ್ಯಾರ್ಥಿಗಳ- ಸಂಗಮ ಕಾರ್ಯಕ್ರಮ

Advt_Headding_Middle

 

 

ಕಲಾ ಶಾಲೆಯ ಗುರುಗಳಿಗೆ ಗೌರವಾರ್ಪಣೆ – ಸಾಂಸ್ಕೃತಿಕ ಸಂಭ್ರಮ

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗ ಮಯೂರಿ ಕಲಾ ಶಾಲೆಯಲ್ಲಿ ಪೋಷಕರು, ಗುರುಗಳು, ವಿದ್ಯಾರ್ಥಿಗಳ ಸಂಗಮ “ಪರಸ್ಪರ ಕಲಾ ಮನಸ್ಸುಗಳ ಪರಿಚಯ ಕಾರ್ಯಕ್ರಮ ಅ.19 ರಂದು ನಡೆಯಿತು. ಸಮಾರಂಭವನ್ನು ಹಿರಿಯ ಉದ್ಯಮಿ ಶ್ರೀ ಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ಅರಂಬೂರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮಕ್ಕಳ ತಜ್ಞ ಡಾ| ಕೃಷ್ಣ ಭಟ್ ಬಿ.ಎನ್ ರವರು ಆಶಯ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಲಾ ಶಾಲೆಯ ಗೌರವ ಪೋಷಕರಾದ ಮಯೂರಿ ರೆಸ್ಟೋರೆಂಟ್ ಮಾಲಕ ವಿಜಯ್ ಮಯೂರಿ, ಲೇಖಕ ಭವಾನಿಶಂಕರ ಅಡ್ತಲೆ, ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲುರವರು ಉಪಸ್ಥಿತರಿದ್ದರು.
ಈ ಸಂದರ್ಭ ಕಲಾ ಶಾಲೆಯ ಗುರುಗಳಾದ ಶಾಸ್ತ್ರೀಯ ಸಂಗೀತ ಶಿಕ್ಷಕ ಮಹಾಬಲೇಶ್ವರ ಬಿರ್ಮಕಜೆ, ಸುಗಮ ಸಂಗೀತ ಶಿಕ್ಷಕ ಕಿರಣ್ ಕುಮಾರ್ ಗಾನಸಿರಿ, ಸಹ ಶಿಕ್ಷಕಿ ಶ್ರೀಲಕ್ಷ್ಮೀ, ಯಕ್ಷಗಾನ ಶಿಕ್ಷಕ ವಾಸುದೇವ ರೈ ಬೆಳ್ಳಾರೆ, ನೃತ್ಯ ಶಿಕ್ಷಕ ವಿನೋದ್ ಕರ್ಕೇರಾ, ಪೃಥ್ವಿ ನಾಯಕ್ ,ಯೋಗ ಶಿಕ್ಷಕ ನವೀನ್ ಕುಮಾರ್, ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು, ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಗಾಯಕಿ ಶುಭದಾ ಆರ್.ಪ್ರಕಾಶ್ ಪ್ರಾರ್ಥಿಸಿದರು. ಶ್ರೀಮತಿ ಸುನಂದ ಶೆಟ್ಟಿ ಸ್ವಾಗತಿಸಿದರು. ಕು.ಸಂಪ್ರೀತ ರೈ ವರದಿ ವಾಚಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ವಂದಿಸಿದರು. ಮೇಘಕೃಷ್ಣ ಕಾಯರ್ತೋಡಿ ಮತ್ತು ಶಶಿಕಾಂತ್ ಪೈಲಾರು ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ನಂತರ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಪೋಷಕರು, ಗುರುವೃಂದದವರು, ವಿದ್ಯಾರ್ಥಿಗಳು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.