ಒಂದು ನಂಬರ್ ತಪ್ಪಾಾಗಿ ಬೇರೆಯವರ ಖಾತೆಗೆ ಜಮೆಯಾದ 15000 ರುಪಾಯಿ

Advt_Headding_Middle

ವಿಪತ್ತು ನಿರ್ವಹಣಾ ಘಟಕದ ಪ್ರಯತ್ನದಿಂದ ಮರಳಿ ಸಿಕ್ಕಿದ ಹಣ

ಕೊನೆಯ ಒಂದು ನಂಬರ್ ತಪ್ಪಾಗಿ ಬೇರೆಯವರ ಖಾತೆಗೆ ಜಮೆಯಾದ 15000 ಹಣ, ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಕಟದ ಪ್ರಯತ್ನದಿಂದಾಗಿ ಮರಳಿ ಸಿಕ್ಕಿದ ಘಟನೆಯೊಂದು ಮರ್ಕಂಜದಿಂದ ವರದಿಯಾಗಿದೆ.

ಮರ್ಕಂಜ ಗ್ರಾಮದ ಮಿತ್ತಡ್ಕ ಉಪೇಂದ್ರ ಪುರುಷ ಎಂಬವರ ಪುತ್ರ ನಾಗರಾಜ ಎಂಬವರು ಮಂಗಳೂರಿನಲ್ಲಿ ಉದ್ಯೋಗದ ನಿಮಿತ್ತ ಪತ್ನಿ ಸಮೇತ ನೆಲೆಸುವವರಿದ್ದರು. ಹಾಗಾಗಿ ಅಲ್ಲಿ ಉಳಿಯಲು ರೂಮಿಗೆ ಮುಂಗಡ ಹಣ ಪಾವತಿಸಲು ಉಪೇಂದ್ರರವರು 30,000 ಹಣವನ್ನು ಮಗನಿಗೆ ನೀಡಿದ್ದರು. ಅದರಲ್ಲಿ 15,000ವನ್ನು ರೂಮಿಗೆ ಮುಂಗಡವಾಗಿ ನೀಡಲಾಗಿತ್ತು. ಆದರೆ ಆ ಬಳಿಕ ರೂಂ ಬೇಡವೆಂಬ ಅಭಿಪ್ರಾಯಕ್ಕೆ ನಾಗರಾಜರು ಬಂದ ಕಾರಣ, ಉಳಿದ 15000 ಹಣವನ್ನು ಉಪೇಂದ್ರರವರಿಗೆ ಮರಳಿಸುವಂತೆ ಹೇಳಿದ್ದರು. ಆ ಹಣವನ್ನು ಬ್ಯಾಂಕಿನ ಖಾತೆಗೆ ಹಾಕುವ ಉದ್ದೇಶದಿಂದ ದೊಡ್ಡತೋಟದ ಅಡಿಕೆ ವ್ಯಾಪಾರಿಯೊಬ್ಬರ ಖಾತೆಗೆ ಹಾಕುವಂತೆ ತಿಳಿಸಿ, ಆ.15ರಂದು ಅವರ ಫೋನ್ ನಂಬರ್ ನಾಗರಾಜರಿಗೆ ಕೊಟ್ಟಿದ್ದರು. ಆದರೆ ನಾಗರಾಜರವರು ಹಣ ಕಳುಹಿಸುವ ಸಂದರ್ಭ 027ರ ಬದಲು 021 ಎಂದು ತಪ್ಪಾಗಿ, ಅದು ಬೇರೆಯವರ ಖಾತೆಗೆ ಜಮೆಯಾಗಿರುವುದು ತಿಳಿಯಿತು. ಹಣ ಖಾತೆಗೆ ಬಾರದಿರುವ ಬಗ್ಗೆ ಮತ್ತೆ ನೋಡಿದಾಗ ಫೋನ್ ನಂಬರ್ ಬದಲಾಗಿರುವುದು ತಿಳಿಯಿತು. ನಾಗರಾಜರು ತಪ್ಪಿ ಹಣ ಹೋಗಿರುವ ಫೋನ್ ನಂಬರಿಗೆ ಕರೆ ಮಾಡಿದಾಗ ಹಣ ವರ್ಗಾಯಿಸುತ್ತೇನೆ ಎಂದು ಹೇಳಿ ಕಟ್ ಮಾಡಿ ಬಳಿಕ ಸ್ವಿಚ್ ಆಫ್ ಮಾಡಿದ್ದರು. ಆದರೆ ಅವರು ಹಣ ಪುನಃ ವರ್ಗಾಯಿಸಲಿಲ್ಲ. ಈ ಬಗ್ಗೆ ಆ ಸಂಖ್ಯೆ ಪರಿಶೀಲಿಸಿದಾಗ ಅದು ಬೆಳಗಾಂ ಜಿಲ್ಲೆಯ ಉಮೇಶ ಮಾಲಿಯವರದ್ದು ಎಂದು ಗೊತ್ತಾಯಿತು. ಹೀಗಾಗಿ ಉಪೇಂದ್ರರವರು ಹಾಗೂ ನಾಗರಾಜರು ಬಂಧುಮಿತ್ರರೊಂದಿಗೆ, ಬ್ಯಾಂಕಿನವರೊಂದಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅ.18ರಂದು ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಕಟದ ಸದಸ್ಯ ಕಂದಡ್ಕ ಬಳಿಯ ವೆಂಕಟೇಶ್ವರ ಡಿ.