ಅತ್ತಿಕರಮಜಲು : ಪಾಜಪಳ್ಳ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ

Advt_Headding_Middle

ಮೊಹಿಯುದ್ದೀನ್ ಜುಮ್ಮಾ ಮಸೀದಿ ಅತ್ತಿಕರಮಜಲು, ಪಾಜಪಳ್ಳ ಇದರ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ)ರವರ ಜನ್ಮದಿನಾಚರಣೆ ಪ್ರಯುಕ್ತ ಮಾಹೇ ಮದೀನಾ ಮೀಲಾದ್ ಫೆಸ್ಟ್ ಕಾರ್ಯಕ್ರಮವು ಅ.18 ರಂದು ಸಂಜೆ ಮಗ್ರಿಬ್ ನಮಾಜ್ ನಂತರ ಮದ್ರಸ ವಠಾರದಲ್ಲಿ ನಡೆಯಿತು. ಜಮಾಅತ್ ಕಮೀಟಿ ಅಧ್ಯಕ್ಷರಾದ ಹಾಜಿ ಪಿ ಇಸಾಕ್ ಸಾಹೇಬ್ ಅಧ್ಯಕ್ಷತೆಯಲ್ಲಿ ಮಸೀದಿ ಖತೀಬರಾದ ಯಾಸಿರ್ ಅರಾಫತ್ ಕೌಸರಿ ಉಸ್ತಾದ್ ಅವರು ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶರೀಫ್ ಭಾರತ್ ಬಾಳಿಲ ಪ್ರಾಸ್ತಾವಿಕ ಬಾಷಣದ ಜೊತೆಗೆ ಅತಿಥಿಗಳನ್ನು ಸ್ವಾಗತಿಸಿದರು. ಮುಅದ್ದಿನ್ ಉಸ್ತಾದರಾದ ಬಹು ಝುಬೈರ್ ಮುಸ್ಲಿಯಾರ್ ಆಶಂಸ ಮಾತಿನ ಮೂಲಕ ಶುಭ ಹಾರೈಸಿದರು.

ನಂತರ ಮದ್ರಸ ವಿದ್ಯಾರ್ಥಿಗಳ ಹಾಡು, ಭಾಷಣ, ಕಥಾಪ್ರಸಂಗ ಸ್ಪರ್ಧೆ ನಡೆಯಿತು. ಬಹು ಯಾಸಿರ್ ಅರಾಫತ್ ಕೌಸರಿ ಉಸ್ತಾದರು ಪ್ರವಾದಿಯವರ ವ್ಯಕ್ತಿತ್ವ ಮತ್ತು ಆದರ್ಶಗಳ ಬಗ್ಗೆ ಹಿತವಚನ ನೀಡಿದರು. ವೇದಿಕೆಯಲ್ಲಿ ಹಾಜಿ ಎಂ ಎಂ ಯೂಸುಫ್ ಮುಸ್ಲಿಯಾರ್, ಇಬ್ರಾಹಿಂ ಅತ್ತಿಕರಮಜಲು, ಕಮೀಟಿ ಸದಸ್ಯರುಗಳು, ಮಿನ್ನತುಲ್ ಹುದಾ ಯಂಗ್ ಗೈಸ್ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ  ಕೊನೆಯಲ್ಲಿ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ನಂತರ ಸೀರಣಿ ವಿತರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.