ಐವರ್ನಾಡು : ಸಂಪೂರ್ಣ ಡಾಮರು ಕಿತ್ತುಹೋದ ಪರ್ಲಿಕಜೆ, ಕೊಚ್ಚಿ ರಸ್ತೆ – ವಾಹನ ಸವಾರರಿಗೆ ಸಂಕಷ್ಟ

Advt_Headding_Middle

 

ಐವರ್ನಾಡು ಗ್ರಾಮದ ಪರ್ಲಿಕಜೆ ,ನಿಡುಬೆ,ಜಬಳೆ,ಕೊಚ್ಚಿ ರಸ್ತೆಯು ಅಲ್ಲಲ್ಲಿ ಡಾಮರು ಸಂಪೂರ್ಣ ಕಿತ್ತು ಹೋಗಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ.
ಈ ರಸ್ತೆಯು ಪರ್ಲಿಕಜೆ ನಿಡುಬೆ ಕೊಚ್ಚಿ ಪ್ರದೇಶಗಳಿಗೆ ಮಾತ್ರವಲ್ಲದೆ ಪುತ್ತೂರು ತಾಲೂಕನ್ನು ಕೂಡ ಸಂಪರ್ಕಿಸುವ ರಸ್ತೆಯಾಗಿದೆ.
ದುಗ್ಗಲ ,ಮಾವಿನಕಟ್ಟೆ ಕಲ್ಲರ್ಪೆ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುತ್ತದೆ.
ಈ ಭಾಗದಲ್ಲಿ ಹಲವಾರು ಮನೆಗಳಿದ್ದು ಸಿ.ಆರ್.ಸಿ.ಕಾಲನಿಗಳು, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸುಮಾರು 200 ಕ್ಕಿಂತಲೂ ಹೆಚ್ಚು ಮನೆ ಇದೆ.
ಶಾಲಾ ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ರಸ್ತೆ ಸರಿಯಿಲ್ಲದೆ ತುಂಬಾ ತೊಂದರೆಯಾಗುತ್ತಿದೆ.
ಪುತ್ತೂರು ತಾಲೂಕನ್ನು ಸಂಪರ್ಕಿಸುವ ರಸ್ತೆಯಾದುದರಿಂದ ಅಭಿವೃದ್ಧಿ ಯಾಗಬೇಕಿದೆ.
ರಸ್ತೆ ಅಭಿವೃದ್ಧಿ ಆದರೆ ಎರಡು ತಾಲೂಕಿನ ಭಾಗದ ಜನರಿಗೆ ಅನುಕೂಲವಾಗಲಿದೆ.

ಸಚಿವರಿಗೆ ಮನವಿ : ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ ಸುಳ್ಯ ಸಚಿವರಿಗೆ ಗ್ರಾಮಸ್ಥರು ಮನವಿ ನೀಡಿದ್ದು ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಧಾನಿ ಕಚೇರಿಗೆ ಪತ್ರ : ಎರಡು ತಾಲೂಕನ್ನು ಬೆಸೆಯುವ ಈ ರಸ್ತೆಗೆ ಡಾಮರು ಅಥವಾ ಕಾಂಕ್ರೆಟ್ ಮಾಡಬೇಕೆಂದು ಪ್ರಧಾನಿ ಕಾರ್ಯಾಲಯದ ಕದ ತಟ್ಟಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಸುಮಾರು 17 ವರ್ಷಗಳ ಹಿಂದೆ 1 ಕಿ.ಮಿ. ರಸ್ತೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಡಾಮರೀಕರಣವಾಗಿತ್ತು.
ಆ ಬಳಿಕ ನವೀಕರಣ ನಡೆದಿಲ್ಲ.
ಕೊಚ್ಚಿ ರಸ್ತೆ ಈಗ ಕಚ್ಛಾ ರಸ್ತೆಯಾಗಿಯೆ ಉಳಿದಿದೆ.
ಜನಪ್ರತಿನಿಧಿಗಳು ಇಲಾಖಾಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ರಸ್ತೆಯನ್ನು ಡಾಮರೀಕರಣ ಅಥವಾ ಕಾಂಕ್ರೀಟೀಕರಣ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಬೇಕೆಂದು ಗ್ರಾಮಸ್ಥರು ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.