ಬಾಂಗ್ಲಾದೇಶದಲ್ಲಿ ಹಿಂದು ದೇವಸ್ಥಾನ ದ್ವಂಸ ಹಿನ್ನಲೆ

Advt_Headding_Middle

 

ಸುಳ್ಯದಲ್ಲಿ ಹಿಂದು ಜಾಗರಣ ವೇದಿಕೆ ಪ್ರತಿಭಟನೆ

 

ಬಾಂಗ್ಲಾದೇಶದಲ್ಲಿ ಹಿಂದು ದೇವಸ್ಥಾನ ದ್ವಂಸ, ಹಿಂದು ಹೆಣ್ಣು ಮಕ್ಕಳು ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಸುಳ್ಯ ತಾಲೂಕು ಕಚೇರಿ ಎದುರು ಹಿಂದು ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಪುತ್ತೂರು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತ ಮನ್ಮಥ ಶೆಟ್ಟಿ ಪುತ್ತೂರು ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ದ ನಡೆಯುತ್ತಿರುವ ಎಲ್ಲಾ ರೀತಿಯ ಹಿಂಸೆಗಳು ಖಂಡನೀಯ. ಇದನ್ನು ನಿಲ್ಲಿಸಲು ಭಾರತ ಸರ್ಕಾರ ಅಲ್ಲಿನ ಸರಕಾರದ ಮೇಲೆ ಒತ್ತಡ ತರಬೇಕು. ಬಾಂಗ್ಲಕ್ಕೆ ನಿಯೋಗವೊಂದನ್ನು ಕಳುಹಿಸಿ ಅಲ್ಲಿನ ಹಿಂದೂಗಳ ಪರಿಸ್ಥಿತಿ ಬಗ್ಗೆ ತಿಳಿದು ಸಮಸ್ಯೆಗಳ ಬಗೆ ಹರಿಸಿ, ಹಿಂದೂಗಳ ರಕ್ಷಣೆ ಮಾಡಬೇಕು ಎಂದು ಹೇಳಿದರು.

 

ವೇದಿಕೆಯ ತಾಲೂಕು ಅಧ್ಯಕ್ಷ ಮಹೇಶ್ ಉಗ್ರಾಣಿಮನೆ ಮನವಿ‌ ವಾಚಿಸಿದರು.
ಪ್ರಮುಖರಾದ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಪಿ.ಕೆ.ಉಮೇಶ್, ದಾಮೋದರ ಮಂಚಿ, ಸುರೇಶ್ ಕಣೆಮರಡ್ಕ, ಮಹೇಶ್ ರೈ ಮೇನಾಲ, ಚಂದ್ರಜಿತ್ ಮಾವಂಜಿ, ಅಶೋಕ್ ಅಡ್ಕಾರ್, ದೇವಿಪ್ರಸಾದ್ ಅತ್ಯಾಡಿ, ಪ್ರಕಾಶ್ ಯಾದವ್, ಜಯಂತ್ ಮಡಪ್ಪಾಡಿ, ಬೂಡು ರಾಧಾಕೃಷ್ಣ ರೈ, ಗುರುಸ್ವಾಮಿ, ಅಭಿಷೇಕ್ ತೊಡಿಕಾನ, ಪ್ರಶಾಂತ್ ಕಾಯರ್ತೋಡಿ, ವಿನಯ ನಾರಾಲು ಮೊದಲಾದವರು ಇದ್ದರು. ರಮೇಶ್ ಇರಂತಮಜಲು ಕಾರ್ಯಕ್ರಮ ನಿರೂಪಿಸಿದರು.

ಬಳಿಕ ತಹಶೀಲ್ದಾರ್ ಕು.ಅನಿತಾಲಕ್ಷ್ಮೀಯವರಿಗೆ ಮನವಿ ಸಲ್ಲಿಸಲಾಯಿತು
ನಿಕೇಶ್ ಉಬರಡ್ಕ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.