ಜಿ. ಎಂಬವರ ಬಳಿ ಉಪೇಂದ್ರರವರು ಈ ವಿಚಾರ ತಿಳಿಸಿದಾಗ ಅವರು ಮರಳಿಸಲು ಪ್ರಯತ್ನಿಸುವ ಭರವಸೆ ನೀಡಿದರು. ಅದರಂತೆ ವಿಪತ್ತು ನಿರ್ವಹಣಾ ಘಟಕದ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಘಟನೆಯ ಬಗ್ಗೆ ಹಂಚಿಕೊಂಡ ಅವರು ಅಥನಿಯ ವಿಪತ್ತು ನಿರ್ವಹಣಾ ಘಟಕದ ನಿರ್ದೇಶಕ ಹುಸೈನ್ ಮುಝ್ವಾರ್ ರವರ ಮೂಲಕ ಸಂಪರ್ಕ ಸಾಧಿಸಿ, ಬೆಳಗಾಂನ ಪೋಲೀಸ್ ಅಧಿಕಾರಿ ಫೊರೋಝ್ ಮುಜ್ವಾರ್ ರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಪೋಲೀಸ್ ಅಧಿಕಾರಿಗಳು ಉಮೇಶ ಮಾಲಿ ಎಂಬವರ ಬಗ್ಗೆ ಮಾಹಿತಿ ಪಡೆದು, ಹಣ ವರ್ಗಾಯಿಸುವಂತೆ ಸೂಚಿಸಿದರು. ಎರಡು ದಿನದಲ್ಲಿ ಹಣ ವರ್ಗಾ ಮಾಡುವ ಬಗ್ಗೆ ಉಮೇಶ್ ಮಾಲಿಯವರು ಪೋಲೀಸ್ ಅಧಿಕಾರಿಯವರಿಗೆ ಹೇಳಿದ ಬಗ್ಗೆ ಪೋಲೀಸ್ ಅಧಿಕಾರಿಗಳು ವೇಂಕಟೇಶ್ವರರವರಿಗೆ ತಿಳಿಸಿದರು. ಅಲ್ಲದೇ ಆ ಭಾಗದಲ್ಲಿ ವಿಪತ್ತು ನಿರ್ವಹಣ ಘಟಕದ ಸದಸ್ಯರನ್ನು ಉಮೇಶ ಮಾಲಿಯವರ ಮನೆಗೆ ಹೋಗುವಂತೆಯೂ ಪೋಲೀಸರು ವೆಂಕಟೇಶ್ವರ ರಿಗೆ ಸೂಚಿಸಿದರು. ಅದರಂತೆ ಅಲ್ಲಿಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ದೀಪ ಮತ್ತು ಸೇವಾಪ್ರತಿನಿಧಿ ಗಜಾನನ ಮಂಗ್ಸುಳಿಯವರು ಉಮೇಶ ಮಾಲಿಯವರ ಮನೆಯನ್ನು ಹುಡುಕುವ ಪ್ರಯತ್ನದಲ್ಲಿರುವಾಗಲೇ ಉಮೇಶ ಮಾಲಿಯವರು ಬೇರೊಬ್ಬರ ಖಾತೆಯ ಮೂಲಕ 15000 ಹಣ ನಾಗರಾಜರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಮತ್ತು ದೂರವಾಣಿ ಕರೆ ಮಾಡಿಯೂ ತಿಳಿಸಿದರು. ಹೀಗಾಗಿ ಹಣ ಕಳೆದುಕೊಂಡ ಉಪೇಂದ್ರರವರು ನಿರಾಳತೆಗೊಂಡಿದ್ದಾರೆ. ಒಟ್ಟಾಗಿ ಹಣ ಮತ್ತೆ ಮರಳಿಸುವಂತೆ ಮಾಡಿದ ವಿಪತ್ತು ನಿರ್ವಹಣಾ ಘಟಕದ ಕಾರ್ಯ ಹಾಗೂ ಸದಸ್ಯ ವೆಂಕಟೇಶ್ವರರವರ ಕಾರ್ಯ ಶ್ಲಾಘನೀಯವಾಗಿದೆ.
ವೆಂಕಟೇಶ್ವರ ಡಿ.ಜಿಮಯವರ ಪ್ರಯತ್ನಕ್ಕೆ ಪೋಲೀಸ್ ಅಧಿಕಾರಿಗಳಾದ ಬೆಳ್ಳಾರೆಯ ಚಂದ್ರಶೇಖರ ಅಲಂಕಾರು, ಮಂಗಳೂರು ಕ್ರೈಂ ಪೋಲೀಸ್ ವಿಜಯರವರ ಸಹಕಾರ ನೀಡಿದ್ದಾರೆ.

