ಕ.ಸಾ.ಪ. ಬೈಲಾಕ್ಕೆ ಸಮಗ್ರ ತಿದ್ದುಪಡಿ ಮತ್ತು ಪ್ರತಿ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣ : ಶೇಖರ ಗೌಡ ಮಾಲಿ ಪಾಟೀಲ ಪ್ರಣಾಳಿಕೆ

Advt_Headding_Middle

” ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಕ.ಸಾ.ಪ.ದ ಬೈಲಾವನ್ನು ಸಮಗ್ರ ತಿದ್ದುಪಡಿ ಮಾಡುವ, ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಿಸುವ ಹಾಗೂ ಕ.ಸಾ.ಪ. ವತಿಯಿಂದ ಮಾದರಿ ಕನ್ನಡ ಶಾಲೆಗಳನ್ನು ತೆರೆಯುವ ಯೋಜನೆ ಹಮ್ಮಿಕೊಳ್ಳುವುದಾಗಿ” ಕ.ಸಾ.ಪ. ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರ ಗೌಡ ಮಾಲಿ ಪಾಟೀಲ ಹೇಳಿದ್ದಾರೆ.
ಅ.21 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
” ಕಳೆದ ಮೇ ತಿಂಗಳಲ್ಲಿ ಕಸಾಪ ಚುನಾವಣೆಗೆ ಕೇವಲ 13 ದಿನಗಳಿರುವಾಗ ಕೋವಿಡ್ ಕಾರಣಕ್ಕಾಗಿ ಚುನಾವಣೆ ಮುಂದೂಡಲ್ಪಟ್ಟಿತ್ತು. ಆ ಬಳಿಕ ಇತರ ಚುನಾವಣೆಗಳು ನಡೆಯತೊಡಗಿದರೂ ಕ.ಸಾ.ಪ. ಚುನಾವಣೆಯ ಬಗ್ಗೆ ಕ್ರಮ ಜರುಗದೇ ಇದ್ದಾಗ ನನ್ನ ಮಗ ಅವಿನಾಶ್ ಶೇಖರ ಗೌಡ ಮಾಲಿ ಪಾಟೀಲ ಧಾರವಾಡ ಹೈಕೋರ್ಟ್ ಗೆ ಹೋಗಿ 2 ತಿಂಗಳಲ್ಲಿ ಚುನಾವಣೆ ನಡೆಸಬೇಕೆಂಬ ತೀರ್ಪು ಬರುವಂತೆ ಮಾಡಿದರು. ಅದರಂತೆ ನವೆಂಬರ್ 21ಕ್ಕೆ ಚುನಾವಣೆ ಘೋಷಿಸಲ್ಪಟ್ಟಿದೆ ” ಎಂದ ಶೇಖರಗೌಡ ಮಾಲಿಪಾಟೀಲರು ” ನಾನು ರಾಜ್ಯಾದ್ಯಂತ ತಿರುಗಾಟ ನಡೆಸುತ್ತಿದ್ದು ಜನ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಇದೆ. ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಮೂಡಿದೆ ” ಎಂದರು.
” ನಾನು ರಾಯಚೂರು ಜಿಲ್ಲಾ ಕಸಾಪ ಅಧ್ಯಕ್ಷನಾಗಿ 2 ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಗಂಗಾವತಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿ ಅದರಲ್ಲಿ 50 ಲಕ್ಷ ರೂ. ಉಳಿಸಿ 5 ಕಡೆ ಕನ್ನಡ ಭವನ ನಿರ್ಮಿಸಿದ್ದೇವೆ ” ಎಂದು ಹೇಳಿದ ಮಾಲಿ ಪಾಟೀಲರು ” ಪರಿಷತ್ತಿನ ತಾಲ್ಲೂಕು ಘಟಕಗಳಿಗೆ ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ಮಾಡುವುದು ಸೇರಿದಂತೆ ಸಮಗ್ರ ಬೈಲಾ ತಿದ್ದುಪಡಿ ಕುರಿತು ಅಧ್ಯಯನ ಸಮಿತಿ ರಚಿಸಲಾಗುವುದು, ಕ.ಸಾ.ಪ. ವತಿಯಿಂದ ಮಾದರಿ ಕನ್ನಡ ಶಾಲೆ ಸ್ಥಾಪಿಸುವ ಚಿಂತನೆ ಇದೆ. ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನಗಳ ನಿರ್ಮಾಣ, ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ವಿವಿಧ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ ಆಯೋಜನೆ, ಯುವ ಬರಹಗಾರರ ಕಮ್ಮಟ ಗಳ ಏರ್ಪಾಟು, ವಚನ ಸಾಹಿತ್ಯ, ದಾಸ ಸಾಹಿತ್ಯ, ಶಿಕ್ಷಕರ ಸಾಹಿತ್ಯ ಸಮ್ಮೇಳನ, ಕನ್ನಡ ಪರ ಚಿಂತನಾ ಸಮಾವೇಶ, ಪುಸ್ತಕಗಳ ಪ್ರಕಟಣೆ ಈ ಮೊದಲಾದ ಚಿಂತನೆಗಳಿವೆ ” ಎಂದು ಅವರು ಹೇಳಿದರು.
ಸುಳ್ಯದಲ್ಲಿ ಸಾಹಿತ್ಯ ಕಮ್ಮಟ
” ನಾನು ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಸುಳ್ಯದಲ್ಲಿ ಯುವ ಬರಹಗಾರರಿಗೆ ಸಾಹಿತ್ಯ ಕಮ್ಮಟ ಆಯೋಜನೆ ಮಾಡುವುದಾಗಿ” ಅವರು ಘೋಷಣೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಹಕಾರಿ ಧುರೀಣ ಚಂದ್ರಾ ಕೋಲ್ಚಾರ್ ಅವರು ” ಶೇಖರ್ ಗೌಡ ಮಾಲಿ ಪಾಟೀಲ್ ರವರು ಸಾಹಿತಿಯಾಗಿ, ಸಂಘಟಕರಾಗಿ, ಕಸಾಪದಲ್ಲಿ ಕೆಲಸ ಮಾಡಿದವರಾಗಿ ಅನುಭವ ಹೊಂದಿದವರು. ಅವರಿಗೆ ಸುಳ್ಯ ತಾಲೂಕಿನ ಎಲ್ಲಾ ಕ.ಸಾ.ಪ. ಸದಸ್ಯರ ಬೆಂಬಲ ಬೇಕು. ದ.ಕ. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ.ಎಂ.ಪಿ. ಶ್ರೀನಾಥ್ ಅವರಿಗೆ ನಾವು ಬೆಂಬಲ ಸೂಚಿಸೋಣ” ಎಂದು ಹೇಳಿದರು. ವೆಂಕಟ್ರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ವಂದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್ ಜಿ ಹಳ್ಳಿ ನಾಗರಾಜ್, ಶಿವಕುಮಾರ್ ಎನ್, ಪಿ. ಎಸ್. ಗಂಗಾಧರ್, ಭೀಮರಾವ್ ವಾಸ್ಟರ್, ನಂದರಾಜ ಸಂಕೇಶ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.