ತ್ಯಾಜ್ಯ ಎಸೆದವರನ್ನು ತೋರಿಸಿ ಕೊಡಿ – 500 ರೂ ಬಹುಮಾನ ಗೆಲ್ಲಿ

Advt_Headding_Middle

 

ಸ್ವಚ್ಚ ಗ್ರಾಮ ಕಲ್ಪನೆ : ಮಂಡೆಕೋಲು ಗ್ರಾ.ಪಂ. ಹೊಸ ಹೆಜ್ಜೆ

ಗ್ರಾಮ ವ್ಯಾಪ್ತಿಯ ಕೆಲವೆಡೆ ತ್ಯಾಜ್ಯ ಎಸೆಯುವ ದೂರು ಪಂಚಾಯತ್ ಗೆ ಆಗಾಗ್ಗೆ ಬರುತ್ತಿದ್ದು ಇದನ್ನು ತಡೆಯಲು ಮಂಡೆಕೋಲು ಗ್ರಾ.ಪಂ.‌ಹೊಸ ಹೆಜ್ಜೆ ಇಟ್ಟಿದೆ. ಸ್ವಚ್ಚ ಗ್ರಾಮ ಕಲ್ಪನೆಯಡಿಯಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ನಿಷೇಧ ಮಾಡಲಾಗಿದ್ದು, ತ್ಯಾಜ್ಯ ಎಸೆದವರನ್ನು ತೋರಿಸಿ ಕೊಟ್ಟರೆ ರೂ.500 ಬಹುಮಾನ ಘೋಷಿಸಿದೆ.

ಮಂಡೆಕೋಲಿನ ಪೇರಾಲು, ಡೆಂಜಿಗುರಿ, ಕನ್ಯಾನ, ಮುರೂರು ಮತ್ತಿತರ ಭಾಗದಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ‌ ಗ್ರಾ.ಪಂ.ಗೆ ದೂರು‌ಬರುತ್ತಿತ್ತು. ಈ ಬಗ್ಗೆ ಕಳೆದ ಪಂಚಾಯತ್ ಸಾಮಾನ್ಯ ಸಭೆಯಲ್ಲಿ‌ ಚರ್ಚೆ ನಡೆದು ಕಸ ಎಸೆದವರಿಗೆ ರೂ.1000 ದಂಡ ಹಾಗೂ ತ್ಯಾಜ್ಯ ಎಸೆದವರನ್ನು‌ ತೋರಿಸಿಕೊಟ್ಟವರಿಗೆ ಪಂಚಾಯತ್ ವತಿಯಿಂದ ರೂ.500 ಬಹುಮಾನ ನೀಡಲು ಸಭೆ ನಿರ್ಣಯ ಕೈಗೊಂಡಿದೆ.
ಅದರಂತೆ ಗ್ರಾಮದ ಕೆಲವೆಡೆಯಲ್ಲಿ ಎಚ್ಚರಿಕೆಯ ನಾಮಫಲಕ ಅಳವಡಿಸಲಾಗಿದೆ.

“ಪಂಚಾಯತ್ ಗೆ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ದೂರು ಬರುತ್ತಿತ್ತು. ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗಿದೆ. ತ್ಯಾಜ್ಯ ಎಸೆದವರನ್ನು ತೋರಿಸಿ ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.