ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನಕ್ಕೆ ಯೋಜನೆ

Advt_Headding_Middle

 

ಅ.27 ಮತ್ತು 28 ರಂದು ಸೇವಾಭಾರತಿಯಿಂದ ಸುಳ್ಯದಲ್ಲಿ ತರಬೇತಿ

ಬೆನ್ನುಮೂಳೆ ಮುರಿತಕ್ಕೊಳ ಗಾಗಿರುವವರ ಪುನಶ್ಚೇತನಕ್ಕಾಗಿ ಬೆಳ್ತಂಗಡಿಯ ಕನ್ಯಾಡಿಯಲ್ಲಿರುವ ಸೇವಾಭಾರತಿ ಸಂಸ್ಥೆ ವಿಶಿಷ್ಟ ಕಾರ್ಯಕ್ರಮಗಳನ್ನು ಹಾಕಿಕೊಂಡು ಅವರು ಸ್ವಾವಲಂಬಿಯಾಗಿ ಬದುಕುವ ನಿಟ್ಟಿನಲ್ಲಿ ತರಬೇತಿಯನ್ನು ನೀಡುತ್ತಿದ್ದು, ಸುಳ್ಯದಲ್ಲಿ ಅ.೨೭ ಮತ್ತು ೨೮ರಂದು ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಸೇವಾಭಾರತಿಯ ಅಧ್ಯಕ್ಷ ಕೆ.ವಿನಾಯಕ ರಾವ್ ತಿಳಿಸಿದ್ದಾರೆ.
ಇಂದು ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, `’ಸೇವಾಭಾರತಿಯು ಕಳೆದ ೧೬ ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ವಿವಿಧ ಆಯಾಮದಲ್ಲಿ ತೊಡಗಿಸಿಕೊಂಡಿದೆ. ಬೆನ್ನುಮೂಳೆ ಮುರಿತಕ್ಕೊಳಗಾದ ದಿವ್ಯಾಂಗರನ್ನು ಗುರುತಿಸಿ ಅವರಿಗೆ ಪುನಶ್ಚೇತನಗೊಳಿಸುವುದು, ಒತ್ತಡಗಳ ನಿರ್ವಹಣೆ, ಅವರಿಗೆ ಸೂಕ್ತ ಸಾಧನ ಒದಗಿಸುವುದು. ಶೌಚಾಲಯದ ವ್ಯವಸ್ಥೆ ಮತ್ತು ರ್‍ಯಾಂಪ್‌ಗಳನ್ನು ನಿರ್ಮಿಸುವುದು. ಸರಕಾರ ಯೋಜನೆಗಳ ಬಗ್ಗೆ ಮಾಹಿತಿ ಅರಿವು, ಅಲ್ಲದೆ ಸ್ವಾವಲಂಬಿ ಬದುಕಿಗಾಗಿ ಪ್ರಯತ್ನಿಸುವುದು ನಮ್ಮ ಸೇವಾಧಾಮದ ಉzಶ. ಸೇವಾಧಾಮದಲ್ಲಿ ೧೦ ಬೆಡ್ ಗಳಿದ್ದು ಚಿಕಿತ್ಸೆ ನೀಡಲು ಸೂಕ್ತ ತಂಡವಿದೆ.

ಕಾಲಕಾಲಕ್ಕೆ ಆಯಾಯಾ ಪ್ರದೇಶಗಳಿಗನುಗುಣವಾಗಿ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಶಿಬಿರಗಳನ್ನು ಸಂಸ್ಥೆ ನಡೆಸುತ್ತಿದ್ದು, ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅ.೨೭ ಮತ್ತು ೨೮ರಂದು ಎರಡು ದಿನ ತರಬೇತಿ ನಡೆಯುವುದು. ತಾಲೂಕಿನಲ್ಲಿ ನಮ್ಮ ಸಿಬ್ಬಂದಿಗಳು ಸುತ್ತಾಡಿ ಈಗಾಗಲೇ ೨೫ ಮಂದಿ ಬೆನ್ನುಮೂಳೆ ಮುರಿತಕ್ಕೊಳಗಾಗಿರುವವರನ್ನು ಗುರುತಿಸಲಾಗಿದೆ. ಅವರೆಲ್ಲರನ್ನು ತರಬೇತಿಗೆ ಕರೆದುಕೊಂಡು, ವ್ಯಾಯಾಮ, ವೀಲ್ ಚಯರ್ ಬಳಸುವುದು, ಅವರ ಅರೋಗ್ಯ ತಪಾಸಣೆ ಹಾಗೂ ಸ್ವಾವಲಂಬಿ ಬದುಕಿನ ತರಬೇತಿ ನೀಡಲಾಗುವುದು. ಸುಳ್ಯದಲ್ಲಿ ನಡೆಯುವ ಶಿಬಿರಕ್ಕೆ ಸುಳ್ಯ ರೋಟರಿ ಕ್ಲಬ್, ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಸುಳ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುಳ್ಯ, ನ.ಪಂ. ಸುಳ್ಯ, ಕರ್ನಾಟಕ ಪ್ಲೈವುಡ್ ಸುಳ್ಯ, ಕೆನರಾ ಸ್ಪೈನ್ ಪೋರಂ ಮಂಗಳೂರು, ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಲಯನ್ಸ್ ಕ್ಲಬ್ ಸುಳ್ಯ, ಕೆ.ವಿ.ಜಿ. ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇವರು ಸಹಕಾರ ನೀಡಲಿದ್ದಾರೆ ಎಂದು ವಿನಾಯಕ ರಾವ್ ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.