ಸುಬ್ರಹ್ಮಣ್ಯ: ರಸ್ತೆ ಸುರಕ್ಷತಾ ಹಾಗೂ ಜನರಲ್ ಇನ್ಸೂರೆನ್ಸ್ ಮಾಹಿತಿ ಶಿಬಿರ

Advt_Headding_Middle

ಜೇಸಿಐ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಯುವ ವಾಹಿನಿ ಕಡಬ ಪ್ರಾಯೋಜಕತ್ವದಲ್ಲಿ ರಸ್ತೆ ಸುರಕ್ಷತಾ ಹಾಗೂ ಜನರಲ್ ಇನ್ಸೂರೆನ್ಸ್ ಮಾಹಿತಿ ಶಿಬಿರ ಕಾರ್ಯಕ್ರಮ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕುಮಾರಧಾರ ಸಭಾಂಗಣದಲ್ಲಿ ಅ.20 ರಂದು ನಡೆಯಿತು.

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜೇಸಿಐ ಅಧ್ಯಕ್ಷ ದೀಪಕ್ ನಂಬಿಯಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಜಿತ್ ಪಿ.ಕೆ. ಅವರು ಜನರಲ್ ಇನ್ಸೂರೆನ್ಸ್ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ರಸ್ತೆ ಸುರಕ್ಷತಾ ಬಗ್ಗೆ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಹಾಗೂ ಸುಬ್ರಹ್ಮಣ್ಯ ಠಾಣಾ ಉಪನಿರೀಕ ಜಂಬುರಾಜ್ ಮಹಾಜನ್ ಅವರು ಮಾಹಿತಿ ನೀಡಿದರು.


ಸಮಾಜ ಸೇವಕ, ಉದ್ಯಮಿ ರವಿಕಕ್ಕೆ ಪದವು, ಕುಕ್ಕೆ ಶ್ರೀ ಅಟೋ ಚಾಲಕ ಮಾಲಕ ಸಂಘ ಅಧ್ಯಕ್ಷ ತೇಜಕುಮಾರ್, ಗೌರವ ಅಧ್ಯಕ್ಷ ಉಮೇಶ್.ಕೆ.ಎನ್., ಕಡಬ ಯುವವಾಹಿನಿ ನಿಯೋಜಿತ ಅಧ್ಯಕ್ಷ ಪ್ರವೀಣ್ ಕುಮಾರ್, ಬಿಎಂಎಸ್ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಯಶೋಧರ, ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ ಮಾಲಕ ಸಂಘದ ಅಧ್ಯಕ್ಷ ಕುಸುಮಾಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಉಮೇಶ್.ಕೆ.ಎನ್.ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಜೇಸಿ ಪೂರ್ವ ವಲಯಾಧ್ಯಕ್ಷ ಚಂದ್ರಶೇಖರ್ ನಾಯರ್ ಸ್ವಾಗತಿಸಿದರು. ಜೇಸಿ ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.