ಗೂನಡ್ಕ : ಪೇರಡ್ಕ ತಕ್ವೀಯತುಲ್ ಇಸ್ಲಾಂ ಮದ್ರಸದಲ್ಲಿ ಈದ್ ಮಿಲಾದ್ ಆಚರಣೆ

Advt_Headding_Middle

ತೆಕ್ಕಿಲ್ ಮೊಹಮ್ಮದ್ ಹಾಜಿ ಸ್ಮರಣಾರ್ಥ ಗೂನಡ್ಕ- ಪೇರಡ್ಕ ತಕ್ವೀಯತುಲ್ ಇಸ್ಲಾಂ ಮದ್ರಸ ಹಾಗು ಹಾಯಾತುಲ್ ಇಸ್ಲಾಮ್ ಮದರಸ ವಠಾರದಲ್ಲಿ ಪ್ರವಾದಿ ಪೈಗಂಬರ್ (ಸ ಅ) ರವರ 1496ನೇ ಜನ್ಮ ದಿನವನ್ನು ಅಧ್ಯಕ್ಷ ಎಸ್. ಆಲಿಹಾಜಿ ಯವರ ನೇತೃತ್ವದಲ್ಲಿ ಕೋವಿಡ್-19 ಇದರ ನಿಯಮಾನುಸಾರದಂತೆ ಸರಳವಾಗಿ ಅ.19 ರಂದು ದ್ವಜಾರೋಹಣದೊಂದಿಗೆ ಉದ್ಘಾಟನೆ ಮಾಡಿ ರಿಯಾಝ್ ಪೈಝಿ ಪೇರಡ್ಕ ಇವರ ನೇತೃತ್ವದಲ್ಲಿ ಹಜ್ರತ್ ವಳಿಯುಲ್ಲಾಹಿ ಪೇರಡ್ಕ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆಗೈದರು.

ಹಾಜಿ ಮೊಹಮ್ಮದ್ ತೆಕ್ಕಿಲ್ ಸಬಾಭವನದಲ್ಲಿ ಮಾತನಾಡಿದ ಟಿ.ಎಮ್ ಶಹೀದ್ ತೆಕ್ಕಿಲ್‌ರವರು ಪೈಗಂಬರ್ ರವರ ಚೆರ್ಯೆಯನ್ನು ಹಿಂಬಾಲಿಸಿ ಬದುಕಬೇಕು. ಆಗ ಮಾತ್ರ ಒಂದು ಒಳ್ಳೆಯ ಮನುಷ್ಯನಾಗಲು ಸಾಧ್ಯವೆಂದು ಹೇಳಿ ಯುವಕರಿಗೆ ಸ್ಪೂರ್ತಿಯಾಗಿ ಮಾತನಾಡಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ರವರು ಪೈಗಂಬರ್‌ರವರ ಚೆರ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು ಹಾಗು ಊರಿನ ಅಭಿವೃದ್ಧಿಯ ಬಗ್ಗೆ ಶ್ಲಾಘಿಸಿದರು. ನಂತರ ಮದ್ರಸ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.


ವೇದಿಕೆಯಲ್ಲಿ ಅಧ್ಯಕ್ಷ ಎಸ್.ಅಲಿಹಾಜಿ, ಗೌರವಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಖತೀಬರಾದ ರಿಯಾಜ್ ಪೈಝಿ ಎಮ್ಮೆಮ್ಮಡು, ಮುದರ್ರಿಸ್ ನೂರುದ್ಧಿನ್ ಅನ್ಸಾರಿ, ಹಾಜಿ ಇಬ್ರಾಹಿಂ ಕರಾವಳಿ, ಅಬ್ಬಾಸ್ ಪಾಂಡಿ ಮೊದಲಾದವರು ಉಪಸ್ಥಿತರಿದ್ಧರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.