ಗುತ್ತಿಗಾರು: ಪ್ರಥಮ ಹಂತದ ಗ್ರಾಮ ಸಭೆ

Advt_Headding_Middle

 

ಗುತ್ತಿಗಾರು ಗ್ರಾ.ಪಂ. ನ ಗುತ್ತಿಗಾರು ಮತ್ತು ನಾಲ್ಕೂರು ಗ್ರಾಮದ ಪ್ರಥಮ ಹಂತದ ಗ್ರಾಮ ಸಭೆ ಗ್ರಾ.ಪಂ. ನ ಪ.ವರ್ಗದ ಸಭಾಭವನದಲ್ಲಿ ಇಂದು ನಡೆಯಿತು.

ಗ್ರಾಮ ಸಭೆಯಲ್ಲಿ 2023 ರ ಮೊದಲು ಜಲಜೀವನ್ ಯೋಜನೆಯಡಿನಲ್ಲಿ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಅಗತ್ಯ ಇರುವವರು ಮಾಹಿತಿ ನೀಡಲು, ಬಳಕ್ಕದಲ್ಲಿರುವ ಕುಡಿಯುವ ನೀರಿನ ವ್ಯವಸ್ಥೆಗೆ, ಗುತ್ತಿಗಾರಿನ ಸಾರ್ವಜನಿಕ ಬಸ್ ತಂಗುದಾಣದಲ್ಲಿ ಕೆಲವರು ಮಲಗುವ ಕಾರಣ ಸಾರ್ವಜನಿಕರಿಗೆ ತೊಂದರೆ ಕೊಡುವ ಬಗ್ಗೆ, ಮನುಷ್ಯ ಮಾಡಿದ ಕೆಲಸವನ್ನು ಜೆಸಿಬಿ ಮುಖಾಂತರ ಮಾಡಿರುವ ರಿಪೋರ್ಟ್ ಮಾಡಿರುವ ಬಗ್ಗೆ ಚರ್ಚೆಗಳಾದವು. ಗ್ರಾಮ ಲೆಕ್ಕಾಧಿಕಾರಿಗಳ ಕೊರತೆಯ ಬಗ್ಗೆ ಚರ್ಚೆಗಳಾಯಿತು.


ಗ್ರಾಮ ಸಭೆಯ ಅಧ್ಯಕ್ಷತೆಯನ್ನು ರೇವತಿ ಆಚಳ್ಳಿ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಸುಳ್ಯ ತಾಲೂಕು ಹಿರಿಯ ಸಹಾಯಕ ನಿರ್ದೇಶಕರಾದ ಸುಹಾನ ಇದ್ದರು.

ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪ್ರಮೀಳಾ ಎರ್ದಡ, ಸದಸ್ಯರುಗಳಾದ ವೆಂಕಟ್ ವಳಲಂಬೆ, ವಿಜಯಕುಮಾರ್ ಚಾರ್ಮತ, ಶಾರದ ಎಂ.ಕೆ., ಮಂಜುಳಾ ಮುತ್ಲಾಜೆ, ಮಾಯಿಲಪ್ಪ ಕೊಂಬೊಟ್ಟು, ಅನಿತಾ ಕುಮಾರಿ, ಹರೀಶ ಕೊಯಿಲ, ಲತಾಕುಮಾರಿ ಆಜಡ್ಕ, ಲೀಲಾವತಿ ಅಂಜೇರಿ, ಭಾರತಿ ಸಾಲ್ತಾಡಿ, ವಿನಯ ಸಾಲ್ತಾಡಿ, ಸುಮಿತ್ರಾ ಮೂಕಮಲೆ, ಜಗದೀಶ ಬಾಕಿಲ, ವಸಂತ ಮೊಗ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಡಾ.ಚೈತ್ರಭಾನು, ಸುಬ್ರಹ್ಮಣ್ಯ ಠಾಣೆಯ ಎ.ಎಸ್.ಐ. ಮೋಹನ ಕೆ., ಅರಣ್ಯ ಇಲಾಖೆಯ ಧನಂಜಯ ಕೆ., ಕೃಷಿ ಇಲಾಖೆಯ ದಾಮೋದರ ಪಿ., ಶಿಕ್ಷಣ ಇಲಾಖೆಯ ಸಿ.ಆರ್. ಪಿ. ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಮಧು ಕೆ., ಮೆಸ್ಕಾಂನ ಲೋಕೇಶ್ ಎಣ್ಣೆಮಜಲು, ಪಶು ಚಿಕಿತ್ಸಾಲಯದ ಡಾ. ವೆಂಕಟಾಚಲಪತಿ ಜೆ.ಎನ್., ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರವಿಶ್ರೀ ಇಲಾಖಾವಾರು ಮಾಹಿತಿ ನೀಡಿದರು. ಶಾರದ ಎಂ.ಕೆ. ಸ್ವಾಗತಿಸಿ, ವೆಂಕಟ್ ವಳಲಂಬೆ ಪ್ರಸ್ತಾವಿಕ ಮಾತನಾಡಿದರು. ವಾರ್ಡ್ ಸಭೆಯ ಬೇಡಿಕೆಯ ಪಟ್ಟಿಯನ್ನು ಸಿಬ್ಬಂದಿ ಚೋಮಯ್ಯ ವಾಚಿಸಿದರು. ಗ್ರಾ.ಪಂ. ಸಿಬ್ಬಂದಿ ಅನಿತಾ ವರದಿ ವಾಚಿಸಿದರು. ಸಿಬ್ಬಂದಿ ತೇಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.