(ನಾಗರಾಜ, ಮಿತ್ತಡ್ಕ)

ಒಂದು ನಂಬರ್ ತಪ್ಪಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಯಾಗಿತ್ತು. ಯಾರ ಜೊತೆ ಕೇಳಿದರೂ ಕಂಪ್ಲೆಂಟ್ ಕೊಡಿ. ಅದು ಇನ್ನು ಸಿಗುವುದು ಕಷ್ಟ ಎಂದೇ ಹೇಳುತ್ತಿದ್ದರು. ನಾನು ವಿಪತ್ತು ನಿರ್ವಹಣಾ ಘಟಕದ ವೆಂಕಟೇಶ್ವರ ರವರಲ್ಲಿ ಹೇಳಿದಾಗ ಅವರು ಅದನ್ನು ಹಿಂತಿರುಗಿಸಲು ಪ್ರಯತ್ನಿಸುತ್ತೇನೆ ಎಂದರು. ಇದೀಗ ಅವರ ಪ್ರಯತ್ನ ದಿಂದ ಹಣ ಮರಳಿ ಬಂದಿದೆ.
– ಉಪೇಂದ್ರ ಪುರುಷ, ಮಿತ್ತಡ್ಕ, ಮರ್ಕಂಜ

ವಿಪತ್ತು ನಿರ್ವಹಣಾ ತಂಡದ ಸಂಯೋಜಕ ನಾದ ನಾನೂ ತಪ್ಪಿ ಹಣ ವರ್ಗಾವಣೆಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಹಣ ತೆಗೆಸಿ ಕೊಡುವ ಭರವಸೆ ನೀಡಿ, ಎಸ್.ಕೆ.ಡಿ.ಆರ್.ಡಿ.ಪಿ. ಶೌರ್ಯ ವಿಪತ್ತು ನಿರ್ವಹಣಾ ತಂಡದ ಮೂಲಕ ಪೋಲೀಸರ ಸಹಕಾರ ಮತ್ತು ವಿಪತ್ತು ನಿರ್ವಹಣಾ ಘಟಕದ ಸಂಯೋಜಕರ ಸಹಕಾರದಿಂದ ಒಂದೇ ದಿನದಲ್ಲಿ ಉಮೇಶ್ ಮಾಲಿ ಅವರಿಂದ ಹಣ ವಾಪಸ್ ಮಾಡಲು ಸಾದ್ಯ ವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು ನಿರ್ವಹಣಾ ಘಟಕ ರಾಜ್ಯದಲ್ಲಿ ವಿಸ್ತರಣೆ ಗೊಂಡಿರುವ ಕಾರಣ ಈ ಕಾರ್ಯ ಮಾಡಲು ಸಾಧ್ಯವಾಯಿತು.


– ವೆಂಕಟ್ರಮಣ ಡಿ.ಜಿ.
ಸಂಯೋಜಕರು, ವಿಪತ್ತು ನಿರ್ವಹಣಾ ಘಟಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.