ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮ

Advt_Headding_Middle

 

 

ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ವಕೀಲರ ಸಂಘ ಸುಳ್ಯ, ಪೊಲೀಸ್ ಇಲಾಖೆ ಸುಳ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ, ಪಂಜ ಗ್ರಾಮ ಪಂಚಾಯತ್, ಸುದ್ದಿ ಸಮೂಹ ಮಾಧ್ಯಮ ಸುಳ್ಯ ಇದರ ಸಹಭಾಗಿತ್ವದಲ್ಲಿ 75ನೇ ವರ್ಷದ ಸ್ವಾತಂತ್ರ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಇಂದು ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ ಎ ದೀಪ ಬೆಳಗಿಸಿ ಉದ್ಘಾಟಿಸಿ ಪ್ರಾಸ್ತಾವಿಕ ಮಾತನಾಡಿ ಅಕ್ಟೋಬರ್ 2ರಿಂದ ನವಂಬರ್ 14 ರ ತನಕ ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆಯಲಿರುವ ಕಾನೂನು ಅರಿವು ಕಾರ್ಯಕ್ರಮದ ಅಂಗವಾಗಿ ಇಂದು ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಿಂದೂಗಳಲ್ಲಿ ವಾರಸ ಮತ್ತು ಉತ್ತರಾಧಿಕಾರ ಎಂಬ ವಿಷಯದ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ ಕಾನೂನಿನ ಅಡಿಯಲ್ಲಿ ಬಹಳ ಮುಖ್ಯವಾಗಿ ಅತ್ಯಂತ ಮಹತ್ವವಾದ ವಾರಸ ಮತ್ತು ಉತ್ತರಾಧಿಕಾರದ ಮಾಹಿತಿ ಲಭಿಸಲಿದ್ದು ಇದರ ಸದುಪಯೋಗಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪಗೌಡ ವಹಿಸಿದ್ದರು. ಗೌರವ ಉಪಸ್ಥಿತರಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಕೀಲರಾದ ಕೇಶವ ಭಟ್ ಹಿಂದೂಗಳಲ್ಲಿ ವಾರಸ ಮತ್ತು ಉತ್ತರಾಧಿಕಾರದ ವಿಷಯದ ಕುರಿತು ಮಾತನಾಡಿ ಈ ವಿಷಯವು ನ್ಯಾಯಾಲಯದಲ್ಲಿ ಅತ್ಯಂತ ಸಮಯವನ್ನು ಪಡೆದುಕೊಳ್ಳುವ ಹಾಗೂ ಅತ್ಯಂತ ವಿಶಾಲವಾದ ಚರ್ಚೆಗೆ ಗ್ರಾಸವಾಗುವ ಸಂಗತಿಯಾಗಿದ್ದು,ಈ ವಿಷಯಗಳು ಬಹಳ ದೀರ್ಘವಾಗಿ 30 ಅಥವಾ ನಲವತ್ತು ವರ್ಷಗಳು ಅದಕ್ಕಿಂತಲೂ ಹೆಚ್ಚು ಕಾಲ ನ್ಯಾಯಾಲಯದಲ್ಲಿ ವಾದ ವಿವಾದ ನಡೆದ ಘಟನೆಗಳು ಇದೆ. ಆದುದರಿಂದ ಜಮೀನಿನ ಮತ್ತು ಆಸ್ತಿಪಾಸ್ತಿ ವಿಷಯದಲ್ಲಿ ಆದಷ್ಟು ರಾಜಿ ಪಂಚಾಯಿತಿ ಮೂಲಕ ಮುಗಿಸಿಕೊಳ್ಳುವುದು ಉತ್ತಮ ಎಂದರು.ಹಾಗೂ ಇದರ ನಿಯಮಗಳನ್ನು, ಪಾಲು ಹಂಚಿಕೆ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯ ನಿವಾಸಿಗಳು ಆಸ್ತಿ ವಿವಾದ ಗಳಿಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಮಾಹಿತಿಯನ್ನು ಕೇಳಿ ಪಡೆದುಕೊಂಡರು.
ವೇದಿಕೆಯಲ್ಲಿ ಸುಳ್ಯ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಬಿ ಜನಾರ್ಧನ್, ಸುಬ್ರಮಣ್ಯ ಪೊಲೀಸ್ ಠಾಣಾ ಎ ಎಸ್ ಐ ಕರುಣಾಕರ,ಪಂಜ ಗ್ರಾಮ ಪಂಚಾಯತ್ ಪಿಡಿಓ ಕೀರ್ತಿಪ್ರಸಾದ್, ನ್ಯಾಯವಾದಿಗಳಾದ ಬೊಳ್ಳಪ್ಪ ಎಂ ಎಂ, ನಾರಾಯಣ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಪದ್ಮಯ್ಯ ಕಾರ್ಯಕ್ರಮ ನಿರೂಪಿಸಿ ವಕೀಲರಾದ ದಿಲೀಪ್ ಬಾಬ್ಲು ಬೆಟ್ಟು ಸ್ವಾಗತಿಸಿ ಪಿ ಡಿ ಓ ವಂದಿಸಿದರು.
ಗ್ರಾಮ ಪಂಚಾಯತ್ ಕಚೇರಿ ಸಿಬ್ಬಂದಿಗಳಾದ ಬಾಬು, ಗೀತಾ, ತಾರನಾಥ ಬಿ, ಪ್ರದೀಪ್ ರಾಜ್, ಗುಲಾಬಿ, ಚಿತ್ರಕಲಾ, ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ, ಸುಳ್ಯ ನ್ಯಾಯಾಲಯದ ಸಿಬ್ಬಂದಿ ಲಾವಣ್ಯ, ರಕ್ಷಿತಾ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.